ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣಕ್ರಾಂತಿಯ ಕೇಂದ್ರವಾಗಿಅಲ್ಲಮಪ್ರಭುವಿನ ಅಧ್ಯಕ್ಷತೆಯಲ್ಲಿ ಸ್ಥಾಪಿತಗೊಂಡ ಶೂನ್ಯಸಿಂಹಾಸನದ ಪರಂಪರೆಯಲ್ಲಿಬೆಳೆದುಬಂದ ಧರ್ಮಪೀಠ ಬೆಳಗಾವಿ ನಗರದ ಕಾರಂಜಿಮಠ. ಮೂರುನೂರು ವರ್ಷಗಳಇತಿಹಾಸವನ್ನು ಹೊಂದಿರುವ ಬೆಳಗಾವಿಯ ಕಾರಂಜಿ ಮಠದ ಕರ್ತೃಗುರುಗಳೆಂದು ಶ್ರೀ.ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳನ್ನು ಹೆಸರಿಸಲಾಗಿದೆ.ಮೂರು ನೂರು ವರ್ಷಗಳ ಇತಿಹಾಸ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿರುವಶ್ರೀಮಠಕ್ಕೆ 1991ರಲ್ಲಿ ಶ್ರೀ. ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು ಪಟ್ಟಾಧಿಕಾರಿಯಾದರು.ಶ್ರೀಗಳು ಕಾಶಿಯ ಬನಾರಸ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿಪಡೆದಿದ್ದಾರಲ್ಲದೆ ತತ್ವಜ್ಞಾನವನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಶ್ರೀಗಳು ಶ್ರೀಮಠಕ್ಕೆಬಂದಂದಿನಿಂದ ಶ್ರೀಮಠದ ಸುವರ್ಣಯುಗ ಪ್ರಾರಂಭವಾಯಿತು.1991ರಲ್ಲಿ ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದ ಶ್ರೀಗಳು 2000ರಲ್ಲಿಶಿವಬಸವನಗರದಲ್ಲಿ ಅನುಭವಮಂಟಪದ ಮಾದರಿಯಲ್ಲಿ ಮಠವನ್ನು ನಿರ್ಮಿಸಿದರು. ಈಮಠದಲ್ಲಿ ಬಸವಣ್ಣನವರ ತಾತ್ವಿಕ ಮೌಲ್ಯಗಳ ಪ್ರಸಾದದ ಜೊತೆಗೆ ವಿವಿಧ ಧರ್ಮ, ಸಮಾಜ,ಶಿಕ್ಷಣ, ಪುಸ್ತಕ ಪ್ರಕಟಣೆ ಹಾಗೂ ನಾಡುನುಡಿಗಳ ಹಿತ ಚಿಂತನೆಗಳ ಗೋಷ್ಠಿಗಳುನಡೆಯುತ್ತಿವೆ. ಅಲ್ಲದೆ ಪ್ರತಿಭಾನ್ವಿತ ಮಕ್ಕಳನ್ನು ಹಾಗೂ ಒಳ್ಳೆಯ ಕಾರ್ಯ ಮಾಡಿದಮಹನೀಯರನ್ನು ಸನ್ಮಾನಿಸಿ ಪುರಸ್ಕರಿಸಲಾಗುತ್ತಿದೆ. ಮಠದಲ್ಲಿ ಸ್ತ್ರೀಯರಿಗೆ ಸಮಾನತೆಕಲ್ಪಿಸಿದ್ದು ಇಲ್ಲಿ ಮಾತೃ ಮಂಡಳಿ ಸಹ ಇದೆ. ಆಗಾಗ ಸಂಗೀತ, ಪ್ರಾಣಾಯಾಮ, ಯೋಗಶಿಬಿರಗಳನ್ನು ಆಯೋಜಿಸುವುದರ ಮೂಲಕ ಭಕ್ತರಲ್ಲಿ ಸರ್ವ ಸಮಾನತೆಯ, ಸಾಂಸ್ಕøತಿಕಅರಿವನ್ನು ಮೂಡಿಸಲಾಗುತ್ತಿದೆ.ಬೆಳಗಾವಿ ಕಾರಂಜಿಮಠವು ನಿಜವಾದ ಅರ್ಥದಲ್ಲಿ ಗಡಿಭಾಗದ ಭಕ್ತಿ-ಕಾಯಕದಾಸೋಹಗಳ ಸಂಗಮವಾಗಿದೆ. ಶ್ರೀ ಗುರುಸಿದ್ದ ಮಹಾಸ್ವಾಮಿಗಳ ನಿರಂತರ ಸಾಮಾಜಿಕಕಾರ್ಯಕ್ರಮಗಳ ಮೂಲಕ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಗಳುಶ್ರೀಮಠವನ್ನು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹ್ಯಿತಕ ಕಾರ್ಯಕ್ರಮಗಳ ಮೂಲಕಭಕ್ತರ ಶ್ರದ್ಧಾಭಕ್ತಿಯ ಹಾಗೂ ಸಾಮಾಜಿಕ ಅರಿವಿನ ಅನುಭವ ಮಂಟಪವನ್ನಾಗಿಪರಿವರ್ತಿಸಿದ್ದಾರೆ.
ವಿಶೇಷತೆ
“ಡೆಪ್ಯೂಟಿ ಚೆನ್ನಬಸಪ್ಪ ಮಕ್ಕಳ ಸಾಹಿತಿ ಪ್ರಶಸ್ತಿ”
(10,000 ನಗದು ಹಾಗೂ ಪ್ರಶಸ್ತಿ ಫಲಕ)
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳು
Date of Birth :
1950
Place :
ಮಾರಿಹಾಳ, ಬೆಳಗಾವಿ ಜಿ||
Pattadikara :
1991
Photo :
Programs
ಪ್ರತಿ ಸೋಮವಾರ ಸಾಮೂಹಿಕ ಪ್ರಾರ್ಥನೆ ಹಾಗೂ ಧ್ಯಾನ ಪ್ರತಿ ತಿಂಗಳ ಮೊದಲನೇ ಸೋಮವಾರ ಮಾಸಿಕ ಶಿವಾನುಭವ ಗೋಷ್ಠಿಗಳು
ಶ್ರಾವಣ ಮಾಸದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಶಿವರಾತ್ರಿಯಲ್ಲಿ ವಿಶೇಷ ಕಾರ್ಯಕ್ರಮಗಳು
ಪ್ರತಿ ವರ್ಷ ಆಗಾಗ ಸಂಗೀತ, ಪ್ರಾಣಾಯಾಮ, ಯೋಗ ಶಿಬಿರಗಳ ಆಯೋಜನೆ
ಪ್ರತಿ ವರ್ಷ ವಾರ್ಷಿಕೋತ್ಸವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು,
ಪುಸ್ತಕ ಪ್ರಕಟನೆ
Photos
Full Address Kannada
ಶ್ರೀ ಕಾರಂಜಿ ಮಠ
ಶಿವಬಸವ ನಗರ, ಬೆಳಗಾವಿ - 590 016
ಬೆಳಗಾವಿ ತಾ||, ಜಿಲ್ಲೆ