Shree Madivaleshwara Matha – Bailahongala

Shree Madivaleshwara Matha – Bailahongala Claimed

ಶ್ರೀ ಮಡಿವಾಳೇಶ್ವರ ಮಠ - ಬೈಲಹೊಂಗಲ

Average Reviews

Description

ಶ್ರೀ ಮಡಿವಾಳೇಶ್ವರ ಮಠ – ಬೈಲಹೊಂಗಲ

ಕರ್ತೃ – ಪೂಜ್ಯ ಶಿವಶರಣೆ ತಂಗೆಮ್ಮ ತಾಯಿಯವರು

ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಮಡಿವಾಳೇಶ್ವರ ನಗರದಲ್ಲಿ 1983ರಜೂನ್ 15ರಂದು ಪ್ರಾರಂಭಗೊಂಡಿರುವ ಶ್ರೀ ಮಡಿವಾಳೇಶ್ವರ ಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ.ಗರಗದ ಶ್ರೀ ಮಡಿವಾಳೇಶ್ವರರ ಪರಂಪರೆಯನ್ನು ಅಳವಡಿಸಿಕೊಂಡು ಸಾಗಿ ಬಂದಿರುವಶ್ರೀಮಠವು ಬಹುಬೇಗನೆ ಪ್ರಚಲಿತಕ್ಕೆ ಬಂದಿದೆ.ಪೂಜ್ಯ ಶಿವಶರಣೆ ತಂಗೆಮ್ಮ ತಾಯಿಯವರು ಶ್ರೀಮಠದ ಸ್ಥಾಪಕರು. ಚಿಕ್ಕವಯಸ್ಸಿನಿಂದಲೂ ಆಧ್ಯಾತ್ಮ ಪರಿಸರದಲ್ಲಿ ಬೆಳೆದ ತಾಯಿಯವರು ಯಡಳ್ಳಿಯ ಶ್ರೀ ಮಾನವಿಅಜ್ಜನ ಪರಮ ಶಿಷ್ಯರಾಗಿದ್ದರು. ಆನಂತರ ಸಂಸಾರ ಬಂಧನಕ್ಕೆ ಒಳಪಟ್ಟ ತಾಯಿಯವರುಮಾನಸಿಕವಾಗಿ ಅಜ್ಜನ ಜ್ಞಾನದಲ್ಲಿ ತೊಡಗಿದ್ದರು. ಜ್ಞಾನದ ನಿಮಿತ್ತ ಗರಗದ ಶ್ರೀಮಡಿವಾಳೇಶ್ವರರ ಸೇವೆಯನ್ನು ಮಾಡುತ್ತಾ, ಅಜ್ಜನೇ ತಮ್ಮ ಜೀವನದ ಉಸಿರಾಗಿಸಿ ಅಪಾರಪವಾಡಗಳಿಂದ ಭಕ್ತವೃಂದದ ಪ್ರೀತಿಗೆ ಪಾತ್ರರಾಗಿ 1983ರ ಜೂನ್ 15ರಲ್ಲಿ ಶ್ರೀಮಡಿವಾಳೇಶ್ವರ ಮಠವನ್ನು ಬೈಲಹೊಂಗಲದಲ್ಲಿ ಸ್ಥಾಪಿಸಿದರು.ಶ್ರೀಮಠವನ್ನು ಸ್ಥಾಪಿಸಿದ ತಾಯಿಯವರು ತಮ್ಮ ಕಾರ್ಯಚಟುವಟಿಕೆಗಳಮೂಲಕ, ಅನ್ನದಾಸೋಹದ ಮೂಲಕ ಭಕ್ತರನ್ನು ಸಲಹಿದರು. ಶ್ರೀಮಠ ಹಾಗೂ ಸಮಾಜದಅಭ್ಯುದಯವೇ ಧ್ಯೇಯ ಎಂಬಂತೆ ಶ್ರಮಿಸಿದ ತಾಯಿಯವರು ಹಂತಹಂತವಾಗಿಶ್ರೀಮಠವನ್ನು ಅಭಿವೃದ್ಧಿಗೊಳಿಸಿ ಪ್ರತಿವರ್ಷ ಅದ್ದೂರಿಯಾಗಿ ಶ್ರೀಮಠದ ಜಾತ್ರೆ ನಡೆಸುತ್ತಾ2012ರ ನವೆಂಬರ್ 10 ರಂದು ಅಜ್ಜನ ಧ್ಯಾನದಲ್ಲಿ ತೊಡಗಿಕೊಂಡೇ ಪಂಚಭೂತಗಳಲ್ಲಿಲೀನರಾದರು.ಆನಂತರ ಶಿವಶರಣೆ ತಾಯಿಯವರ ಇಚ್ಚೆಯಂತೆಯೇ ಈಗಿನ ಶ್ರೀಗಳಾದ ಪೂಜ್ಯಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳನ್ನು 2013ರ ಜನವರಿ 7ರಂದು ಶ್ರೀಮಠದಪೀಠಾಧಿಕಾರಿಯನ್ನಾಗಿ ಮಾಡಲಾಯಿತು. ಶ್ರೀಗಳು ಶಿವಯೋಗ ಮಂದಿರದಲ್ಲಿ 3 ವರ್ಷಗಳಕಾಲ ಆಧ್ಯಾತ್ಮ ಶಿಕ್ಷಣ ಪಡೆದಿದ್ದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಕೈಲಾಸಆಶ್ರಮದಲ್ಲಿ ಸಂಸ್ಕøತ ಅಧ್ಯಯನ ನಡೆಸುತ್ತಿದ್ದಾರೆ ಹಾಗೂ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಮಡಿವಾಳೇಶ್ವರ ಸ್ವಾಮಿಗಳು
Date of Birth :
24-10-1990
Place :
ಚೆನ್ನಮ್ಮ ಕಿತ್ತೂರು, ಬೈಲಹೊಂಗಲ ತಾ||
Pattadikara :
07-01-2013
Photo :

Programs

ಪ್ರತಿ ಸೋಮವಾರ ಸತ್ಸಂಗ ಶ್ರಾವಣ
ಮಾಸದಲ್ಲಿ ನಿತ್ಯ ಪುರಾಣ ಕಾರ್ತೀಕ ಮಾಸದಲ್ಲಿ 7 ದಿನಗಳ ಕಾಲ ಶ್ರೀಮಠದ ಜಾತ್ರೆ (ಗುಗ್ಗಳ ಪೂಜೆ, ಭಜನೆ, ಪ್ರವಚನ, ಸಾಮೂಹಿಕ ವಿವಾಹಗಳು, ಕೊನೆ ದಿವಸ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು)

Photos

Full Address Kannada

ಶ್ರೀ ಮಡಿವಾಳೇಶ್ವರ ಮಠ
ಮಡಿವಾಳೇಶ್ವರ ನಗರ, ಬೈಲಹೊಂಗಲ
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ

Map

Near by Places

ಬೆಳಗಾವಿ - 48 ಕಿ.ಮೀ.
ಗೋಕಾಕ್ - 41 ಕಿ.ಮೀ.
ಧಾರವಾಡ - 70 ಕಿ.ಮೀ.
ಸವದತ್ತಿ - 70 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!