Shree Marulasiddeshwara Samsthana Hirematha

Shree Marulasiddeshwara Samsthana Hirematha Claimed

ಶ್ರೀ ಮರುಳಸಿದ್ದೇಶ್ವರ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಕಾಶಿ ಶಾಖಾ ಮಠ – ಪುತ್ರವರ್ಗ ಪರಂಪರೆ

ಕರ್ತೃ – ಶ್ರೀ ಮರುಳಸಿದ್ದೇಶ್ವರ ಸಂಸ್ಥಾನ ಹಿರೇಮಠ ಊರ ಒಳಗೆ ಮಠ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಮರುಳಸಿದ್ದೇಶ್ವರ ಸಂಸ್ಥಾನ ಹಿರೇಮಠವು ಶ್ರೀಮದ್ಕಾಶೀ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಸುಮಾರು 12ನೇ ಶತಮಾನದಲ್ಲಿಯೇ ಸ್ಥಾಪಿತಗೊಂಡಿತೆಂದು ಹೇಳಲಾಗಿರುವ ಶ್ರೀಮಠದಸ್ಥಾಪಕರು ಪೂಜ್ಯ ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿಗಳು. ತಮ್ಮ ಪವಾಡಗಳಿಂದ,ತಪೋಬಲದಿಂದ ಹೆಸರಾಗಿದ್ದರೆಂದು ಹೇಳಲಾಗುವ ಶ್ರೀಗಳ ಕುರಿತಾಗಲೀ, ನಂತರದಪರಂಪರೆಯ ಕುರಿತಾಗಲೀ ಸೂಕ್ತ ದಾಖಲೆಗಳು ಲಭ್ಯವಿಲ್ಲ.ಶ್ರೀ ಮಠದ ಪರಂಪರೆಯಲ್ಲಿ ಲಭ್ಯವಿರುವ ಮಾಹಿತಿಗಳ ಆಧಾರದಲ್ಲಿಕರ್ತೃಗುರುಗಳ ನಂತರ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶ್ರೀ ನೀಲಕಂಠಶಿವಾಚಾರ್ಯರು ಹಾಗೂ ಹಿಂದಿನ ಶ್ರೀಗಳಾದ ಲಿಂ|| ಶ್ರೀ. ಷ.ಬ್ರ. ಈಶ್ವರ ಶಿವಾಚಾರ್ಯಮಹಾಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದಿದ್ದಾರೆ. ಇವರುಗಳಲ್ಲಿ ಕರ್ತೃಗುರುಗಳಗದ್ದುಗೆಯು ಶ್ರೀಮಠದಲ್ಲಿದ್ದು, ಶ್ರೀ ನೀಲಕಂಠ ಮಹಾಸ್ವಾಮಿಗಳ ಗದ್ದುಗೆ ಮಠದ ಹೊಲದಲ್ಲಿಹಾಗೂ ಹಿಂದಿನ ಶ್ರೀಗಳ ಗದ್ದುಗೆ ಗ್ರಾಮದ ಈಶ್ವರ ದೇವಸ್ಥಾನದ ಸಮೀಪದಲ್ಲಿರುವುದುಕಂಡುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಈಶ್ವರ ಶಿವಾಚಾರ್ಯ ಮಹಾಸ್ವಾಮಿಗಳಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಶ್ರೀಗಳು ಹೆಸರಾಗಿದ್ದರು. ಸದಾ ಭಕ್ತರ ಶ್ರೇಯೋಭಿವೃದ್ಧಿಗೆಶ್ರಮಿಸಿದ ಶ್ರೀಗಳು 1987ರ ಮೇ 04ರಲ್ಲಿ ಲಿಂಗದೊಳಗಾಗಿದ್ದು ಅದರ ಮಾರನೇ ದಿನವೇಈಗಿನ ಶ್ರೀಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಯಿತು.1987ರಲ್ಲಿಯೇ ಶ್ರೀಮಠದ ಉತ್ತರಾಧಿಕಾರಿಗಳಾದ ಈಗಿನ ಶ್ರೀಗಳು ಹತ್ತುವರ್ಷಗಳ ಕಾಲ ಶ್ರೀಮಠವನ್ನು ಅಭಿವೃದ್ಧಿಗೊಳಿಸಿ ನಂತರ 1997ರ ಮೇ 12 ರಂದುಶ್ರೀ.ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿದರು. ಸ್ನಾತಕೋತ್ತರ ಪದವೀದರರಾದ ಶ್ರೀಗಳು ತಮ್ಮ ಆಧ್ಯಾತ್ಮಚಿಂತನಾ ಆಶೀರ್ವಚನಗಳ ಮೂಲಕ ಸಮಾಜದ ಸಾಮರಸ್ಯಕ್ಕೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿಗೆ ಶ್ರೀ ವಿಶ್ವರಾಧ್ಯರ ಜಯಂತಿಆಚರಿಸುತ್ತಿದ್ದು ಬಸವ ಜಯಂತಿಯಲ್ಲಿ ಈಶ್ವರ ಲಿಂಗದ ಜಾತ್ರೆ ವಿಜೃಂಭಣೆಯಿಂದನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-06-1963
Place :
ಉ.ಖಾನಾಪುರ, ಹುಕ್ಕೇರಿ ತಾ||
Pattadikara :
12-05-1997
Photo :

Programs

ಪ್ರತಿ ಅಮವಾಸೆ, ಹುಣ್ಣಿಮೆಗೆ ವಿಶೇಷ ಪೂಜೆ
ಶಿವರಾತ್ರಿಗೆ ಶ್ರೀ ವಿಶ್ವಾರಾಧ್ಯರ ಜಯಂತಿ ಆಚರಣೆ
ಬಸವ ಜಯಂತಿ ಆಚರಣೆ ಮತ್ತು ಈಶ್ವರ ಲಿಂಗನ ಜಾತ್ರೆ ನಡೆಯುತ್ತದೆ
ಶ್ರಾವಣ ಮಾಸದಲ್ಲಿ ಮಹಾ ರುದ್ರಭಿಷೇಕ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ದಸರದಲ್ಲಿ 11ದಿನಗಳ ಕಾಲ ಪ್ರತಿ ದಿನವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತದೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ

Photos

Full Address Kannada

ಶ್ರೀ ಮರುಳಸಿದ್ದೇಶ್ವರ ಸಂಸ್ಥಾನ ಹಿರೇಮಠ
ಉ.ಖಾನಾಪುರ - 591 302
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಚಿಕ್ಕಲಗುಡ್ಡ - 3 ಕಿ.ಮೀ
ಸಂಕೇಶ್ವರ - 15 ಕಿ.ಮೀ
ಹುಕ್ಕೇರಿ - 25 ಕಿ.ಮೀ
ಬೆಳಗಾವಿ - 35 ಕಿ.ಮೀ

Statistic

4 Views
0 Rating
0 Favorite
0 Share
error: Content is protected !!