Shree Mallikarjun Matha, Somajyala

Shree Mallikarjun Matha, Somajyala Claimed

ಶ್ರೀ ಮಲ್ಲಿಕಾರ್ಜುನ ಮಠ, ಸೋಮಜ್ಯಾಳ

Average Reviews

Description

ಶ್ರೀ ಮಲ್ಲಿಕಾರ್ಜುನ ಮಠ, ಸೋಮಜ್ಯಾಳ

ಕರ್ತೃ – ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

ಸಿಂಧಗಿ ತಾಲ್ಲೂಕಿನ ಸೋಮಜ್ಯಾಳ ಗ್ರಾಮದಲ್ಲಿ ಶ್ರೀ ಷ.ಬ್ರ. ಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳಿಂದ 19ನೇ ಶತಮಾನದ ಅಂತ್ಯಭಾಗದಲ್ಲಿ ಸ್ಥಾಪಿತಗೊಂಡಿರುವಶ್ರೀ ಮಲ್ಲಿಕಾರ್ಜುನ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿದ್ದು ತನ್ನಧಾರ್ಮಿಕ ಆಚರಣೆಗಳಿಂದ ಹಾಗೂ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದಲ್ಲಿ ಪ್ರಸಿದ್ದಿಗೆಬಂದಿದೆ.ಮೂಲತಃ ಗುಲ್ಬರ್ಗ ಜಿˉÉ್ಲಯ ಕಲ್ಲೂರು ಗ್ರಾಮದವರಾದ ಶ್ರೀ ಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮಿಗಳು ಬಾಲ್ಯದಲ್ಲಿ ಆಧ್ಯಾತ್ಮದ ಬಲವನ್ನು ಹೊಂದಿ ತಮ್ಮ ಯೌವ್ವನದಲ್ಲಿಮನೆಯನ್ನು ತೊರೆದು ˉÉೂೀಕಸಂಚಾರಕ್ಕೆ ಹೊರಟರು. ಹೀಗೆ ಸಂಚಾರ ಮಾಡುತ್ತಾಸೋಮಜ್ಯಾಳ ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಇಲ್ಲಿ ಧೀರ್ಘಕಾಲ ಅನುಷ್ಠಾನಗೊಂಡುಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಶ್ರೀಗಳು ಕಾಯಕಯೋಗಿಗಳಾಗಿದ್ದು ಜೊತೆಗೆ ಗ್ರಾಮದ ಜನರನ್ನು ತಮ್ಮ ಧಾರ್ಮಿಕ ಸಭೆಗಳ ಮೂಲಕಜಾಗೃತಗೊಳಿಸಿ 1915ರಲ್ಲಿ ಲಿಂಗೈಕ್ಯರಾಗಿದ್ದಾರೆ.ತದನಂತರ ಶ್ರೀಗಳ ಪರಮಾಪ್ತ ಶಿಷ್ಯರಾಗಿದ್ದ ಶ್ರೀ ಭೀಮರಾಯ ದೇವರುಕೆಲಕಾಲ ಶ್ರೀಮಠದ ಆಡಳಿತ ಕಾರ್ಯವನ್ನು ನಡೆಸಿಕೊಂಡು ಬಂದಿದ್ದು ತರುವಾಯಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆಬಂದಿದ್ದಾರೆ. ಶ್ರೀಗಳು ಶ್ರೀಮಠದ ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿಕೊಂಡುಬಂದು ದೇಗಿನಾಳು ಗ್ರಾಮದಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಮೃತಲಿಂಗ ಶಿವಾಚಾರ್ಯ ಸ್ವಾಮಿಗಳು 1999ರಏಪ್ರಿˉï 20ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಿದ್ದು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರವಹಿಸಿಕೊಂಡ ನಂತರ ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು, ಶಿಥಿಲಗೊಂಡ ಮಠದ ಕಟ್ಟಡಗಳನ್ನೂಅಭಿವೃದ್ಧಿಗೊಳಿಸಿದ್ದಾರೆ. ಹಾಗೂ ಮಠದ ಜಮೀನನ್ನು ನೀರಾವರಿಗೆ ಒಳಪಡಿಸಿ ಹೆಚ್ಚುಆದಾಯ ಬರುವಂತೆ ಮಾಡಿದ್ದು ಶ್ರೀಮಠದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಅಮೃತಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1-1-1960
Place :
ಬೊಮ್ಮನಳ್ಳಿ, ಸಿಂಧಗಿ ತಾ||
Pattadikara :
20-4-1999
Photo :

Programs

ಪ್ರತಿ ಅಮವಾಸ್ಯೆಗೆ ಭಜನೆ ಕಾರ್ಯಕ್ರಮ.
ಮಹಾಲಯ ಅಮವಾಸ್ಯೆಗೆ ಶ್ರೀಮಠದ ಜಾತ್ರೆ.

Photos

Full Address Kannada

ಶ್ರೀ ಮಲ್ಲಿಕಾರ್ಜುನ ಮಠ
ಸೋಮಜ್ಯಾಳ - 586 128
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಮಲಘಾಣ - 3 ಕಿ.ಮೀ.
ಸಿಂಧಗಿ - 15 ಕಿ.ಮೀ.
ವಿಜಯಪುರ - 80 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!