Shree Mahanta Matha

Shree Mahanta Matha

ಶ್ರೀ ಮಹಾಂತ ಮಠ

Average Reviews

Description

ಶ್ರೀ ಮಹಾಂತ ಮಠ

ಕರ್ತೃ – ಶ್ರೀ ಚಿತ್ತರಗಿ ವಿಜಯ ಮಹಾಂತ ಶಿವಯೋಗಿಗಳು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಸುಮಾರು 25ವರ್ಷಗಳ ಹಿಂದೆ ಶ್ರೀ ಗುರು ಮಹಾಂತ ಸ್ವಾಮಿಗಳು ತಮ್ಮ ಗುರುಗಳಾದ ಚಿತ್ತರಗಿ ಶ್ರೀವಿಜಯ ಮಹಾಂತ ಸ್ವಾಮಿಗಳ ಸ್ಮರಣೆಯೊಂದಿಗೆ ಸ್ಥಾಪಿಸಿರುವ ಶ್ರೀ ಮಹಾಂತ ಮಠವು ತನ್ನಧಾರ್ಮಿಕ ಆಚರಣೆಗಳಿಂದಾಗಿ ಸ್ವಲ್ಪ ಕಾಲದಲ್ಲೇ ಹೆಚ್ಚು ಪ್ರಸಿದ್ದಿಗೊಂಡಿದೆ.ಶ್ರೀ ಗುರು ಮಹಾಂತ ಸ್ವಾಮಿಗಳು 1956ರಲ್ಲಿ ರಬಕವಿಯಲ್ಲಿ ಜನಿಸಿದವರಾಗಿದ್ದುಇಳಕಲ್ಲು ಮತ್ತು ಎಡೆಯೂರು ಕ್ಷೇತ್ರಗಳಲ್ಲಿ ಸಂಸ್ಕøತ, ವೇದ ಹಾಗೂ ಆಗಮಗಳನ್ನು ಕಲಿತುಇಳಕಲ್ಲು ಮಠದಲ್ಲಿ ಕೆಲವು ದಿನ ನೆಲೆನಿಂತು ನಂತರ ಮರೇಗುದ್ದಿಗೆ ಬಂದವರಾಗಿದ್ದಾರೆ.ಶ್ರೀಗಳು ಚಿತ ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳ ಸೇವೆಮಾಡಿಕೊಂಡಿದ್ದವರಾಗಿದ್ದು ಅವರ ಸ್ಮರಣೆಯೊಂದಿಗೆ ಮರೇಗುದ್ದಿಯಲ್ಲಿ 1987ರಲ್ಲಿಶ್ರೀಮಠವನ್ನು ಸ್ಥಾಪಿಸಿದ್ದಾರೆ. ಆನಂತರ ಗುರುಗಳು ಶ್ರೀಮಠದ ಕಟ್ಟಡ ಕಾರ್ಯವನ್ನುಪೂರ್ಣಗೊಳಿಸಿ ಭಕ್ತರನ್ನು ಸಂಪಾದಿಸಿ 1997ರ ಏಪ್ರಿಲ್ 20ರಲ್ಲಿ ಇಳಕಲ್ಲು ಶ್ರೀ ವಿಜಯಮಹಾಂತ ಸ್ವಾಮಿಗಳಿಂದ ಚಿನ್ಮಯ ದೀಕ್ಷೆ ಪಡೆದು ಪಟ್ಟಾಧಿಕಾರಕ್ಕೆ ಬಂದಿದ್ದಾರೆ.ಶ್ರೀ ಗುರುಮಹಾಂತ ಸ್ವಾಮಿಗಳು ತಮ್ಮ ಗುರುಗಳಂತೆಯೇ ಪಾದಯಾತ್ರೆಯಮುಖಾಂತರ ಹಳ್ಳಿ-ಹಳ್ಳಿಗಳಿಗೆ ತೆರಳಿ ಧರ್ಮ ಪ್ರಚಾರವನ್ನು ಕೈಗೊಂಡಿದ್ದಾರೆ. ಹಾಗೂ ಶ್ರೀಮಠದಲ್ಲಿ ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದು ಪ್ರಸಾದದ ವ್ಯವಸ್ಥೆಮಾಡುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ‘ಶರಣ ಸಂಸ್ಕøತಿ ಉತ್ಸವ’ವನ್ನು ಆಯೋಜಿಸಿ ಪುರಾಣಪ್ರವಚನಗಳ ಮೂಲಕ ಶರಣರ ತತ್ವಗಳನ್ನು ಪಸರಿಸುತ್ತಿದ್ದಾರೆ. ಶ್ರೀಗಳು ದಿನನಿತ್ಯ ಧಾರ್ಮಿಕಕಾರ್ಯಕ್ರಮಗಳೊಂದಿಗೆ ಸಾಮಾಜಿಕವಾಗಿಯೂ ಕಾರ್ಯನಿರ್ವಹಿಸುತ್ತಾ, ಸಮಾಜದಲ್ಲಿನಮೌಢ್ಯತೆಯನ್ನು ಹೊಡೆದೋಡಿಸುವ ಸಂಕಲ್ಪ ಮಾಡಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು
Date of Birth :
1-6-1956
Place :
ರಬಕವಿ, ಜಮಖಂಡಿ ತಾ||
Photo :

Programs

ಬಸವಜಯಂತಿ ಮತ್ತು ಶಿವರಾತ್ರಿಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.
ಶ್ರಾವಣದಲ್ಲಿ ಶರಣ ಸಂಸ್ಕøತಿ ಉತ್ಸವ ಹಾಗೂ ಪುರಾಣ ಪ್ರವಚನ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಮಹಾಂತ ಮಠ
ಶೀರೋಳ ರೋಡ್, ಮರೇಗುದ್ದಿ - 587 121
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ಮರೇಗುದ್ದಿ ಕ್ರಾಸ್ - 1 ಕಿ.ಮೀ.
ಶಿರೋಳ - 8 ಕಿ.ಮೀ.
ಜಮಖಂಡಿ - 12 ಕಿ.ಮೀ.
ಬಾಗಲಕೋಟೆ -75 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!