ರಾಯಚೂರು ಜಿˉÉ್ಲ ಮಾನ್ವಿ ತಾಲ್ಲೂಕಿನ ಕರೇಗುಡ್ಡ ಗ್ರಾಮವು ತಾಲ್ಲೂಕುಕೇಂದ್ರದಿಂದ 18 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಷ.ಬ್ರ. ಮಹಾಂತಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಮಹಾಂತೇಶ್ವರ ಮಠವು ಶ್ರೀರಂಭಾಪುರಿ ಪೀಠದ ಶಾಖಾಮಠವಾಗಿ ಬೆಳೆದು ಬಂದಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ.ಶ್ರೀಮಠದ ಕರ್ತೃಗುರುಗಳು ಶ್ರೀ ಮಹಾಂತ ಸ್ವಾಮಿಗಳೆಂದು ಹೇಳˉÁದರೂಅವರ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಗಳು ಲಿಂಗಪೂಜಾನಿಷ್ಠರಾಗಿದ್ದು ತಮ್ಮಧಾರ್ಮಿಕ ಆಚರಣೆಗಳಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದರೆಂದುಹೇಳˉÁಗಿದ್ದರೂ ಅವರ ನಂತರದ ಪರಂಪರೆಯ ಬಗ್ಗೆ ನಿಖರ ಮಾಹಿತಿಗಳು ಲಭ್ಯವಿಲ್ಲ.ಶ್ರೀಮಠದಲ್ಲಿ ಅನೇಕ ಗುರುಗಳು ಬಂದು ಅಧಿಕಾರ ನಡೆಸಿರಬಹುದೆಂದು ಹೇಳˉÁಗಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು 2000ದಇಸವಿಯಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರ ಪಡೆದ ನಂತರ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ ಸದಾಕಾಲ ಆಚರಣೆಗಳು ನಡೆಯುವ ವ್ಯವಸ್ಥೆಮಾಡಿದ್ದಾರೆ. ಹಾಗೂ ಶ್ರೀಮಠದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿಕೊಂಡುಕಾರ್ಯೋನ್ಮುಖರಾಗಿದ್ದಾರೆ.ಶ್ರೀಗಳು ಸದಾ ಸಂಚಾರ ಮಾಡುತ್ತಾ ಶ್ರೀಮಠದ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಮುನ್ನಡೆಸುತ್ತಿದ್ದು, ಶ್ರೀಮಠದ ಆಸ್ತಿಯನ್ನು ಶಿಸ್ತುಬದ್ಧಗೊಳಿಸಿ ಮಠಕ್ಕೆಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಶ್ರೀಮಠದಲ್ಲಿ ದಿನನಿತ್ಯ ಧಾರ್ಮಿಕಆಚರಣೆಗಳೊಂದಿಗೆ ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣವನ್ನು ನಡೆಸುತ್ತಿದ್ದು ಆಸಮಯದಲ್ಲಿಯೇ ಮಠದ ಜಾತ್ರೆಯನ್ನು ನಡೆಸುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು
Place :
ಕರೇಗುಡ್ಡ, ಮಾನ್ವಿ ತಾ||
Pattadikara :
2000
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು. zಸ Àರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ ಹಾಗೂ ಶ್ರೀಮಠದ ಜಾತ್ರೆ.