Shree Karadeshwara Matha

Shree Karadeshwara Matha Claimed

ಶ್ರೀ ಕಾರದೇಶ್ವರ ಮಠ

Average Reviews

Description

ಶ್ರೀ ಕಾರದೇಶ್ವರ ಮಠ

ಕರ್ತೃ – ಶ್ರೀ ಮ. ನಿ. ಪ್ರ. ಕಾರದ ಮಹಾಶಿವಯೋಗಿಗಳು

ತುಮಕೂರು ಜಿಲ್ಲಾ ಕೇಂದ್ರದಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ಬೆಳ್ಳಾವಿಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಕಾರದೇಶ್ವರ ಮಠವು ತನ್ನ ಧಾರ್ಮಿಕ, ಸಾಮಾಜಿಕಕಾರ್ಯಕ್ರಮಗಳ ಮೂಲಕ ಪ್ರಸಿದ್ದಿ ಪಡೆದಿದೆ. ಬೆಳ್ಳಾವಿ ಗ್ರಾಮದ ಮೂಲ ಹೆಸರು ಶ್ವೇತಕಮಠಾಪುರಿ ಎಂದಿದ್ದು ಪುರಾತನ ವಾಣಿಜ್ಯ ಕೇಂದ್ರವಾಗಿತ್ತು. ಇಲ್ಲಿ ಜನತೆ ಶ್ರೀಮಂತಿಕೆಯಿಂದಕೂಡಿದ್ದು ಇದರಲ್ಲಿ ವೀರಶೈವ ಧರ್ಮ ಸಿದ್ದಾಂತದ ಕೊರತೆಯಿತ್ತು. ಆ ಕೊರತೆಯನ್ನುನೀಗಿಸಲೆಂದೇ ಉತ್ತರದ ಕಡೆಯಿಂದ ಬಂದವರು ಕರ್ತೃಗುರುಗಳಾದ ಶ್ರೀ ಮ. ನಿ. ಪ್ರ.ಕಾರದ ಮಹಾ ಶಿವಯೋಗಿಗಳು.ಶ್ರೀ ಕಾರದ ಮಹಾಶಿವಯೋಗಿಗಳ ಪೂರ್ವಾಶ್ರಮದ ಕುರಿತಂತೆ ನಿಖರದಾಖಲೆಗಳಿಲ್ಲ. ಬೆಳ್ಳಾವಿ ಮೂಲೆಮಠದ ರುದ್ರಶಾಸ್ತಿಗಳು ರಚಿಸಿದ “ಶ್ರೀ ಕಾರದಗುರುವರೇಣ್ಯರ ಚರಿತಂ” ಎಂಬ ಕೃತಿಯನ್ನೇ ಆಧಾರವಾಗಿಟ್ಟುಕೊಳ್ಳಬಹುದು. ಶ್ರೀ ಕಾರದಶಿವಯೋಗಿಗಳ ನಿಜ ನಾಮದೇಯ ಜೈ ಶಂಕರ ಸ್ವಾಮಿಗಳೆಂದು, ಇವರ ಜನ್ಮಸ್ಥಾನಉತ್ತರದ ಸೊನ್ನಲಿಗೆಯ ರೇವೇಗಿ ಮಠದ ಮಹಂತಿನ ಮಠವೆಂದು ಉಲ್ಲೇಖಿಸಲಾಗಿದೆ.ಶ್ರೀ ಕಾರದ ಶಿವಯೋಗಿಗಳು ಬಾಲ್ಯದಲ್ಲಿಯೇ ವೈರಾಗ್ಯ ಮೂರ್ತಿಗಳಾಗಿದ್ದುಕಠೋರ ಅನುಷ್ಟಾನ ಮೂರ್ತಿಗಳು. ಶ್ರೀ ಪುರಿ ಮಠಾದೀಶರಿಂದ ಅನುಗ್ರಹ ಪಡೆದುಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್ಸ್ಥಲವೇ ಆತ್ಮವಾಗಿಸಿಕೊಂಡುಶಿವಾನುಭಾವಿಗಳಾದರು. ಹಿಮಾಚಲ, ಹರಿದ್ವಾರ, ಗಯಾ, ಪ್ರಯಾಗ, ಬದರಿಕಾಶ್ರಮ,ನೇಪಾಳ, ಕಪಿಲದ್ವಾರ, ಕಪ್ಪತ್ತಗಿರಿ, ಷಣ್ಮುಖಾದ್ರಿ ಮುಂತಾದ ಕ್ಷೇತ್ರಗಳಲ್ಲಿ ಸಂಚರಿಸಿ ಅಲ್ಲಲ್ಲಿತಪಗೈದು, ಹಠಯೋಗ ಮತ್ತು ಶಿವಯೋಗತ್ತ್ವವನ್ನು ಗಟ್ಟಿಗೊಳಿಸಿಕೊಂಡಿದ್ದರು. ದೇಶಸಂಚಾರದಲ್ಲಿ ಶ್ರೀ ಲಿಂಗಣ್ಣ ತಾತ ಮತ್ತು ಶ್ರೀ ಅಟವೀ ಶಿವಯೋಗಿಗಳ ಸತ್ಸಂಗ ಇವರಿಗೆಲಭಿಸಿತ್ತೆಂದು ತಿಳಿದುಬರುತ್ತಿದ್ದು ಈ ಮೂವರೂ ಜೊತೆ-ಜೊತೆಯಾಗಿಯೇ ಸಂಚರಿಸುತ್ತಾತುಮಕೂರು ಜಿಲ್ಲೆಯತ್ತ ಆಗಮಿಸಿ ನೆಲೆನಿಂತಿದ್ದು ಗಮನಾರ್ಹ ಸಂಗತಿಯಾಗಿದೆ.ಶ್ರೀ ಕಾರದ ಶಿವಯೋಗಿಗಳು ಅಲ್ಲಲ್ಲಿ ಸಂಚರಿಸುತ್ತಾ ಬೆಳ್ಳಾವಿ ಗ್ರಾಮಕ್ಕೆ ಆಗಮಿಸಿಊರ ಹೊರಭಾಗದ ಕೆರೆ ದಡದಲ್ಲಿ ನೆಲೆನಿಂತರು. ಶ್ರೀಗಳು ಇಲ್ಲಿ ನೆಲೆನಿಂತರೂ ಸದಾಸಂಚಾರ ಮೂರ್ತಿಗಳಾಗಿದ್ದರು. ಭಕ್ತರ ಮನೆ ಮನೆಗಳಲ್ಲಿ ಪೂಜೆ ಪ್ರಸಾದ ಮುಗಿಸಿ ಅವರನ್ನುಆಶೀರ್ವದಿಸುತ್ತಿದ್ದರಂತೆ. ಹೀಗೆ ಜೀವನ ನಡೆಸುತ್ತಾ ಭಕ್ತ ಜನಾಭೀಷ್ಟಗಳನ್ನು ಪೂರೈಸುತ್ತಾ,ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದರು.ಶ್ರೀ ಕಾರದ ಶಿವಯೋಗಿಗಳಿಗೆ ಈ ಅನ್ವರ್ಥಕ ಹೆಸರು ಬಂದುದೇ ಒಂದುವಿಶೇಷ. ಅವರು ಸ್ವೀಕರಿಸುತ್ತಿದ್ದ ಪ್ರಸಾದವೆಂದರೆ – ಬಿಲ್ವಪತ್ರೆ, ದೊಡ್ಡಪತ್ರೆ,ಒಣಮೆಣಸಿನಕಾಯಿಗಳನ್ನು ಉಪ್ಪÅ, ಹುಳಿ ಸೇರಿಸದೆ ಅರೆದು ಮುದ್ದೆಕಟ್ಟಿ ಶಿವಪೂಜೆಯನಂತರ ಸೇವಿಸುವುದು. ಇದುವೇ ಇವರ ಲಿಂಗ ಪ್ರಸಾದ. ಹೀಗೆ ಒಂದು ಮುದ್ದೆ ಕಾರವನ್ನು9192ಸೇವಿಸಿದರೆ ಒಮ್ಮೊಮ್ಮೆ ಹದಿನೈದು ದಿವಸಗಳವರೆಗೂ ಉಪವಾಸವಿರುತ್ತಿದ್ದರಂತೆ. ಅಂತಹಕಠೋರ ವ್ರತದಾರಿಗಳಾಗಿದ್ದರು ಕಾರದ ಶ್ರೀಗಳು. “ಬಿಲ್ವಪತ್ರೆ” ಶಿವಯೋಗಿಗಳಿಗೆ ಪರಮಪ್ರಿಯವಾದದು. ತಾವು ಸೇವಿಸುವ ಆಹಾರದಲ್ಲಿ ಬಿಲ್ವಪತ್ರೆ ಕಡ್ಡಾಯವಾಗಿರಬೇಕು ಎಂಬನೇಮ ಅವರದ್ದು. ಹಾಗೆಯೇ ತಮ್ಮ ಪೂಜಾ ಸಮಯದಲ್ಲಿ ತ್ರಿದಳ ಬಿಲ್ವಪತ್ರೆಯೂ ಕಡ್ಡಾಯ.ಈ ಎಲ್ಲಾ ಕಾರಣಗಳಿಂದಾಗಿಯೇ ಶ್ರೀಗಳು ಕಾರದ ಶ್ರೀಗಳೆಂದೇ ಹೆಸರಾದರು.ಶ್ರೀಗಳ ಪವಾಡಗಳು ಜನಜನಿತವಾದವುಗಳು. ಭಕ್ತರು ಅವರ ಬಗೆಗಿನ ನೂರಾರುಪವಾಡಗಳನ್ನು ಹೇಳುತ್ತಾರೆ. ಅವುಗಳೆಲ್ಲವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಾದುದಲ್ಲ.ಆದರೆ ಇಂದಿಗೂ ಶಿವಯೋಗಿಗಳ ಗದ್ದುಗೆ ಮಹಿಮೆಯುಳ್ಳದ್ದಾಗಿದ್ದು ಶ್ರೀಗಳು ತಾವಿರುವಾಗಮಠದ ಆವರಣದಲ್ಲಿ ನೆಟ್ಟ ನಾಗಲಿಂಗ ಪುಷ್ಪದ ಮರದ ಮುಖಾಂತರ ಇಂದಿಗೂ ಅನೇಕಲೀಲೆಗಳನ್ನು ತೋರುತ್ತಿದ್ದಾರೆಂಬುದು ಭಕ್ತರ ಅರಿವಿಗೆ ಬಂದಿರುವುದು. ಇಂತಹ ಮಹಾನ್ಶಿವಯೋಗಿಗಳು 1908ರಲ್ಲಿ ನಿರ್ವಿಕಲ್ಪ ಸಮಾದಿ ಹೊಂದಿದರು. ಆದರೆ ಅವರ ನಂತರಅವರ ವಾಣಿಯಂತೇ ಶ್ರೀ ಮಠವು ಒಂದು ಶತಮಾನ ಕಾಲ ಖಾಲಿ ಉಳಿದು ಇದೀಗ2009ರಲ್ಲಿ ನೂತನ ಗುರುವಿನ ಆಗಮನವಾಗಿದೆ.ಶ್ರೀ ಮ. ನಿ. ಪ್ರ. ಸ್ವ ಕಾರದ ವೀರಬಸವ ಮಹಾಸ್ವಾಮಿಗಳು 2009ರ ಜುಲೈ27ರಂದು ಶ್ರೀ ಕಾರದೇಶ್ವರ ಮಠದ ಎರಡನೇ ಪೀಠಾದಿಪತಿಗಳಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಶ್ರೀ ಮಠದ ಸರ್ವ ಅಭಿವೃದ್ಧಿಯನ್ನು ಮತ್ತು ವಿವಿಧ ಧಾರ್ಮಿಕಕಾರ್ಯಗಳನ್ನು ಹಮ್ಮಿಕೊಂಡು ಧರ್ಮಜಾಗೃತಿಯ ಕ್ರಿಯೆಯೊಂದಿಗೆ ಸರ್ವಭಕ್ತರಿಗೆಧರ್ಮ-ಸಂಸ್ಕøತಿ ಸಂಸ್ಕಾರ ನೀಡುತ್ತಿದ್ದಾರೆ. ಶ್ರೀಗಳು ಚಿಕ್ಕತೊಟ್ಲುಕೆರೆ ಶ್ರೀ ಅಟವೀ ಜಂಗಮಸುಕ್ಷೇತ್ರ ಮಠ ಹಾಗೂ ಶಿರಸಿಯ ಬಣ್ಣದ ಮಠಗಳಲ್ಲಿದ್ದುಕೊಂಡು ಸಂಸ್ಕøತಮಹಾಕಾವ್ಯಗಳನ್ನು ಅಭ್ಯಸಿಸಿದವರು. ಇಂತಹ ಶ್ರೀಗಳು ಇಂದು 30ಕ್ಕೂ ಅಧಿಕವಿದ್ಯಾರ್ಥಿಗಳನ್ನು ಶ್ರೀ ಮಠದಲ್ಲಿ ವಾಸ್ತವ್ಯವಿರಿಸಿಕೊಂಡು ಅನ್ನ-ಅಕ್ಷರ ದಾಸೋಹವನ್ನುನೀಡುತ್ತಿದ್ದಾರೆ.ಶ್ರೀ ಮ.ನಿ.ಪ್ರ. ಕಾರದ ವೀರಬಸವ ಸ್ವಾಮಿಗಳು ಕರ್ತೃ ಗುರುಗಳಂತೆಯೇಕ್ರಿಯಾಶೀಲರು. ಸದಾ ಚಟುವಟಿಕೆಯಿಂದಿರುತ್ತ, ಬಂದ ಭಕ್ತರ ಆಶೋತ್ತರಗಳಿಗೆ ಸ್ಪಂದಿಸುತ್ತಾಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ. ಶ್ರೀ ಮಠದ ಅಭಿವೃದ್ಧಿ ಕಾರ್ಯದ ಜೊತೆಗೆಸಮಷ್ಠಿ ಸಮಾಜದ ಒಳಿತಿಗಾಗಿ, ಸಮಾಜದ ಒಗ್ಗಟ್ಟಿಗಾಗಿ ಶ್ರಮಿಸುತ್ತಿರುವ ಶ್ರೀಗಳು ಸದಾಚಿಂತನಾ ಶೀಲರು.

Swamiji

Swamiji Name :
ಶ್ರೀ ಮ. ನಿ. ಪ್ರ. ಸ್ವ. ಕಾರದ ವೀರಬಸವ ಮಹಾಸ್ವಾಮಿಗಳು
Date of Birth :
15-06-1984
Place :
ಅಕ್ಕುರು, ಹಾವೇರಿ ತಾ||
Pattadikara :
27-07-2009
Photo :

Programs

ಪ್ರತಿ ಅಮವಾಸ್ಯೆಗೆ "ಶಿವಾನುಭವ ಗೋಷ್ಠಿ" ಯುಗಾದಿ ಆದ 15ನೇ ದಿನಕ್ಕೆ ಧ್ವಜಾರೋಹಣ, ರಥೋತ್ಸವ, ಮುತ್ತಿನ ಅಡ್ಡ ಪಲ್ಲಕಿ ಉತ್ಸವ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಧನುರ್ಮಾಸದಲ್ಲಿ ಲಕ್ಷ ಬಿಲ್ವಾರ್ಚನೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ನವರಾತ್ರಿಯಲ್ಲಿ ನವರಾತ್ರೋತ್ಸವ

Institutions

ಶ್ರೀ ಮಠದಲ್ಲಿ ಬಡ ವಿದ್ಯಾರ್ಥಿಗಳಿಗೆ ಅಕ್ಷರ-ಅನ್ನ ದಾಸೋಹದ ಜೊತೆಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

Photos

Full Address Kannada

ಶ್ರೀ ಕಾರದೇಶ್ವರ ಮಠ ಬೆಳ್ಳಾವಿ - 572 107 ತುಮಕೂರು ತಾ||, ತುಮಕೂರು ಜಿಲ್ಲೆ

Map

Near by Places

ತುಮಕೂರು - 13 ಕಿ.ಮೀ. ಗುಬ್ಬಿ - 16 ಕಿ.ಮೀ. ಶಿರಾ - 30 ಕಿ.ಮೀ.

Statistic

217 Views
0 Rating
0 Favorite
1 Share
error: Content is protected !!