Shree Kotturu Swami Matha

Shree Kotturu Swami Matha Claimed

ಶ್ರೀ ಕೊಟ್ಟೂರು ಸ್ವಾಮಿ ಮಠ

Average Reviews

Description

ಶ್ರೀ ಕೊಟ್ಟೂರು ಸ್ವಾಮಿ ಮಠ

ಕರ್ತೃ ಶ್ರೀ ಮ.ನಿ.ಪ್ರ. ಕಪ್ಪಿನ ಚನ್ನಬಸವ ಸ್ವಾಮಿಗಳು

ಬಳ್ಳಾರಿ ಜಿಲ್ಲೆಯ ಪ್ರಮುಖ ನಗರಗಳಲ್ಲೊಂದಾದ ಹೊಸಪೇಟೆಯ ಮಧ್ಯಭಾಗದಲ್ಲಿ ಸುಮಾರು 16ನೇ ಶತಮಾನದ ಪ್ರಾರಂಭದಲ್ಲಿ ಶ್ರೀ ಕಪ್ಪಿನ ಚನ್ನಬಸವ ಸ್ವಾಮಿಗಳಿಂದಪ್ರಾರಂಭವಾಗಿರುವ ಶ್ರೀ ಕೊಟ್ಟೂರು ಸ್ವಾಮಿ ಮಠವು ಕರ್ನಾಟಕದ ಇತಿಹಾಸದಲ್ಲಿ ತನ್ನದೇಆದ ಸ್ಥಾನ ಹೊಂದಿದ್ದು ತನ್ನ ಶ್ರೀಮಂತ ಪರಂಪರೆಯ ಮೂಲಕ ಅಧಿಕ ಸಂಖ್ಯೆಯಭಕ್ತರನ್ನು ಹೊಂದಿ ಜನರಿಗೆ ಧಾರ್ಮಿಕ ಆಚರಣೆಗಳ ಮಹತ್ವವನ್ನು ತಿಳಿಸಿಕೊಡುವಲ್ಲಿಮಹತ್ವದ ಪಾತ್ರ ವಹಿಸಿದೆ.ಕರ್ತೃಗುರುಗಳಾದ ಶ್ರೀ ಕಪ್ಪಿನ ಚನ್ನಬಸವ ಸ್ವಾಮಿಗಳು ತಪೋನಿಷ್ಠರಾಗಿದ್ದುಸದಾ ಸಂಚಾರ ಮಾಡುತ್ತಾ ತಾವು ಅನುಷ್ಠಾನಗೊಂಡ ಕಡೆಗಳಲ್ಲೆಲ್ಲಾ ಮಠಗಳ ಸ್ಥಾಪನೆಗೆಕಾರಣರಾದರು. ಹೀಗೆ ಹೊಸಪೇಟೆಯಲ್ಲಿ ಮಠ ಸ್ಥಾಪಿಸಿದ ಶ್ರೀಗಳು ಹೊಸಪೇಟೆಯನ್ನುಕೇಂದ್ರವಾಗಿಟ್ಟುಕೊಂಡು ನಾಡಿನಾದ್ಯಂತ ವೀರಶೈವ ಧರ್ಮದ ಆಚರಣೆಗಳನ್ನು ಪ್ರಚುರಗೊಳಿಸಿದರು. ಶ್ರೀಗಳು ಬಳ್ಳಾರಿ, ಕೊಟ್ಟೂರು, ಕಲಬುರ್ಗಿ, ಕುರುಗೋಡು, ಕಮಲಾಪುರ,ಧಾರವಾಡ, ಬೆಳಗಾವಿ, ಗೋಕರ್ಣ, ಕಾಶಿ, ಕೇದಾರ, ಶ್ರೀಶೈಲ, ಶಿವಗಂಗೆ, ನವುಲುಗುಂದ,ನರಗುಂದ, ಬಾದಾಮಿ, ಹುನಗುಂದ, ಹಂಪಿ, ಕುಡುತಿನಿ ಮೊದಲಾದ ಕ್ಷೇತ್ರಗಳಲ್ಲಿ ಸಂಚಾರಕೈಗೊಂಡು ವೀರಶೈವ ಧರ್ಮದ ವ್ಯಾಪ್ತಿಯನ್ನು ವಿಸ್ತರಿಸಲು ಶ್ರಮಿಸಿದರು. ಈ ಮೂಲಕಸಮಾಜದ ಉನ್ನತಿಗೆ ಕಾರಣರಾದರು.ಕರ್ತೃಗುರುಗಳ ನಂತರ ಸುಮಾರು 18 ಜನ ಶ್ರೀಗಳು ಆಡಳಿತ ನಡೆಸಿದ್ದಾರೆಹಾಗೂ ಈಗಿನವರು 19ನೆಯವರು ಎಂದು ಹೇಳಲಾಗುತ್ತದೆ. ಆದರೆ ಪರಂಪರೆಯಲ್ಲಿಬಂದಿರುವ ಎಲ್ಲಾ ಶ್ರೀಗಳ ಬಗ್ಗೆ ನಿಖರವಾದ ಮಾಹಿತಿ ಲಭ್ಯವಿಲ್ಲ. ಕೆಲ ಶ್ರೀಗಳ ಬಗ್ಗೆಮಾಹಿತಿ ಲಭ್ಯವಿದೆ ಮತ್ತು ಪರಂಪರೆಯ ಎಲ್ಲಾ ಶ್ರೀಗಳು ತಮ್ಮ ಕಾಲಾವಧಿಯಲ್ಲಿ ಶ್ರೀಮಠದಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಜೊತೆಯಲ್ಲಿ ಶ್ರೀಮಠದ ಅಭಿವೃದ್ಧಿಗೆಶ್ರಮಿಸಿದ್ದಾರೆ.ಶ್ರೀಮಠದ ಪರಂಪರೆ ಹಾಗೂ ಇತಿಹಾಸ ಶ್ರೀಮಂತವಾಗಿದ್ದು ಶ್ರೀಗಳು ತಮ್ಮಪ್ರಭಾವದಿಂದ ಶ್ರೀಮಠವನ್ನು ಬೆಳೆಸಿದ್ದಾರೆ. ಶ್ರೀಮಠಕ್ಕೆ ಬಳ್ಳಾರಿಯ ರಾಜ ಬಾಲಹನುಮಪ್ಪನಾಯಕನು ಹಾಗೆಯೇ ಅಂಡೆ ಹಿರೇರಾಮಪ್ಪ ನಾಯಕನು ಇನ್ನೂ ಮುಂತಾದ ರಾಜರುಗಳುಶ್ರೀಮಠಕ್ಕೆ ನಡೆದುಕೊಂಡು ದತ್ತಿ ದೇಣಿಗೆಗಳನ್ನು ನೀಡಿರುವ ಉಲ್ಲೇಖವಿದೆ.ಹಿಂದಿನ ಶ್ರೀಗಳಾದ ಶ್ರೀ ಕೊಟ್ಟೂರು ಸ್ವಾಮಿಗಳು 1932ರಲ್ಲಿ ಅಧಿಕಾರಕ್ಕೆ ಬಂದುಶ್ರೀಮಠವನ್ನು ಸರ್ವರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ ಹಾಗೂ ಶ್ರೀಮಠದ ಶಾಖಾಮಠಗಳ ಅಭಿವೃದ್ಧಿ ಕಡೆಗೂ ಗಮನ ಕೊಟ್ಟಿದ್ದರು. ಶ್ರೀಗಳು ವಿದ್ವತ್ಪೂರ್ಣವಾಗಿ ಮಾತನಾಡಬಲ್ಲವರಾಗಿದ್ದು ತಮ್ಮ ಉಪದೇಶ ಹಾಗೂ ಪ್ರವಚನಗಳ ಮೂಲಕ ಜನರನ್ನು ಮನಸೂರೆಗೊಳ್ಳುತ್ತಿದ್ದರು ಎಂದು ತಿಳಿದುಬರುತ್ತದೆ. ಶ್ರೀಗಳು ಶಿಕ್ಷಣ ಪ್ರೇಮಿಗಳಾಗಿದ್ದು ಹಿಂದುಳಿದ ಜಿಲ್ಲೆಯವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕಸಂಘಕ್ಕೆ 464 ಎಕರೆ ಭೂಮಿಯನ್ನು ದಾನ ಮಾಡಿದ್ದು ಇದರಿಂದಾಗಿ ಸಂಘದವರುಬಳ್ಳಾರಿಯಲ್ಲಿ ಶ್ರೀ ಕೊಟ್ಟೂರು ಸ್ವಾಮಿ ಕಾಲೇಜ್ ಆಫ್ ಎಜ್ಯುಕೇಶನ್ ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಶ್ರೀಗಳ ಹೆಸರನ್ನು ಅಜರಾಮರಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಸಂಗನಬಸವ ಸ್ವಾಮಿಗಳು ಶಿವಯೋಗಮಂದಿರದಲ್ಲಿವಿದ್ಯಾಭ್ಯಾಸ ಮಾಡಿ ಕಾಶಿಯಲ್ಲಿ ಸಂಸ್ಕøತ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಪಾಂಡಿತ್ಯಪಡೆದು 1972ರಲ್ಲಿ ಶ್ರೀ ಕೊಟ್ಟೂರು ಸ್ವಾಮಿ ಮಠಕ್ಕೆ ಪಟ್ಟಾಧಿಕಾರಗೊಂಡರು. ಇದಕ್ಕೂಮುನ್ನ ಶ್ರೀಗಳು ಜಮಖಂಡಿಯ ಶ್ರೀ ಓಲೆ ಮಠದ ಅಧಿಕಾರವನ್ನು ನಡೆಸುತ್ತಿದ್ದರು. ಶ್ರೀಗಳುಶ್ರೀ ಕೊಟ್ಟೂರು ಸ್ವಾಮಿ ಮಠಕ್ಕೆ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠದ ಧಾರ್ಮಿಕ,ಸಾಂಸ್ಕøತಿಕ, ಸಾಮಾಜಿಕ ಆಚರಣೆಗಳು ಚುರುಕುಗೊಂಡವು ಹಾಗೂ ಸಮಸ್ತ ವೀರಶೈವಸಮಾಜದ ಉನ್ನತಿಗೋಸ್ಕರ ಶ್ರೀಗಳು ಶ್ರಮಿಸುತ್ತಿದ್ದು ಪ್ರಸ್ತುತ ಶ್ರೀ ಶಿವಯೋಗ ಮಂದಿರದಆಧ್ಯಕ್ಷರಾಗಿಯೂ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

Swamiji

Swamiji Name :
ಪರಮಪೂಜ್ಯ ಹಂಪಿ ಹೇಮಕೂಟ ಸಿಂಹಾಸನಾದೀಶ್ವರ ಜಗದ್ಗುರು ಶ್ರೀ ಸಂಗನಬಸವ ಮಹಾಸ್ವಾಮಿಗಳು
Place :
ಬಿದರಿ, ಜಮಖಂಡಿ ತಾ||
Pattadikara :
1972
Photo :

Programs

ಪ್ರತಿ ತಿಂಗಳ 16ರಂದು ಶಿವಾನುಭವ ಗೋಷ್ಠಿ. ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶ್ರಾವಣ ಮಾಸದಲ್ಲಿ ಪ್ರತಿ ದಿನ ಪುರಾಣ ಪ್ರವಚನ. ಕಾರ್ತೀಕ ಮಾಸದಲ್ಲಿ ದೀಪೋತ್ಸವ, ಧಾರ್ಮಿಕ ಕಾರ್ಯಕ್ರಮಗಳು.
ಶಿವರಾತ್ರಿ ಮತ್ತು ದಸರಾದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು.
ಬಸವಜಯಂತಿ ಆಚರಣೆ ಹಾಗೂ 1972ರಿಂದ ಸಾಮೂಹಿಕ ವಿವಾಹಗಳು.

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ ಪದವಿ ಪೂರ್ವ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ.

Photos

Full Address Kannada

ಶ್ರೀ ಕೊಟ್ಟೂರು ಸ್ವಾಮಿ ಮಠ
ಹೊಸಪೇಟೆ - 583 201,
ಬಳ್ಳಾರಿ ಜಿ||

Map

Near by Places

ಬಳ್ಳಾರಿ - 60 ಕಿ.ಮೀ.
ಹಗರಿಬೊಮ್ಮನಹಳ್ಳಿ - 35 ಕಿ.ಮೀ.
ಕೂಡ್ಲಿಗಿ - 50 ಕಿ.ಮೀ.
ಹಂಪಿ - 16 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!