ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಸಿರಸಂಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 21 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿ ಸುಮಾರು 150ವರ್ಷಗಳ ಹಿಂದೆ ಶ್ರೀ ಜಗದ್ಗುರು ಮಹಾಲಿಂಗೇಶ ್ವರ ಮುರುಘರಾಜೇಂದ್ರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಮಹಾಲಿಂಗೇಶ್ವರ ಮಠವು ಚಿತ್ರದುರ್ಗದ“ಶ್ರೀ ಮುರುಘಾ ಮಠ”ದ ಶಾಖಾಮಠವಾಗಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಜಗದ್ಗುರು ಮಹಾಲಿಂಗೇಶ್ವರ ಮುರುಘರಾಜೇಂದ್ರಮಹಾಸ್ವಾಮಿಗಳು ಸಂಚಾರ ಮೂರ್ತಿಗಳಾಗಿ ಇಲ್ಲಿಗೆ ಬಂದಾಗ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪಿಸಿದ್ದು ತಮ್ಮ ಕಾರ್ಯಕ್ರಮಗಳ ಮೂಲಕ ಬಹುಬೇಗನೇ ಪ್ರಸಿದ್ದಿಗೆಬಂದಿದ್ದಾರೆ. ಇವರ ನಂತರ ಶ್ರೀ.ಮ.ನಿ.ಪ್ರ. ಮಹಾಂತೇಶ್ವರ ಮಹಾಲಿಂಗೇಶ್ವರ ಸ್ವಾಮಿಗಳುಶ್ರೀಮಠದ ಆಡಳಿತ ನಡೆಸಿದ್ದು ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ. ಆದರೆ ಇವರ ನಂತರಶ್ರೀಮಠವು 12 ವರ್ಷಗಳಿಗೂ ಅಧಿಕ ಕಾಲ ಖಾಲಿ ಉಳಿದಿದ್ದು ಜೀರ್ಣಗೊಳ್ಳತೊಡಗಿತ್ತು.ಸಿರಸಂಗಿಯ ಶ್ರೀ ಮಹಾಲಿಂಗೇಶ್ವರ ಮಠವು ಖಾಲಿ ಉಳಿದುದನ್ನು ಕಂಡಚಿತ್ರದುರ್ಗ ಶ್ರೀ ಮುರುಘಾ ಬೃಹನ್ಮಠದ ಶರಣರು 2006ರ ಜನವರಿ 03ರಲ್ಲಿ ಈಗಿನಶ್ರೀಗಳಾದ ಪೂಜ್ಯಶ್ರೀ ಬಸವ ಮಹಾಂತ ಸ್ವಾಮಿಗಳನ್ನು ನೇಮಕಗೊಳಿಸಿದರು. ಶ್ರೀ ಬಸವಮಹಾಂತ ಸ್ವಾಮಿಗಳು ಚಿಕ್ಕವಯಸ್ಸಿನಲ್ಲೇ ಚಿತ್ರದುರ್ಗ ಬೃಹನ್ಮಠಕ್ಕೆ ಬಂದವರಾಗಿದ್ದುಚಿತ್ರದುರ್ಗದಲ್ಲಿಯೇ ತಮ್ಮ ಪ್ರಾಥಮಿಕದಿಂದ ಪದವಿವರೆಗಿನ ಶಿಕ್ಷಣವನ್ನು ಪೂರೈಸಿದ್ದಾರೆ.1991ರಲ್ಲಿ ಇಷ್ಟಲಿಂಗದೀಕ್ಷೆಯನ್ನು ಹಾವೇರಿ ಜಿಲ್ಲೆ ಕೂಡಲದ ಶ್ರೀ.ಷ.ಬ್ರ. ಗುರುನಂಜೇಶ್ವರಮಹಾಸ್ವಾಮಿಗಳಿಂದ ಪಡೆದ ಶ್ರೀಗಳು 1997ರಲ್ಲಿ ಕಾವಿ ಲಾಂಚನ ದೀಕ್ಷೆಯನ್ನು ಚಿತ್ರದುರ್ಗಬೃಹನ್ಮಠದ ಶ್ರೀ ಮುರುಘಾ ಶರಣರಿಂದ ಪಡೆದಿದ್ದಾರೆ.2006ರಲ್ಲಿ ಶ್ರೀ ಮಠದ ಅಧಿಕಾರ ಸ್ವೀಕರಿಸಿ ಬಂದ ಶ್ರೀಗಳು ಕಡಿಮೆಅವಧಿಯಲ್ಲಿಯೇ ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಯೋಜನೆ ರೂಪಿಸಿಕೊಂಡುಕಾರ್ಯತತ್ಪರರಾಗಿದ್ದಾರೆ. ಶ್ರೀಮಠದಲ್ಲಿ ಪ್ರತಿ ಅಮಾವಾಸ್ಯೆಗೂ ಶಿವಾನುಭವಗೋಷ್ಠಿಗಳನ್ನುನಡೆಸುತ್ತಾ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ ಹಾಗೂ ಪ್ರತಿ ವರ್ಷ ಬಸವಜಯಂತಿಯಂದು ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಬಸವ ಮಹಾಂತ ಸ್ವಾಮಿಜೀ
Date of Birth :
24-02-1979
Place :
ಬಮ್ಮಿಗಟ್ಟಿ, ಕಲಘಟಗಿ ತಾ||
Photo :
Programs
ಪ್ರತಿ ಅಮವಾಸೆಗೆ ಶಿವಾನುಭವ ಹಾಗೂ ಪ್ರಸಾದ
ಬಸವ ಜಯಂತಿಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಮಹಾಲಿಂಗೇಶ್ವರ ಮಠ
ಸಿರಸಂಗಿ - 591 126
ಸವದತ್ತಿ ತಾ||, ಬೆಳಗಾವಿ ಜಿಲ್ಲೆ