ಕರ್ನಾಟಕದ ಇತಿಹಾಸದಲ್ಲಿ 15ನೇ ಶತಮಾನಕ್ಕೆ ವಿಶೇಷ ಇತಿಹಾಸವಿದೆ. ಶ್ರೀಯಡೆಯೂರು ಸಿದ್ದಲಿಂಗೇಶ್ವರರು ತಮ್ಮ ವಿರಕ್ತ ಶಿಷ್ಯರೊಡನೆ ದೇಶಾದಾದ್ಯಂತ ಸಂಚಾರಹೊರಟ ಕಾಲಘಟ್ಟ. ಯಡೆಯೂರು ಸಿದ್ದಲಿಂಗೇಶ್ವರರ ಶಿಷ್ಯರಲ್ಲಿ ಶ್ರೀ ಬೋಳಬಸವೇಶ್ವರರುಮತ್ತು ಅವರ ಶಿಷ್ಯ ಕಟ್ಟಿಗೆಹಳ್ಳಿ ಸಿದ್ದಲಿಂಗಸ್ವಾಮಿಗಳವರ ಪಾತ್ರ ಹಿರಿದಾದುದು. ಇಂತಹಕಟ್ಟಿಗೆಹಳ್ಳಿ ಸಿದ್ದಲಿಂಗಸ್ವಾಮಿಗಳ ಶಿಷ್ಯರಾದ ಮೂರನೆಯ ಶಾಂತವೀರ ಸ್ವಾಮಿಗಳು ಮತ್ತು ಶ್ರೀಚನ್ನಬಸವಾರ್ಯರು ಪ್ರಮುಖರು.ಶ್ರೀ ಮ.ನಿ.ಪ್ರ. ಚನ್ನಬಸವಾರ್ಯರು ಕ್ರಿ.ಶ. 1650 ರಿಂದ 1700ರವರೆಗೆಜೀವಿಸಿದ್ದು ಭಕ್ತರ ಸಹಕಾರದೊಂದಿಗೆ ಕೋಳುಗುಂದದಲ್ಲಿ ಶ್ರೀ ಕೇದಿಗೆ ಮಠವನ್ನು ಸ್ಥಾಪನೆಮಾಡಿದರು. ಇವರ ನಂತರದ ಉತ್ತರಾಧಿಕಾರಿಗಳ ಬಗ್ಗೆ ಮಾಹಿತಿ ಅಸ್ಪಷ್ಟವಾಗಿದ್ದುಹೆಸರುಗಳು ಮಾತ್ರ ತಿಳಿದು ಬರುತ್ತದೆ. 5ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಷಣ್ಮುಖ ಸ್ವಾಮಿಗಳನಂತರದ ಮಠದ ಇತಿಹಾಸ ಸ್ಪಷ್ಟವಾಗಿ ದೊರಕುತ್ತದೆ. ಕಾರಣ ಅಲ್ಲಿಂದ ಮುಂದಿನಪರಂಪರೆಯಲ್ಲಿ ಬಂದ ಗುರುಗಳ ಗದ್ದುಗೆಗಳು ಮಠದ ಆವರಣದಲ್ಲಿವೆ.ಪರಂಪರೆಯ 8ನೇ ಶ್ರೀಗಳಾದ ಶ್ರೀ ರುದ ್ರಮುನಿ ಸ್ವಾಮಿಗಳುಮಹಾಜ್ಞಾನಿಗಳಾಗಿದ್ದು ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದರು. ಇವರ ಕಾಲಘಟ್ಟ1900 ರಿಂದ 1958 ಆಗಿದ್ದು ಈ ಕಾಲದಲ್ಲಿ ಮಠ ಸಂಪೂರ್ಣ ಅಭಿವೃದ್ದಿಗೊಂಡಿತು. ಶ್ರೀಗಳು1922ರಲ್ಲಿ ನೂತನ ಕಟ್ಟಡವನ್ನು ಕಟ್ಟಿಸಿದ್ದು ಆ ಕಟ್ಟಡ ಇಂದಿಗೂ ಉಳಿದುಕೊಂಡು ಬಂದಿದೆ.ಹಿಂದಿನ ಶ್ರೀಗಳಾದ ಶ್ರೀ ಶಿವಲಿಂಗ ಸ್ವಾಮಿಗಳು 1962ರ ಮೇ 14ರಂದು ಶ್ರೀಮಠದ ಅಧಿಕಾರಸ್ವೀಕರಿಸಿ ಕೇವಲ 10 ವರ್ಷಗಳಲ್ಲಿ ಮಠದ ಸ್ಥಿತಿಯನ್ನು ಸುದಾರಿಸಿದರು.ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಜಯಚಂದ್ರಶೇಖರ ಸ್ವಾಮಿಗಳು 1977ರ ಮೇ01ರಂದು ವಿರಕ್ತಾಶ್ರಮವನ್ನು ಸ್ವೀಕರಿಸಿದ್ದು ಶ್ರೀಕ್ಷೇತ್ರ ಸಿದ್ದಗಂಗೆಯಲ್ಲಿ ಶ್ರೀ ಶಿವಕುಮಾರಸ್ವಾಮಿಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡವರು. ಶ್ರೀಗಳು ಶ್ರೀಮಠದ ಎಲ್ಲಾಕಂದಾಚಾರಗಳನ್ನು ದೂರಮಾಡಿ ಮಠವನ್ನು ಸಮಾಜ ಮುಖಿಯಾಗಿ ಮುನ್ನಡೆಸುತ್ತಿದ್ದಾರೆ.ಶ್ರೀಮಠದ ಕಟ್ಟಡ ಅಲ್ಲಲ್ಲಿ ಜೀರ್ಣಗೊಂಡಿದ್ದು ಶ್ರೀಗಳು ಸಂಪೂರ್ಣಜೀರ್ಣಾಭಿವೃದ್ದಿಗೊಳಿಸಿದ್ದಾರೆ. ಶ್ರೀಗಳ ದೆಸೆಯಿಂದ ಶ್ರೀಮಠದ ಜೊತೆಗೆ ಗ್ರಾಮವೂಸರ್ವರೀತಿಯಲ್ಲಿ ಅಭಿವೃದ್ದಿಗೊಳ್ಳುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಯ ಚಂದ್ರಶೇಖರ ಸ್ವಾಮಿಗಳು
Date of Birth :
16-04-1960
Place :
ಅರಕೆರೆ, ಅರಸೀಕೆರೆ ತಾ||
Pattadikara :
01-05-1977
Photo :
Programs
ಬಸವ ಜಯಂತಿ ಆಚರಣೆ, ಪ್ರವಚನ ಪಾಲ್ಗುಣ ಮಾಸದಲ್ಲಿ ಶ್ರೀ ಮಹೇಶ್ವರ ಜಾತ್ರೆ
Photos
Full Address Kannada
ಶ್ರೀ ಕೇದಿಗೆ ಮಠ
ಕೋಳುಗುಂದ - 573 125
ಅರಸೀಕೆರೆ ತಾ||, ಹಾಸನ ಜಿಲ್ಲೆ