ಮೈಸೂರು ನಗರದ ರಾಮಾನುಜ ರಸ್ತೆಯಲ್ಲಿ ಕಳೆದೊಂದು ಶತಮಾನದ ಹಿಂದೆಸ್ಥಾಪಿಗೊಂಡು ಅಸ್ತಿತ್ತ್ವಕ್ಕೆ ಬಂದಿರುವ ಶ್ರೀ ಮಡಿವಾಳಸ್ವಾಮಿ ಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ಸೃಷ್ಠಿಸುತ್ತಿದೆ. ಶ್ರೀಮಠವನ್ನು 19ನೇ ಶತಮಾನದ ಅಂತ್ಯಭಾಗದಲ್ಲಿ ಪೂಜ್ಯಶ್ರೀ ಮಡಿವಾಳ ಮಹಾಸ್ವಾಮಿಗಳು ಸ್ಥಾಪಿಸಿದ್ದಾರೆ.ಕರ್ತೃ ಗುರುಗಳಾದ ಶ್ರೀ ಮಡಿವಾಳ ಮಹಾಸ್ವಾಮಿಗಳು ಕಿತ್ತೂರಿನ ಕಲ್ಲುಮಠಕ್ಕೆಅಧಿಕಾರವಿದ್ದು ನಂತರದಲ್ಲಿ ಕಿತ್ತೂರು ಸಂಸ್ಥಾನದ ರಾಜ ಮಲ್ಲ ಸರ್ಜರಿಗೂ ಇವರಿಗೂಮನಸ್ತಾಪವಾಗಿ ಅಲ್ಲಿಂದ ಸಂಚಾರದಲ್ಲಿ ಇಲ್ಲಿಗೆ ಬಂದು ನೆˉÉಸಿದ್ದಾರೆಂದು ಹೇಳˉÁಗುತ್ತದೆ.ಮಹಾನ್ ಧರ್ಮನಿಷ್ಠರಾಗಿದ್ದ ಕರ್ತೃ ಗುರುಗಳು ಭಕ್ತರಿಗೆ ವೀರಶೈವ ಧರ್ಮದಪಂಚಾಚಾರ, ಅಷ್ಟಾವರಣಗಳ ಆಳವಾದ ಅರಿವನ್ನು ಮೂಡಿಸುತ್ತಾ ಅವರಲ್ಲಿನ ಧಾರ್ಮಿಕಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದರು. ಇಂದಹ ತಪೋನಿಷ್ಠ ಶ್ರೀಗಳು 1917ರಲ್ಲಿಲಿಂಗೈಕ್ಯರಾಗಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಪಟ್ಟದ ಬಸವಲಿಂಗ ಸ್ವಾಮಿಗಳುಶಿವಪೂಜಾನಿಷ್ಠರಾಗಿದ್ದು ತಮ್ಮ ಆಚರಣೆಗಳ ಮೂಲಕ ಈ ಭಾಗದಲ್ಲಿ ಹೆಸರಾಗಿದ್ದರು.ಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡಿದ್ದ ಶ್ರೀಗಳು ಅವರ ಸಹಕಾರದೊಂದಿಗೆಶ್ರೀಮಠವನ್ನು ಉನ್ನತೀಕರಿಸಿದರು. ತಮ್ಮ ಉತ್ತರಾಧಿಕಾರಿಗಳನ್ನಾಗಿ ಪ್ರಸ್ತುತ ಶ್ರೀಗಳಾದ ಶ್ರೀಷ.ಬ್ರ. ಇಮ್ಮಡಿ ಮಡಿವಾಳ ಸ್ವಾಮಿಗಳನ್ನು 1994ರಲ್ಲಿ ಪಟ್ಟಕ್ಕೆ ತಂದ ಶ್ರೀಗಳು 2007ರಮಾರ್ಚ್ 29ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮಡಿ ಮಡಿವಾಳ ಸ್ವಾಮಿಗಳು ಹಿರಿಯಗುರುಗಳ ಮಾರ್ಗದರ್ಶನ ಹಾಗೂ ಆಶೀರ್ವಾದದಲ್ಲಿ ಪರಿಪಕ್ವಗೊಂಡರು. ಶ್ರೀಮಠದಅಧಿಕಾರ ವಹಿಸಿಕೊಂಡ ನಂತರ ಕ್ರಿಯಾಶೀಲರಾಗಿ ಹಂತ ಹಂತವಾಗಿ ಮಠವನ್ನುಅಭಿವೃದ್ದಿಪಡಿಸುತ್ತಿರುವ ಶ್ರೀಗಳು ಧಾರ್ಮಿಕ ಆಚರಣೆಗಳನ್ನು ವಿಸ್ತಾರಗೊಳಿಸಿದ್ದಾರೆ. ಶ್ರೀಗಳುಮಠದಲ್ಲಿ ಪಾಲ್ಗುಣ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಪಟ್ಟದ ಬಸವಲಿಂಗ ಮಹಾಸ್ವಾಮಿಗಳಪುಣ್ಯಾರಾಧನೆ ಮಹೋತ್ಸವ ನಡೆಸುತ್ತಿದ್ದು ಅಪಾರ ಭಕ್ತರು ಪಾˉÉ್ಗೂಳ್ಳುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಇಮ್ಮಡಿ ಮಡಿವಾಳ ಸ್ವಾಮಿಗಳು
Date of Birth :
1956
Place :
ದೇವˉÁಪುರ, ಮೈಸೂರು ತಾ||
Pattadikara :
1994
Photo :
Programs
ಪಾಲ್ಗುಣ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಪಟ್ಟದ ಬಸವಲಿಂಗ ಸ್ವಾಮಿಗಳ ಪುಣ್ಯಾರಾಧನೆ ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಶಾª್ರÀಣ ಮಾಸ ಮತ್ತು ಕಾರ್ತಿಕ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
Institutions
¸ಂÀ ಸ್ಕøತ ಪಾಠಶಾˉÉ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮಡಿವಾಳಸ್ವಾಮಿ ಮಠ
ರಾಮಾನುಜ ರಸ್ತೆ, ಮೈಸೂರು - 570 004
ಮೈಸೂರು ತಾ|| ಮತ್ತು ಜಿˉÉ್ಲ