Shree Kanchalakunti Nandishwara Matha – Nidagunda

Shree Kanchalakunti Nandishwara Matha – Nidagunda Claimed

ಶ್ರೀ ಕಂಚಾಳಕುಂಟಿ ನಂದೀಶ್ವರ ಮಠ - ನಿಡಗುಂದ

Average Reviews

Description

ಶ್ರೀ ಕಂಚಾಳಕುಂಟಿ ನಂದೀಶ್ವರ ಮಠ – ನಿಡಗುಂದ

ಪೂಜ್ಯ ಶ್ರೀ ಕರುಣೇಶ್ವರ ಮಹಾಸ್ವಾಮಿಗಳು

ಚಿಂಚೋಳಿ ತಾಲ್ಲೂಕು ನಿಡಗುಂದ ಗ್ರಾಮದಲ್ಲಿರುವ ಶ್ರೀ ಕಂಚಾಳಕುಂಟಿಬಸವೇಶ್ವರ ದೇವಸ್ಥಾನವವನ್ನು ಒಂದು ಸಾವಿರ ವರ್ಷಗಳ ಹಿಂದೆ ಕಲ್ಯಾಣ ಚಾಲುಕ್ಯರಕಾಲದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿದುಬರುತ್ತದೆ. ಶಿಥಿಲಗೊಂಡಿದ್ದ ದೇವಾಲಯದಜೀಣೋದ್ಧಾರ ಮಾಡಬೇಕೆಂದು ಸಂಕಲ್ಪ ಮಾಡಿದ್ದವರು ಕಾಯಕಯೋಗಿ ಶ್ರೀಮತಿತುಳಜಮ್ಮ, ಶ್ರೀ ಶಂಕ್ರಪ್ಪ ಕುಂಬಾರ್ ದಂಪತಿಗಳು. ತಂದೆ-ತಾಯಿಯ ಸಂಕಲ್ಪವನ್ನುಈಡೇರಿಸಿದವರು ವೃತ್ತಿಯಲ್ಲಿ ಇಂಜಿನಿಯರ್ರಾಗಿರುವ ಶ್ರೀ ಬಾಬು ಆರ್. ಕುಂಬಾರ್ ಮತ್ತುಶ್ರೀಮತಿ ಡಾ. ಅಂಬುಜಾಕ್ಷಿ ಕುಂಬಾರ್ರವರು. ಹಲವಾರು ಭಕ್ತಜನರ ಸಹಕಾರದೊಂದಿಗೆಛಲಬಿಡದೇ ದೇವಾಲಯದ ಜೀಣೋದ್ಧಾರ ಮಾಡಿದ ಶ್ರೀ ಬಾಬು ಆರ್. ಕುಂಬಾರ್ರವರು2005ರಲ್ಲಿ ಸಿದ್ದಗಂಗಾಮಠದ ಶ್ರೀಗಳಿಂದ ಉದ್ಘಾಟನೆ ಮಾಡಿಸಿದರು.2005ರಲ್ಲಿ ದೇವಾಲಯದ ಉದ್ಘಾಟನೆಗೆ ಸಿದ್ಧಗಂಗಾ ಶ್ರೀಗಳ ಜೊತೆಯಲ್ಲಿಆಗಮಿಸಿದ್ದ ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ಸ್ಥಳದ ಮಹಿಮೆಯನ್ನರಿತು ಕನಿಷ್ಠ ಮೂಲಸೌಕರ್ಯಗಳಿಲ್ಲದ ಈ ಮಠಕ್ಕೆ ಪೀಠಾಧಿಪತಿಗಳಾದರು. ಹಂತಹಂತವಾಗಿ ಭಕ್ತಜನರಸಹಕಾರ ಹಾಗೂ ಇಂಜನಿಯರ್ ಬಾಬು ಆರ್. ಕುಂಬಾರ ಮತ್ತು ಶ್ರೀಮತಿ ರಾಣ್ಯಾಮ್ಮಶ್ರೀ ಸೋಮನಾಥ ಕನಕೇರಿ ದಂಪತಿಗಳ ಸಹಾಯದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಿದ್ದಾರೆ.ಶ್ರೀ ಕರುಣೇಶ್ವರ ಮಹಾಸ್ವಾಮಿಗಳು ಪೀಠಪರಂಪರೆಯಲ್ಲಿ ಹುಟ್ಟಿದ್ದರೂ ವಿರಕ್ತಸಂಪ್ರದಾಯದಲ್ಲಿ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ನೆರಳಿನಲ್ಲಿಅಧ್ಯಯನಗೈಯುತ್ತಾ ಬೆಳೆದ ಕಾರಣ ಶ್ರೀಮಠವನ್ನು ಗುರು-ವಿರಕ್ತರ ಸಂಗಮ ಕ್ಷೇತ್ರವನ್ನಾಗಿಅಭಿವೃದ್ಧಿಪಡಿಸುತ್ತಿದ್ದಾರೆ. ಭಕ್ತರೇ ತಮ್ಮ ಆಸ್ತಿ ಎಂಬ ದೃಡ ಸಂಕಲ್ಪದಿಂದ ಹಳ್ಳಿ ಹಳ್ಳಿಗಳಿಗೆಹೋಗಿ ಮಾನವ ಧರ್ಮ ಜಾಗೃತಿ ಆಂದೋಲನದ ಮುಖಾಂತರ ಭಾವೈಕ್ಯತೆ ಉಂಟುಮಾಡುತ್ತ ಭಕ್ತರಲ್ಲಿ ಜ್ಯಾತಾತೀತತೆಯ ಬೀಜ ಬಿತ್ತುವುದರಲ್ಲಿ ಯಶಸ್ವಿಯಾಗಿದ್ದಾರೆ.ನಿಡಗುಂದಾ ಸುತ್ತಮುತ್ತಲಿನ 50ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ರಾತ್ರಿ ಸಂಚರಿಸುತ್ತಾ ದುಶ್ಚಟಗಳಿಗೆಬಳಿಯಾದ ಜನರಿಗೆ ಬುದ್ಧಿವಾದ ಹೇಳಿ ಶಿವಾನುಭವಗೋಷ್ಠಿ, ಪ್ರವಚನದಂತಹಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಶ್ರೀಮಠದ ಜಾತ್ರೆಯು ಬಸವ ಜಯಂತಿಗೆನಡೆಯುತ್ತದೆ.

Swamiji

Swamiji Name :
ಪೂಜ್ಯ ಶ್ರೀ ಕರುಣೇಶ್ವರ ಮಹಾಸ್ವಾಮಿಗಳು
Date of Birth :
01-06-1975
Place :
ಅಲೂರು, ಜೇವರ್ಗಿ ತಾ||
Photo :

Programs

ಪ್ರತಿ ಹುಣ್ಣಿಮೆ, ಅಮವಾಸೆಗೆ ವಿಶೇಷ ಪೂಜೆ
ಶಿವಾನುಭವ ಚಿಂತನಗೋಷ್ಠಿ ಬಸವ ಜಯಂತಿಗೆ ಶ್ರೀ ಮಠದ ಜಾತ್ರೆ

Institutions

ವೇದ / ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿ ನಿಲಯ / ಪದವಿಪೂರ್ವ ಕಾಲೇಜ್ ಗೋಶಾಲೆ

Photos

Full Address Kannada

ಶ್ರೀ ಕಂಚಾಳಕುಂಟಿ ನಂದೀಶ್ವರ ಮಠ
ನಿಡಗುಂದ - 585320
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ

Map

Statistic

2 Views
0 Rating
0 Favorite
0 Share
error: Content is protected !!