Shree Maruthi Matha

Shree Maruthi Matha

ಶ್ರೀ ಮಾರುತಿ ಮಠ

Average Reviews

Description

ಶ್ರೀ ಮಾರುತಿ ಮಠ, ತೇರದಾಳ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೇರದಾಳ ಗ್ರಾಮವುತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿಸುಮಾರು 35 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀ ಮಾರುತಿ ಮಠವು ಅಸ್ತಿತ್ವದಲ್ಲಿದ್ದುಇಲ್ಲಿ ಪ್ರಮುಖವಾಗಿ ಹನುಮಾನ್ ದೇವರ ಪೂಜಾ ಕಾರ್ಯಗಳೊಂದಿಗೆ ಸಾಮಾಜಿಕವಾಗಿ,ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಪೂಜ್ಯ ಶ್ರೀ ಶಿವಲಿಂಗಯ್ಯ ಸ್ವಾಮಿಗಳು ಶರಣಸ್ಥಲದ ಸ್ವಾಮಿಗಳಾಗಿದು ಕೂಡಆಧ್ಯಾತ್ಮಿಕತೆಯ ಕಡೆಗೆ ಒಲವು ಮೂಡಿಸಿಕೊಂಡವರು. ಶ್ರೀಗಳು 35 ವರ್ಷಗಳ ಹಿಂದೆ ತಮ್ಮ40ನೇ ವಯಸ್ಸಿನಲ್ಲಿಯೇ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಬಂದವರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಧಾರ್ಮಿಕ ಆಚರಣೆಗಳ ಮಹತ್ವದ ಬಗ್ಗೆಅರಿವು ಮೂಡಿಸುತ್ತಾ ಅವರಲ್ಲಿ ಆಧ್ಯಾತ್ಮಿಕತೆಯ ಹಸಿವನ್ನು ಹೆಚ್ಚಿಸುತ್ತಾ ಶ್ರೀಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಪ್ರತಿ ಹುಣ್ಣಿಮೆ,ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ, ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆಮುಂತಾದ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀ ಮಠದ ಜಾತ್ರೆಯು (ಶ್ರೀಹನುಮಾನ್ ಜಾತ್ರೆ) ಪ್ರತಿ ವರ್ಷ ಕಾರದ ಹುಣ್ಣಿಮೆಯಲ್ಲಿ ಆಯೋಜನೆಗೊಳ್ಳುತ್ತಿದ್ದು ಅಪಾರಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಮಾರುತಿಯ ಆಶೀರ್ವಾದಕ್ಕೆಪಾತ್ರರಾಗುತ್ತಾರೆ.

Swamiji

Swamiji Name :
ಪೂಜ್ಯ ಶ್ರೀ ಶಿವಲಿಂಗಯ್ಯ ಸ್ವಾಮಿಗಳು
Date of Birth :
6-3-1992
Place :
ತೇರದಾಳ, ಜಮಖಂಡಿ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಕಾರದ ಹುಣ್ಣಿಮೆಗೆ ಶ್ರೀ ಹನುಮಾನ್ ಜಾತ್ರೆ.
ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ, ಗಣೇಶ ಪೂಜೆ ಹಾಗೂ ವಿಶೇಷ ಪೂಜಾಕಾರ್ಯಕ್ರಮಗಳು.

Photos

Full Address Kannada

ಶ್ರೀ ಮಾರುತಿ ಮಠ
ದೇವರಾಜ ನಗರ,
ತೇರದಾಳ - 587 315
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ರಬಕವಿ - 7 ಕಿ.ಮೀ.
ಜಮಖಂಡಿ - 30 ಕಿ.ಮೀ.
ಚಿಕ್ಕೋಡಿ - 60 ಕಿ.ಮೀ.
ಬಾಗಲಕೋಟೆ - 105 ಕಿ.ಮೀ.

Statistic

7 Views
0 Rating
0 Favorite
0 Share
error: Content is protected !!