ಕರ್ತೃ – ಶ್ರೀ ಷ.ಬ್ರ. ಮುಪ್ಪಿನಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಬಾಗಲಕೋಟೆ ಜಿಲ್ಲೆ ಜಮಖಂಡಿ ಪಟ್ಟಣದ ಕುಂಬಾರ ಓಣಿಯಲ್ಲಿ ಪುರಾತನಕಾಲದ ಶ್ರೀ ಕಲ್ಯಾಣ ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಹಾಗೂತನ್ನ ಪರಂಪರೆಯ ಬಲದಿಂದ ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀಮಠದ ಕರ್ತೃಗುರುಗಳುಶ್ರೀ ಷ.ಬ್ರ. ಮುಪ್ಪಿನಾರಾಧ್ಯ ಶಿವಾಚಾರ್ಯ ಸ್ವಾಮಿಗಳೆಂದು ಗುರುತಿಸಲಾಗಿದೆ.
ಕರ್ತೃಗುರುಗಳಾದ ಶ್ರೀ ಮುಪ್ಪಿನಾರಾಧ್ಯ ಶಿವಾಚಾರ್ಯರು ಸದಾ ಸಂಚಾರಿಗಳಾಗಿತಮ್ಮ ಅನುಷ್ಠಾನ ಬಲದಿಂದ ಹೆಚ್ಚು ಪ್ರಚಲಿತಕ್ಕೆ ಬಂದು ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಾ ಜಮಖಂಡಿಯಲ್ಲಿ ಶ್ರೀಮಠದ ಸ್ಥಾಪನೆ ಮಾಡಿದ್ದಾರೆ. ಬಹುಶಃ ಕಲ್ಯಾಣದಿಂದಬಂದಂತಹ ಶಿವಯೋಗಿಗಳಲ್ಲಿ ಒಬ್ಬರಾದ ಶ್ರೀ ಮುಪ್ಪಿನಾರಾಧ್ಯರು ಮಠವನ್ನು ಸ್ಥಾಪನೆಮಾಡಿರುವುದರಿಂದ ಶ್ರೀಮಠಕ್ಕೆ ‘ಶ್ರೀ ಕಲ್ಯಾಣ ಮಠ’ವೆಂಬ ಹೆಸರು ಬಂದಿರಬಹುದು. ಶ್ರೀಗಳನಂತರದ ಪರಂಪರೆ ಬಗ್ಗೆ ನಿಖರವಾದ ಮಾಹಿತಿಗಳು ಇಲ್ಲವಾದರೂ ಇಲ್ಲಿಯವರೆಗೂಅಧಿಕಾರ ನಡೆಸಿದ ಪರಂಪರೆಯ ಗುರುಗಳಲ್ಲಿ 3 ಜನ ಶ್ರೀಗಳನ್ನು ಗುರುತಿಸಬಹುದಾಗಿದೆ.
ಹಿಂದಿನ ಶ್ರೀಗಳಾದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ವಹಿಸಿಕೊಂಡಾಗ ಶ್ರೀಮಠವು ಜೀರ್ಣಾವಸ್ಥೆಯಲ್ಲಿತ್ತು ಎಂದು ತಿಳಿದು ಬರುತ್ತದೆ. ಶ್ರೀಗಳುಪಟ್ಟಾಧಿಕಾರವನ್ನು ಸ್ವೀಕರಿಸಿ ಹೆಚ್ಚು ಕ್ರಿಯಾಶೀಲರಾಗಿ ಜೀರ್ಣಾಭಿವೃದ್ಧಿಯಲ್ಲಿದ್ದ ಶ್ರೀಮಠದನವೀಕರಣವನ್ನು ಮಾಡಿ ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾಭಕ್ತರನ್ನು ಹೆಚ್ಚಿನ ಸಂಖ್ಯೆಯ ಶ್ರೀ ಮಠದತ್ತ ಸೆಳೆದಿದ್ದಾರೆ. ಶ್ರೀಗಳ ಕಾಲದಲ್ಲಿ ಪರಂಪರೆಯಗುರುಗಳ ಗದ್ದುಗೆಗಳನ್ನು ಗುರುತಿಸಿ ಅವುಗಳಿಗೆ ಮಂಟಪಗಳನ್ನು ನಿರ್ಮಿಸಲಾಗಿದೆ. ಇಂತಹಮಹಾಮಹಿಮರು 1996 ರಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು ಅಧಿಕಾರವನ್ನುವಹಿಸಿಕೊಂಡು ಹಿಂದಿನ ಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನು ಇನ್ನೂ ಹೆಚ್ಚಿನಅಭಿವೃದ್ಧಿಯೊಂದಿಗೆ ಧಾರ್ಮಿಕ ಆಚರಣೆಗಳನ್ನು ಕೈಗೊಂಡು ಮುನ್ನಡೆಸುತ್ತಿದ್ದು,ಗುರುಪೂರ್ಣಿಮೆ ದಿನ ಮೂಲ ಕರ್ತೃಗಳ ಪುಣ್ಯಾರಾಧನೆಯನ್ನು ನಡೆಸುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗೌರಿಶಂಕರ ಶಿವಾಚಾರ್ಯ ಸ್ವಾಮಿಗಳು
Date of Birth :
5-10-1948
Place :
ಜಮಖಂಡಿ
Programs
ಗುರು ಪೂರ್ಣಿಮೆ ದಿನ ಮೂಲ ಕರ್ತೃಗಳ ಪುಣ್ಯಾರಾಧನೆ.
ಏಪ್ರಿಲ್ನಲ್ಲಿ ಬಹುಳ ಅಷ್ಟಮಿಗೆ ಲಿಂ. ಶ್ರೀ ಷ.ಬ್ರ. ಶಿವಲಿಂಗ ಶಿವಾಚಾರ್ಯರ ಪುಣ್ಯಾರಾಧನೆ.