ಮೈಸೂರು ಜಿˉÉ್ಲ ಕಳ್ಳೀಪುರ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪಿತಗೊಂಡಿರುವ ಶ್ರೀಕಳ್ಳೀಪುರದ ಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದು ಬಂದಿದೆ. ಸುಮಾರು 400 ವರ್ಷಗಳ ಇತಿಹಾಸವಿದೆ ಎಂದುಹೇಳˉÁಗುವ ಶ್ರೀಮಠದ ಗುರುಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಷ.ಬ್ರ. ಚನ್ನಬಸವ ಒಡೆಯರ್ ಮಹಾಸ್ವಾಮಿಗಳನ್ನು ಗುರುತಿಸˉÁಗಿದ್ದುಇವರ ಹಿಂದೆಯೂ ಶ್ರೀಮಠವು ಅಸ್ತಿತ್ತ್ವದಲ್ಲಿತ್ತೆಂದು ಹೇಳˉÁಗುತ್ತದೆ.ಶ್ರೀಮಠದ ಪರಂಪರೆಯನ್ನು ಕಳೆದ ನಾಲ್ಕು ತˉÉಮಾರುಗಳಿಂದಗುರುತಿಸˉÁಗುತ್ತಿದ್ದು ಮಠದಲ್ಲಿ ಕರ್ತೃ ಗದ್ದುಗೆಯೂ ಸೇರಿದಂತೆ 3 ಗದ್ದುಗೆಗಳನ್ನುಕಾಣಬಹುದು. ಶ್ರೀಮಠವು ಬಹು ಹಿಂದೆ ತುಂಬಾ ಹೆಸರಾಗಿದ್ದಂತೆ ತೋರುತ್ತಿದ್ದು ಶ್ರೀಮಠದಪ್ರಭಾವಕ್ಕೆ ಒಳಗಾಗಿದ್ದ ಮೈಸೂರು ಅರಸರಾದ ಇಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ರವರುಮಠಕ್ಕೆ ಬಂದು ಗುರುಗಳ ಆಶೀರ್ವಾದ ಪಡೆದು ಧಾರ್ಮಿಕ ಕಾರ್ಯಗಳಿಗಾಗಿ ಕ್ರಿ.ಶ.1826ರಲ್ಲಿ 25 ಎಕರೆ ಭೂಮಿಯನ್ನು ದಾನ ನೀಡಿ ಗೌರವಿಸಿದ್ದಾರೆಂದು ತಿಳಿದು ಬರುತ್ತದೆ.ಶ್ರೀಮಠದ ಪರಂಪರೆಯಲ್ಲಿ ಕಾಣಸಿಗುವ ಎರಡನೇ ಗುರುಗಳಾದ ಶ್ರೀ ಷ.ಬ್ರ.ಗುರುಪಾದ ಮಹಾಸ್ವಾಮಿಗಳು, ನಂತರದ ಶ್ರೀ ಷ.ಬ್ರ. ಬಸವರಾಜ ಮಹಾಸ್ವಾಮಿಗಳಗದ್ದುಗೆಗಳಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ. ಶ್ರೀಮಠದ ಕಟ್ಟಡವು 1950ರಲ್ಲಿ ಹೊಸದಾಗಿಕಟ್ಟಿಸˉÁಗಿರುವಂತೆ ತೋರುತ್ತಿದ್ದು ಪ್ರಸ್ತುತ ಶ್ರೀಗಳ ಕಾಲದಲ್ಲಿ ಜೀರ್ಣೋದ್ದಾರಗೊಂಡಿದೆ.ಪ್ರಸ್ತುತ ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯ ಸ್ವಾಮಿಗಳು 1980ರಲ್ಲಿ ಹಿಂದಿನಶ್ರೀಗಳ ಐಕ್ಯಾನಂತರ ಶ್ರೀಮಠದ ಪಟ್ಟಕ್ಕೆ ಬಂದಿದ್ದು ಹಿಂದಿನ ಗುರುಗಳ ಹಾದಿಯಲ್ಲಿಪರಂಪರೆಯನ್ನು ಮುಂದುವರೆಸಿದ್ದಾರೆ. ಮಠದ ಜಮೀನನ್ನು ಅಭಿವೃದ್ದಿಪಡಿಸಿ ಶ್ರೀಮಠದಆದಾಯವನ್ನು ಹೆಚ್ಚಿಸಿರುವ ಶ್ರೀಗಳು ಶ್ರೀಮಠವನ್ನು ಜೀರ್ಣೋದ್ದಾರ ಮಾಡಿದ್ದಾರೆ ಹಾಗೂಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ಮಾಘಮಾಸದಲ್ಲಿ ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರುಪಾದ ಶಿವಾಚಾರ್ಯ ಸ್ವಾಮಿಗಳು
Date of Birth :
10-06-1960
Place :
ಕಳ್ಳೀಪುರ, ಟಿ.ನರಸೀಪುರ ತಾ||
Pattadikara :
07-02-1980
Photo :
Programs
ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶಾª್ರÀಣ ಮತ್ತು ಧನುರ್ಮಾಸದಲ್ಲಿ ವಿಶೇಷ ಪೂಜೆ
ಕಾರ್ತಿಕ ಮಾಸ ಹಾಗೂ ಶಿವರಾತ್ರಿಗಳಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ಕಳ್ಳೀಪುರದ ಮಠ ಕಳ್ಳೀಪುರ,
ಚಿದರವಳ್ಳಿ ಪೋಸ್ಟ್ - 571 102
ಟಿ.ನರಸೀಪುರ ತಾ||, ಮೈಸೂರು ಜಿಲ್ಲೆ