Shree Mahanta Swami Matha

Shree Mahanta Swami Matha Claimed

ಶ್ರೀ ಮಹಾಂತಸ್ವಾಮಿ ಮಠ

Average Reviews

Description

ಶ್ರೀ ಮಹಾಂತಸ್ವಾಮಿ ಮಠ – ದಂಡಿಕೆರೆ

ಕರ್ತೃ – ಪೂಜ್ಯ ಶ್ರೀ ಶಿವನಂಜೇ ಮಹಾಸ್ವಾಮಿಗಳು

ದಂಡಿಕೆರೆ ಎಂಬುದು ಮೈಸೂರು ನಗರದಿಂದ ಆಗ್ನೇಯಕ್ಕೆ 12 ಕಿ.ಮೀ.ದೂರದಲ್ಲಿರುವ ಒಂದು ಕಿರುಹಳ್ಳಿ. ಮೈಸೂರು ಅರಸರ ಕುದುರೆಯ ದಂಡು ಬಂದುಕವಾಯಿತು ಪೂರೈಸಿ ಹತ್ತಿರದ ಚನ್ನಬಸಯ್ಯನ ಕೆರೆಯಲ್ಲಿ ನೀರು ಕುಡಿದು ತಂಗಿಹೋಗುತ್ತಿದ್ದರಿಂದ ಈ ಜಾಗಕ್ಕೆ “ದಂಡಿಕೆರೆ” ಎಂಬ ಹೆಸರು ಬಂದಿದೆ. ವೀರಶೈವರೇ ಅಧಿಕಸಂಖ್ಯೆಯಲ್ಲಿದ್ದ ಈ ಗ್ರಾಮಕ್ಕೆ ಊರಿನ ಜನರ ಅಪೇಕ್ಷೆಯಂತೆ ಅರಸರು ಬಸವೇಶ್ವರದೇವಾಲಯವನ್ನು ಕಟ್ಟಿಸಿಕೊಟ್ಟರೆಂತಲೂ, ಕ್ರಮೇಣ ಶ್ರೀಮಠದ ಉಗಮವೂ ಆಯಿತೆಂತಲೂತಿಳಿದುಬರುತ್ತದೆ. ಮಠದ ಸ್ಥಾಪಿತ ಕಾಲಮಾನ 1847ರ ಆಸುಪಾಸು.ಇಲ್ಲಿಯೇ ನೆˉÉಸಿದ್ದ ಪೂಜ್ಯ ಶ್ರೀ ಶಿವನಂಜೇ ಮಹಾಸ್ವಾಮಿಗಳು ತುಂಬಾಧರ್ಮನಿಷ್ಠರಾಗಿದ್ದು ದೇವಸ್ಥಾನದ ಸಮೀಪ ಸ್ಥಾಪಿತಗೊಂಡ ಮಠಕ್ಕೆ ಪ್ರಥಮಪೀಠಾಧಿಪತಿಗಳಾಗಿ ವಾಟಾಳು ಮಠದ ಶ್ರೀಗಳಿಂದ ಅನುಗ್ರಹ ಸ್ವೀಕರಿಸಿದರು. ಇವರುಸುಮಾರು 50 ವರ್ಷಗಳ ಸುಧೀರ್ಘಕಾಲ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಟ್ಟುಶಿವಾಧೀನರಾಗಿದ್ದು ಇವರ ನಂತರ ತಾಯೂರಿನ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮಿಗಳುಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು. ಶ್ರೀಗಳು ಶ್ರೀಮಠದ ಜೊತೆಗೆ ಶೆಟ್ಟಿನಾಯಕನಹಳ್ಳಿಯಲ್ಲಿ ಒಂದು ಶಾಖಾಮಠ ಸ್ಥಾಪಿಸಿ ಅಲ್ಲಿಗೂ ಗುರುಗಳನ್ನು ನೇಮಿಸಿದರು.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಷ.ಬ್ರ. ವಿದ್ವಾನ್ ಮಹಾಂತಶಿವಾಚಾರ್ಯ ಸ್ವಾಮಿಗಳು 1945ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದು ಶ್ರೀಮಠವನ್ನುಅಭಿವೃದ್ದಿಗೊಳಿಸಿದರು. ತಮ್ಮ 13ನೇ ವಯಸ್ಸಿನˉÉ್ಲೀ ಪಟ್ಟಕ್ಕೆ ಬಂದ ಶ್ರೀಗಳು ನಂತರಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಶಕ್ತಿ ವಿಶಿಷ್ಟಾದ್ವೈತ ವೇದಾಂತದ ಅಭ್ಯಾಸಮಾಡಿದರು. ತದನಂತರ ಮಹಾರಾಜ ಸಂಸ್ಕøತ ಕಾˉÉೀಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು. ತಮ್ಮ ವಿದ್ವತ್ನಿಂದಾಗಿ ಪ್ರಸಿದ್ದರಾಗಿದ್ದ ಶ್ರೀಗಳು 1997ರ ಆಗಸ್ಟ್ 22ರಂದುಈಗಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದರು. ಶ್ರೀ ಬಸವಲಿಂಗ ಸ್ವಾಮಿಗಳು ಹಿರಿಯ ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಅವರ ಹಾದಿಯಲ್ಲಿಯೇ ಶ್ರೀಮಠವನ್ನು ಅಭಿವೃದ್ದಿಕಾರ್ಯಗಳೊಂದಿಗೆ ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
05-02-1984
Place :
ದಂಡಿಕೆರೆ, ಮೈಸೂರು ತಾ||
Pattadikara :
22-08-1997
Photo :

Programs

ಗಣೇಶ ಚೌತಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು
ಶಿವರಾತ್ರಿಗೆ ಜಾಗರಣೆ ಬಸವ ಜಯಂತಿ ಆಚರಣೆ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಶಿವರಾತ್ರಿಗೆ ಕರ್ತೃಗಳ ಆರಾಧನೆ

Photos

Map

Near by Places

ಸುತ್ತೂರು 13 ಕಿ.ಮೀ.
ವರುಣ ಗ್ರಾಮ 3 ಕಿ.ಮೀ.
ಮೈಸೂರು 13 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!