ಬೆಳಗಾವಿ ನಗರವು ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದ್ದುಕರ್ನಾಟಕದ ಗಡಿ ಪ್ರದೇಶವಾಗಿದೆ. ಇಂತಹ ಪಟ್ಟಣದ ಆಂಜನೇಯ ನಗರ ಬಡಾವಣೆಯಲ್ಲಿಶ್ರೀ ನಿರಂಜನ ಜಗದ್ಗುರು ಬಸವಪ್ರ¨s Àು ಮಹಾಸ್ವಾಮಿಗಳಿಂದ 1996ರಲ್ಲಿಸ್ಥಾಪಿತಗೊಂಡಿರುವ ಶ್ರೀ ಲಿಂಗಾಯತ ಧರ್ಮಪೀಠವು ಶರಣರ ತತ್ವಗಳನ್ನು ಪ್ರಚುರಪಡಿಸಿಸಂಸ್ಕಾರವಂತ ಸಮಾಜವನ್ನು ರೂಪಿಸುವ ಉದ್ದೇಶವನ್ನಿಟ್ಟುಕೊಂಡಿದೆ.ಶ್ರೀ. ನಿ.ಜ. ಬಸವಪ್ರಭು ಮಹಾಸ್ವಾಮಿಗಳು 1947ರ ಜೂನ್ 01ರಂದುಜಮಖಂಡಿ ತಾಲ್ಲೂಕಿನ ಸಿರಗುಪ್ಪ ಗ್ರಾಮದಲ್ಲಿ ಜನಿಸಿದವರಾಗಿದ್ದು ತಮ್ಮ ವಿದ್ಯಾಭ್ಯಾಸವನ್ನುಪೂರ್ಣಗೊಳಿಸಿ ಆಧ್ಯಾತ್ಮವನ್ನು ಮೈಗೂಡಿಸಿಕೊಂಡರು. ಶ್ರೀಗಳು ಆಧ್ಯಾತ್ಮದಲ್ಲಿ ಸಾಧನೆಮಾಡಿ ಆಧ್ಯಾತ್ಮಸಿದ್ದಿಯನ್ನು ಪಡೆದು ಸ್ವತಂತ್ರವಾಗಿ ಮಠವನ್ನು ಸ್ಥಾಪಿಸಬೇಕೆಂಬಹಂಬಲದಿಂದ ಬೆಳಗಾವಿ ನಗರದಲ್ಲಿ ಶ್ರೀ ಲಿಂಗಾಯತ ಧರ್ಮಪೀಠವನ್ನು ಪ್ರಾರಂಭಿಸಿದರು.ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿ ಭಕ್ತರನ್ನು ಸಂಪಾದಿಸಿಕೊಂಡು ತಮ್ಮ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾಮುಂದುವರೆದಿದ್ದಾರೆ ಶ್ರೀಗಳು ಸಾಹಿತ್ಯಿಕವಾಗಿಯೂ ಕ್ರಿಯಾಶೀಲರಿದ್ದು ಕೆಲ ವಚನಸಂಪುಟಗಳನ್ನು ಪ್ರಕಟಿಸಿದ್ದಾರೆ ಹಾಗೂ ಪ್ರತಿ ತಿಂಗಳ ಕೊನೆಯ ಸೋಮವಾರ ಮಾಸಿಕಶಿವಾನುಭವಗೋಷ್ಠಿಗಳನ್ನು ಆಯೋಜಿಸಿ ಶರಣತತ್ವಗಳನ್ನು ಪಸರಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಭಕ್ತರ ಸಹಕಾರದೊಂದಿಗೆ ಧಾರ್ಮಿಕ ಆಚರಣೆಗಳನ್ನುಮುಂದುವರೆಸಿಕೊಂಡು ಬರುತ್ತಿದ್ದು ಬಸವಜಯಂತಿಯಲ್ಲಿ ವಿಶೇಷವಾದ ಧಾರ್ಮಿಕಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಜೊತೆಯಲ್ಲಿ ಪ್ರತಿಯೊಬ್ಬಶಿವಶರಣರ ಜಯಂತಿಗಳನ್ನು ಆಚರಿಸುತ್ತಿದ್ದಾರೆ. ಶ್ರೀಗಳು ಭಕ್ತರಿಗೆ ಮೂಡನಂಬಿಕೆ,ಕಂದಾಚಾರ, ದುರಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ತಮ್ಮ ಸಮಾಜಮುಖಿಕಾರ್ಯಕ್ರಮಗಳ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಎಲ್ಲಾ ವರ್ಗದಜನರನ್ನು ತಲುಪಿರುವ ಶ್ರೀಗಳು ಸಮಾಜದಲ್ಲಿ ಸಮಾನತೆ ಹಾಗೂ ಸಾಮರಸ್ಯಕ್ಕಾಗಿಹೋರಾಡುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ನಿರಂಜನ ಜಗದ್ಗುರು ಬಸವಪ್ರಭು ಮಹಾಸ್ವಾಮಿಗಳು
Date of Birth :
01-06-1947
Place :
ಸಿರಗುಪ್ಪಿ, ಜಮಖಂಡಿ ತಾ||
Photo :
Programs
ಪ್ರತಿ ತಿಂಗಳ ಕೊನೆಯ ಸೋಮವಾರ ಮಾಸಿಕ ಶಿವಾನುಭವ ಗೋಷ್ಠಿ
ಬಸವ ಜಯಂತಿಗೆ ವಿಶೇಷ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
ಪ್ರತಿಯೊಬ್ಬ ಶರಣ ಜಯಂತಿಯನ್ನು ಆಚರಿಸಲಾಗುತ್ತದೆ.
Photos
Full Address Kannada
ಶ್ರೀ ಲಿಂಗಾಯತ ಧರ್ಮಪೀಠ
ಆಂಜನೇಯ ನಗರ,
ಬೆಳಗಾವಿ - 590 016