ತುಮಕೂರು ನಗರದ ಹೊರಪೇಟೆಯಲ್ಲಿರುವ ಶ್ರೀ ಕರಿಬಸವ ಸ್ವಾಮಿ ಮಠವುಆಂಧ್ರಪ್ರದೇಶದ ಉರುವಕೊಂಡ ಮಠದ ಶಾಖಾಮಠವಾಗಿ ಬೆಳೆದು ಬಂದಿದೆ. ಸುಮಾರು1820ರ ಸುಮಾರಿನಲ್ಲಿ ಸ್ಥಾಪಿತಗೊಂಡಿರುವ ಶ್ರೀ ಮಠವು ಕಳೆದ ಮೂರು ದಶಕಗಳಿಂದೀಚೆಗೆಅಭಿವೃದ್ಧಿ ಹೊಂದಿದೆ. ಶ್ರೀ ಮಠದ ಮೂಲ ಮಠ ಉರುವಕೊಂಡ ಮಠದ ಗುರುಗಳೇತುಮಕೂರಿನ ಶಾಖಾಮಠವನ್ನು ಮುನ್ನಡೆಸಿಕೊಂಡು ಬರುತ್ತಾರೆ.ಎಡೆಯೂರು ಸಿದ್ದಲಿಂಗೇಶ್ವರರು ತಮ್ಮ ಪ್ರವಾಸ ಕಾಲದಲ್ಲಿ ಉರುವಕೊಂಡಗವಿಯಲ್ಲಿ ಅನುಷ್ಟಾನಗೊಂಡಿದ್ದು ನಂತರ ಈ ಸ್ಥಳದಲ್ಲಿ ಮಠ ಸ್ಥಾಪನೆಯಾಯಿತೆಂದುಹೇಳಲಾಗುತ್ತಿದೆ. ಉರುವಕೊಂಡ ಮೂಲ ಮಠವನ್ನು ಶ್ರೀ ಜಗದ್ಗುರು ಕರಿಬಸವ ರಾಜೇಂದ್ರಮಹಾಸ್ವಾಮಿಗಳು ಸ್ಥಾಪಿಸಿದ್ದು ಇಲ್ಲಿಯವರೆಗೂ 8 ಜನ ಶ್ರೀಗಳು ಅಧಿಕಾರ ನಡೆಸಿದ್ದಾರೆ. ಶ್ರೀಮಠದ ಶ್ರೀಗಳು ಸಂಚಾರ ಮೂರ್ತಿಗಳಾಗಿದ್ದು ಈ ರೀತಿ ಸಂಚಾರದಲ್ಲಿದ್ದ ಸಮಯದಲ್ಲಿತುಮಕೂರಿನಲ್ಲಿ ಮಠ ಸ್ಥಾಪನೆಯಾಗಿದೆ.ಉರುವಕೊಂಡ ಮಠದ 7ನೇ ಶ್ರೀಗಳಾಗಿದ್ದ ಶ್ರೀ ಕರಿಬಸವರಾಜೇಂದ್ರ ಸ್ವಾಮಿಗಳುಮಹಾತಪಸ್ವಿಗಳಾಗಿದ್ದು ಇವರ ಕಾಲದಲ್ಲಿ ತುಮಕೂರಿನ ಶ್ರೀ ಮಠವು ತನ್ನ ಅಸ್ತಿತ್ವವನ್ನುಪುನರ್ ಸ್ಥಾಪಿಸಿಕೊಂಡಿದೆ. ಈ ರೀತಿಯಾಗಿ ಬೆಳೆದ ಮಠಕ್ಕೆ 1961ರಲ್ಲಿ ಪಟ್ಟಾಧಿಕಾರಿಗಳಾಗಿಬಂದವರು ಈಗಿನ ಶ್ರೀಗಳಾದ ಶ್ರೀ ಜಗದ್ಗುರು ಚನ್ನಬಸವರಾಜೇಂದ್ರ ಮಹಾಸ್ವಾಮಿಗಳು.ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ತುಮಕೂರಿನ ಮಠವು ಸರ್ವಾಂಗೀಣವಾಗಿಅಭಿವೃದ್ಧಿಗೊಂಡಿದೆ. ಮುಂದೆ 1984ರಲ್ಲಿ ಈ ಶ್ರೀಗಳೇ ಉರುವಕೊಂಡ ಮೂಲಮಠಕ್ಕೂಜಗದ್ಗುರುಗಳಾಗಿ ಅಧಿಕಾರ ವಹಿಸಿಕೊಂಡರು. ಶ್ರೀಗಳು ಮೂಲಮಠ ಹಾಗೂ ನೂರಾರುಶಾಖಾ ಮಠಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದು ತುಮಕೂರಿನ ಮಠದಲ್ಲಿ ಹೆಚ್ಚಾಗಿವಾಸ್ತವ್ಯ ಕೈಗೊಳ್ಳುತ್ತಾರೆ.ಶ್ರೀ ಉರುವಕೊಂಡ ಮಠದ ಶ್ರೀಗಳ ವೈಶಿಷ್ಟ್ಯವೆಂದರೆ ಶ್ರೀ ಮಠದ ಗುರುಗಳು ಶ್ರೀಕರಿಬಸವರಾಜೇಂದ್ರ ಸ್ವಾಮಿಗಳು ಹಾಗೂ ಶ್ರೀ ಚನ್ನಬಸವರಾಜೇಂದ್ರ ಸ್ವಾಮಿಗಳೆಂದುಅನುಕ್ರಮವಾಗಿ ಅಭಿದಾನ ಪಡೆದು ಅಧಿಕಾರಕ್ಕೆ ಬರುವುದು. ಶ್ರೀ ಮಠದಲ್ಲಿ ನಿತ್ಯ ಧಾರ್ಮಿಕಆಚರಣೆಗಳೊಂದಿಗೆ ವಿಜಯದಶಮಿಯಲ್ಲಿ 10 ದಿನಗಳ ಕಾಲ ಪುರಾಣ ಪಾರಾಯಣನಡೆಯುತ್ತಿದ್ದು, ಪಾಲ್ಗುಣ ಮಾಸದಲ್ಲಿ ಶ್ರೀ ಕಾಶಿ ವಿಶ್ವನಾಥಸ್ವಾಮಿ ಹಾಗೂ ಶ್ರೀ ಎಡೆಯೂರುಸಿದ್ದಲಿಂಗೇಶ್ವರ ರಥೋತ್ಸವ ಜರುಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ.ಸ್ವ. ಜ. ಚನ್ನಬಸವ ರಾಜೇಂದ್ರ ಮಹಾಸ್ವಾಮಿಗಳು
Date of Birth :
20-09-1933
Place :
ಮಾರ್ಗಣಕೊಪ್ಪ, ಬೈಲಹೊಂಗಲ ತಾ||
Pattadikara :
1961
Photo :
Programs
ಪಾಲ್ಗುಣ ಮಾಸದಲ್ಲಿ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ಹಾಗೂ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ರಥೋತ್ಸವಗಳು ವಿಜಯ ದಶಮಿಗೆ 10 ದಿವಸಗಳ ಕಾಲ ಶ್ರೀದೇವಿ ಪುರಾಣ ಪಾರಾಯಣ
Photos
Full Address Kannada
ಶ್ರೀ ಕರಿಬಸವಸ್ವಾಮಿ ಮಠ ಹೊರಪೇಟೆ, ತುಮಕೂರು - 572 101 ತುಮಕೂರು ಜಿಲ್ಲೆ