ವಿಶೇಷತೆ: ಯುಗಾದಿ ಪಾಡ್ಯದಲ್ಲಿ ಶ್ರೀಮಠದ ಮೂಲ ಕರ್ತೃಗಳಾದ
ಶ್ರೀ ಮಹಾಲಿಂಗೇಶ್ವರರು ಕೊಟ್ಟಂತಹ ಜಟಾ ದರ್ಶನ ಇರುತ್ತದೆ.
ಬಾಗಲಕೋಟೆ ಜಿಲ್ಲೆ ಮಹಲಿಂಗಪುರದ ಪುರಾತನ ಹೆಸರು “ನರಗಟ್ಟಿ”ಎಂಬುದಾಗಿತ್ತು. ಆದರೆ ಯಾವಾಗ ಶ್ರೀ ಮಹಾಲಿಂಗೇಶ್ವರರೆಂಬ ಶಿವಶರಣರು ಇಲ್ಲಿಗೆಆಗಮಿಸಿ, ಪವಾಡಗೈದು ಸುಕ್ಷೇತ್ರವನ್ನಾಗಿ ಮಾಡಿದರೋ ಅಂದಿನಿಂದ ನರಗಟ್ಟಿಯು“ಮಹಲಿಂಗಪುರ” ಎಂದು ಹೆಸರಾಯಿತು. ಪುರಾಣ ಪ್ರಸಿದ್ದ ಮಹಾಲಿಂಗಪುರದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಮಹಾಲಿಂಗೇಶ್ವರ ಸಂಸ್ಥಾನಮಠವು ವೀರಶೈವ ಧರ್ಮವನ್ನು ಪ್ರಬಲವಾಗಿಬೇರೂರುವಂತೆ ಮಾಡಿ ನಾಡಿನ ಪ್ರಮುಖ ಮಠಗಳಲ್ಲೊಂದಾಗಿ ಬೆಳೆದು ಬಂದಿದೆ.ಶ್ರೀ ಮಹಾಲಿಂಗೇಶ್ವರರು ಮಹಾರಾಷ್ಟ್ರದ ಜತ್ ತಾಲ್ಲೂಕಿನ ಢಪಳಾಪುರಕ್ಕೆಆಗಮಿಸಿ ಶ್ರೀ ಗುರುಲಿಂಗ ಸ್ವಾಮಿಗಳಿಂದ ಉಪದೇಶ ಪಡೆದು ವೀರಶೈವ ಧರ್ಮದಪ್ರಚಾರಕ್ಕೆ ಹೊರಟವರು. ಅಲ್ಲಿಂದ ಲೋಕಸಂಚಾರ ಮಾಡುತ್ತಾ “ನರಗಟ್ಟಿ”ಗೆ ಬಂದಶ್ರೀಗಳು ಅನೇಕ ಪವಾಡಗಳನ್ನು ಮಾಡಿ ಇಲ್ಲಿನ ಭಕ್ತರಿಗೆ ವೀರಶೈವ ಧರ್ಮದ ಆಚರಣೆ,ಲಿಂಗಪೂಜೆ ಮಹತ್ವಗಳನ್ನು ತಿಳಿಸಿಕೊಟ್ಟು, ವೀರಶೈವ ಧರ್ಮ ಪಸರಿಸಲು ಕಾರಣರಾದರು.ಈ ಕಾರಣದಿಂದಾಗಿ ನರಗಟ್ಟಿ ಗ್ರಾಮವು ಮಹಲಿಂಗಪುರವೆಂದು ಹೆಸರಾಯಿತು.ಶ್ರೀ ಮಹಾಲಿಂಗೇಶ್ವರರು ಇಲ್ಲಿ ಮಠವನ್ನು ಸ್ಥಾಪಿಸಿ ಮತ್ತೆ ಲೋಕಕಲ್ಯಾಣಾರ್ಥಸಂಚಾರ ಹೊರಟು ಧರ್ಮಪ್ರಚಾರ ನಡೆಸಿ ಮಹಾಲಿಂಗಪುರಕ್ಕೆ ಮರಳಿ ಇಲ್ಲಿಯೇ ಜೀವಂತಸಮಾಧಿಯಾಗಿದ್ದಾರೆ. ಕರ್ತೃಗುರುಗಳ ನಂತರ 6 ಜನ ಶ್ರೀಗಳು ಮಠದ ಅಧಿಕಾರವನ್ನುಸ್ವೀಕರಿಸಿ ಶ್ರೀಮಠವನ್ನು ಮುನ್ನಡೆಸುತ್ತಾ ಬಂದಿದ್ದಾರೆಂದು ಹೇಳಲಾಗಿದೆ.ಹಿಂದಿನ ಗುರುಗಳಾದ ಶ್ರೀ ಗುರುಲಿಂಗ ಸ್ವಾಮಿಗಳು ಶಿವಪೂಜಾನಿಷ್ಠರಾಗಿದ್ದು,ಧಾರ್ಮಿಕ ಆಚರಣೆಗಳೊಂದಿಗೆ ಮಠವನ್ನು ಮುನ್ನಡೆಸಿ ಈಗಿನ ಶ್ರೀಗಳಾದ ಶ್ರೀ ರಾಜೇಂದ್ರಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿ ಲಿಂಗೈಕ್ಯರಾದರು. 1971ರಲ್ಲಿ ಶ್ರೀ ಮಠದಪಟ್ಟಾಧಿಕಾರವನ್ನು ವಹಿಸಿಕೊಂಡ ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಾಬಂದಿದ್ದು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಗಳು ಈ ಮಠದಜೊತೆಯಲ್ಲಿ ಮೂಲಮಠವಾದ ಮಹಾರಾಷ್ಟ್ರದ ಢಪಳಾಪುರ ಮಠದ ಆಡಳಿತವನ್ನೂಮುನ್ನಡೆಸುತ್ತಾ ಬಂದಿದ್ದಾರೆ. ಶ್ರೀಮಠದ ವಿಶೇಷ ಧಾರ್ಮಿಕ ಆಚರಣೆಯಾದ ಶ್ರೀಮಠದಮೂಲ ಕರ್ತೃಗಳು ಕೊಟ್ಟಂತಹ ಜಟಾ ದರ್ಶನವು ಯುಗಾದಿ ಪಾಡ್ಯಕ್ಕೆ ನಡೆಯುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು
Place :
ಜಂಬಗಿ, ಮುಧೋಳ ತಾ||
Pattadikara :
3-6-1971
Photo :
Programs
ಪ್ರತಿ ಸೋಮವಾರ ವಿಶೇಷ ಪೂಜೆ.
ಅನಂತನ ಹುಣ್ಣಿಮೆಗೆ ಶ್ರೀಮಠದ ಜಾತ್ರೆ ಹಾಗೂ ರಥೋತ್ಸವ.
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು.
ಕಾರ್ತೀಕ ಮಾಸದ ಕೊನೆಯ ಎರಡು ದಿನ ಕಾರ್ತಿಕೋತ್ಸವ ಮತ್ತು ಪಲ್ಲಕ್ಕಿ ಉತ್ಸವ.
Photos
Full Address Kannada
ಶ್ರೀ ಮಹಾಲಿಂಗೇಶ್ವರ ಸಂಸ್ಥಾನ ಮಠ
ಮಹಾಲಿಂಗಪುರ - 587 312
ಮುಧೋಳ ತಾ||, ಬಾಗಲಕೋಟೆ ಜಿ||