Shree Madivaleshwara Matha – Devara Shigehalli

Shree Madivaleshwara Matha – Devara Shigehalli Claimed

ಶ್ರೀ ಮಡಿವಾಳೇಶ್ವರ ಮಠ - ದೇವರ ಶೀಗೆಹಳ್ಳಿ

Average Reviews

Description

ಶ್ರೀ ಮಡಿವಾಳೇಶ್ವರ ಮಠ – ದೇವರ ಶೀಗೆಹಳ್ಳಿ

ಕರ್ತೃ – ಪೂಜ್ಯ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು

ಬೆÀಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ದೇವರಶೀಗೆಹಳ್ಳಿ ಗ್ರಾಮವುತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಸ್ಥಾಪಿತಗೊಂಡಿರುವ ಶ್ರೀ ಮಡಿವಾಳೇಶ್ವರ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಈ ಗ್ರಾಮದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ.ಪರಮ ಪೂಜ್ಯ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು ಎಂದರೆ ಕರ್ನಾಟಕದಧಾರ್ಮಿಕ ಇತಿಹಾಸದಲ್ಲಿ ಪ್ರಮುಖ ಹೆಸರು. ಶ್ರೀಗಳು ತಮ್ಮ ಪವಾಡಗಳಿಂದಭಕ್ತರನ್ನುದ್ದರಿಸಿದವರು. ಶ್ರೀಗಳು ಕಿತ್ತೂರು ಸಂಸ್ಥಾನದವರಾಗಿದ್ದು ಇವರ ಕಾಲ ಸುಮಾರು1795-1881. ಶ್ರೀಗಳು ಕಿತ್ತೂರಿನ ರಾಜಗುರು ಕಲ್ಮಠದಲ್ಲಿದ್ದು ತಮ್ಮ ಪವಾಡಗಳಿಂದಹೆಸರಾಗಿದ್ದವರು.ಶ್ರೀಗಳು ಕಿತ್ತೂರಿನಲ್ಲಿ ನಡೆದ ಕೆಲ ಘಟನೆಗಳಿಂದ ಲೋಕಸಂಚಾರಕ್ಕೆ ಹೊರಟರು.ಹೀಗೆ ಸಂಚಾರ ಹೊರಟ ಶ್ರೀಗಳು ಅಲ್ಲಲ್ಲೇ ನೆಲೆಗೊಂಡು ಅನುಷ್ಠಾನ ಕೈಗೊಂಡುಮುಂದುವರೆದು ಕೊನೆಯಲ್ಲಿ ಧಾರವಾಡ ಜಿಲ್ಲೆ ಗರಗ ಗ್ರಾಮದಲ್ಲಿ ನೆಲೆನಿಂತು ಗರಗದಮಡಿವಾಳೇಶ್ವರರೆಂದೇ ಪ್ರಖ್ಯಾತಗೊಂಡರು. ಹೀಗೆ ಶ್ರೀಗಳು ಅನುಷ್ಠಾನ ಕೈಗೊಂಡಸ್ಥಳಗಳೆಲ್ಲಾ ಜಾಗೃತ ಸ್ಥಳಗಳಾಗಿ ಗುರುತಿಸಿಕೊಂಡು ಅಲ್ಲೆಲ್ಲಾ ಮಠಗಳು ಸ್ಥಾಪಿತಗೊಂಡಿದ್ದುಅವುಗಳಲ್ಲಿ ದೇವರ ಶೀಗೆಹಳ್ಳಿ ಶ್ರೀಮಠವೂ ಒಂದು.ಪ್ರಸ್ತುತ ಶ್ರೀ. ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸುತ್ತಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಿದ್ದಾರೆ. 1955ರ ಫೆಬ್ರವರಿ 01ರಲ್ಲಿ ಹುಕ್ಕೇರಿ ತಾಲ್ಲೂಕಿನ ಕುರ್ಣಿ ಗ್ರಾಮದಲ್ಲಿ ಜನಿಸಿದಶ್ರೀಗಳು 1983ರ ನವೆಂಬರ್ 17ರಂದು ಶ್ರೀ ಮಠದ ಅಧಿಕಾರ ವಹಿಸಿಕೊಂಡ ನಂತರಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣಮಾಸದಲ್ಲಿ ನಿತ್ಯ ರುದ್ರಾಭೀಷೇಕ ಮತ್ತು ಪುರಾಣ ಪ್ರವಚನ ನಡೆಸುತ್ತಾರೆ ಹಾಗೂಯುಗಾದಿಯಲ್ಲಿ ಶ್ರೀಮಠದ ಜಾತ್ರೆಯು ನಡೆಯುತ್ತಿದ್ದು ಗ್ರಾಮದ ಭಕ್ತರು ಪಾಲ್ಗೊಂಡುಗುರುಗಳ ಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳು
Date of Birth :
01-02-1955
Place :
ಕುರ್ಣಿ, ಹುಕ್ಕೇರಿ ತಾ||
Pattadikara :
17-11-1983
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಪುರಾಣ ಪ್ರವಚನ ಯುಗಾದಿಗೆ ಶ್ರೀ ಮಠದ ಜಾತ್ರೆ

Photos

Full Address Kannada

ಶ್ರೀ ಮಡಿವಾಳೇಶ್ವರ ಮಠ
ದೇವರ ಶೀಗೆಹಳ್ಳಿ - 591 153
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ

Map

Near by Places

ಇಟಗಿ ಕ್ರಾಸ್ - 1 ಕಿ.ಮೀ.
ಚನ್ನಮ್ಮ ಕಿತ್ತೂರು - 15 ಕಿ.ಮೀ.
ಬೈಲಹೊಂಗಲ - 30 ಕಿ.ಮೀ.
ಬೆಳಗಾವಿ - 33 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!