Shree Mahanteshwara Virakta Matha – Bellada Bagewadi

Shree Mahanteshwara Virakta Matha – Bellada Bagewadi Claimed

ಶ್ರೀ ಮಹಾಂತೇಶ್ವರ ವಿರಕ್ತ ಮಠ - ಬೆಲ್ಲದ ಬಾಗೇವಾಡಿ

Average Reviews

Description

ಶ್ರೀ ಮಹಾಂತೇಶ್ವರ ವಿರಕ್ತ ಮಠ – ಬೆಲ್ಲದ ಬಾಗೇವಾಡಿ

ಕರ್ತೃ – ಶ್ರೀ ಮ.ನಿ.ಪ್ರ. ಸಂಗನಬಸವ ಶಿವಯೋಗಿಗಳು

 ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಮೂಲಹೆಸರು ಬಾಗೇವಾಡಿ ಎಂದು. ಆದರೆ ಇಲ್ಲಿ ಸುತ್ತಮುತ್ತಲೆಲ್ಲಾ ಕಬ್ಬು ಪ್ರಮುಖ ಬೆಳೆಯಾಗಿಬೆಲ್ಲದ ಗಾಣಗಳೇ ಹೆಚ್ಚಿದ್ದರಿಂದ ರೂಢಿಗತವಾಗಿ ಬೆಲ್ಲದ ಬಾಗೇವಾಡಿ ಎಂಬ ಹೆಸರುಬರಲು ಕಾರಣವಾಯಿತು. ಇಂತಹ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ಮಹಾಂತೇಶ್ವರವಿರಕ್ತ ಮಠವು ಅಸ್ತಿತ್ವದಲ್ಲಿದ್ದು ತನ್ನ ಕಾರ್ಯಕ್ರಮಗಳ ಮೂಲಕ ಪ್ರಸಿದ್ದಿಗೆ ಬಂದಿದೆ.ಶ್ರೀ ಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಸಂಗನಬಸವಶಿವಯೋಗಿಗಳನ್ನು ಹೆಸರಿಸಲಾಗಿದ್ದು ಶ್ರೀಗಳು ಸಂಚಾರ ಮಾಡುತ್ತಾ ಬೆಲ್ಲದ ಬಾಗೇವಾಡಿಗೆಆಗಮಿಸಿ ಮಠವನ್ನು ಸ್ಥಾಪಿಸಿದರು ಎಂದು ತಿಳಿದು ಬರುತ್ತದೆ. ಹೀಗೆ ಶ್ರೀಗಳುಬೆಲ್ಲದಬಾಗೇವಾಡಿಗೆ ಆಗಮಿಸಿದ್ದು 1386ರಲ್ಲಿ ಎಂದು ಅಂದಾಜಿಸಲಾಗಿದೆ. ಮುಂದೆ ಶ್ರೀಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು ಸೇರಿದಂತೆ 8 ಜನ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದು 10ನೇ ಶ್ರೀಗಳಾಗಿ ಶ್ರೀ ಮ.ನಿ.ಪ್ರ. ಸಂಗನಬಸವ ಮಹಾಸ್ವಾಮಿಗಳು ಅಧಿಕಾರಕ್ಕೆಬಂದು ತಮ್ಮ ಕಾಯಕ ನಿಷ್ಠೆಯಿಂದ ಕನ್ನಡಾಭಿಮಾನದಿಂದ ಹೆಸರಾದರು.ಶ್ರೀಮಠದ 11ನೇ ಪೀಠಾಧಿಪತಿಗಳಾಗಿ ಬಂದ ಶ್ರೀ ಮ.ನಿ.ಪ್ರ. ಮಹಾಂತಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಮಂಚೂಣಿಗೆ ಬಂದಿತು. ಶ್ರೀಗಳು ತಮ್ಮ ಕರ್ತೃತ್ವಶಕ್ತಿಯಿಂದ ಮಠದಲ್ಲಿ ನವಚೈತನ್ಯ ಸಂಚಾರವಾಗುವಂತೆ ಮಾಡಿದರು. ಇಡೀ ಮಠ ಹಾಗೂಅದರ ಸುತ್ತಮುತ್ತಲಿನ ಆವರಣಕ್ಕೆ ಒಂದು ಹೊಸರೂಪ ಕಟ್ಟರು. ಈ ರೀತಿಯಾಗಿ ಮಠವನ್ನುಪ್ರಸಿದ್ದಿಗೆ ತಂದ ಶ್ರೀಗಳು 1999ರ ಸೆಪ್ಟೆಂಬರ್ 23ರಲ್ಲಿ ಲಿಂಗದೊಳಗಾದರು.ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳುಹಿರಿಯ ಗುರುಗಳಿರುವಾಗಲೇ ಶ್ರೀಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡುಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಹಿರಿದಾದ ಜವಾಬ್ದಾರಿ ಹೊತ್ತುಕೊಂಡರು. ಶ್ರೀಗಳುಹುಬ್ಬಳ್ಳಿ ಮೂರು ಸಾವಿರ ಮಠ ಹಾಗೂ ಶಿವಯೋಗ ಮಂದಿರದಲ್ಲಿ ಅಭ್ಯಸಿಸಿದವರಾಗಿದ್ದುಗುರುಗಳ ಆಶೀರ್ವಾದ ಬಲದಿಂದ ಶ್ರೀಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ.ಕಳೆದ ಮೂರು ದಶಕಗಳಲ್ಲಿ ಶ್ರೀಮಠವನ್ನು ಜಿಲ್ಲೆಯ ಪ್ರಮುಖ ಮಠಗಳಲ್ಲಿ ಒಂದಾಗಿರೂಪಿಸಿದ್ದಾರೆ. ಶ್ರೀಗಳು ಸದಾ ಭಕ್ತರ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾಬಡವರ, ದೀನ, ದಲಿತರ ಬದುಕನ್ನು ಹಸನು ಮಾಡಲು ಹೋರಾಡುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು
Date of Birth :
01-06-1958
Place :
ಬೆಲ್ಲದ ಬಾಗೇವಾಡಿ, ಹುಕ್ಕೇರಿ ತಾ||
Pattadikara :
22-02-1986
Photo :

Programs

ಫಾಲ್ಗುಣ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಮತ್ತು ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಮಹಾಂತೇಶ್ವರ ವಿರಕ್ತ ಮಠ
ಬೆಲ್ಲದ ಬಾಗೇವಾಡಿ - 591 305
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಹುಕ್ಕೇರಿ - 15 ಕಿ.ಮೀ
ಸಂಕೇಶ್ವರ - 25 ಕಿ.ಮೀ
ಗೋಕಾಕ್ - 28 ಕಿ.ಮೀ
ಬೆಳಗಾವಿ - 60 ಕಿ.ಮೀ

Statistic

6 Views
0 Rating
0 Favorite
0 Share
error: Content is protected !!