Shree Kallalli Matha

Shree Kallalli Matha Claimed

ಶ್ರೀ ಕಲ್ಲಳ್ಳಿ ಮಠ

Average Reviews

Description

ಶ್ರೀ ಕಲ್ಲಳ್ಳಿ ಮಠ

ಕರ್ತೃ – ಪ.ಪೂ. ಶ್ರೀ ವೀರಭದ್ರ ಮಹಾಸ್ವಾಮಿಗಳು

ಪುರಾಣ ಪ್ರಸಿದ್ದ ಕೊಡ್ಲಿಪೇಟೆಗೆ ಒಂದು ಕಿ.ಮೀ. ಅಂತರದಲ್ಲಿರುವ ಕಲ್ಲಳ್ಳಿಯಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕಲ್ಲಳ್ಳಿ ಮಠವು ಪುರಾತನ ಇತಿಹಾಸ ಹೊಂದಿದ್ದುತನ್ನ ಆಚರಣೆಗಳ ಮೂಲಕ ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದೆ. ಶ್ರೀಮಠದಸ್ಥಾಪಿತ ಕಾಲಮಾನ ಹಾಗೂ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳಿಲ್ಲವಾದರೂಸುಮಾರು 18ನೇ ಶತಮಾನದ ಪೂರ್ವಾರ್ದದಲ್ಲಿ ಶ್ರೀ ಮಹಾದೇವಸ್ವಾಮಿಗಳು ಇಲ್ಲಿನೆಲೆನಿಂತು ಮುಂದುವರೆದಿರುವುದು ತಿಳಿದುಬರುತ್ತಿದೆ. ಆದರೆ ಶ್ರೀಮಠದಲ್ಲಿಯೇ ನೆಲೆನಿಂತುತಮ್ಮ ಜೀವನದುದ್ದಕ್ಕೂ ಭಕ್ತರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಇಲ್ಲಿಯೇ ಲಿಂಗೈಕ್ಯರಾಗಿರುವ ಶ್ರೀವೀರಭದ್ರ ಮಹಾಸ್ವಾಮಿಗಳನ್ನು ಶ್ರೀಮಠದ ಕರ್ತೃಗುರುಗಳೆಂದು ಗುರುತಿಸಬಹುದಾಗಿದೆ.18ನೇ ಶತಮಾನದ ಪೂರ್ವಾರ್ದದಲ್ಲಿ ಶ್ರೀಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ಕೆಲಕಾಲನೆಲೆನಿಂತು ಮಠವನ್ನು ಪ್ರಬುದ್ದಮಾನಕ್ಕೆ ತಂದ ಶ್ರೀ ಮಹಾದೇವ ಮಹಾಸ್ವಾಮಿಗಳು ನಂತರಮಾದಾಪುರಕ್ಕೆ ತೆರಳಿ ಒಂದು ಮಠವನ್ನು ಸ್ಥಾಪಿಸಿ ಅಲ್ಲಿಂದ ಬಿಟ್ಟು ಅರಸೀಕೆರೆ ತಾ||ಹುಳಿಯಾರ ಕೆಂಕೆರೆ ಬಳಿ ಬಂದು ಮಠವನ್ನು ಸ್ಥಾಪಿಸಿ ಲಿಂಗೈಕ್ಯರಾಗಿದ್ದು ಅಲ್ಲಿ ಅವರಸಮಾದಿ ಇದೆ. ಇವರ ನಂತರ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಕಲ್ಲಳ್ಳಿಯಲ್ಲಿ ಕೆಲಕಾಲವಿದ್ದು ನಂತರ ಪುಷ್ಪಗಿರಿಗೆ ತೆರಳಿ ಅಲ್ಲಿ ಮಠವನ್ನು ಸ್ಥಾಪಿಸಿ ಪ್ರಸಿದ್ದರಾದರು. ನಂತರಬಂದ ಶ್ರೀ ಶಾಂತಮಲ್ಲೇಶ್ವರ ಸ್ವಾಮಿಗಳು ಮಠದಲ್ಲಿ ಕೆಲಕಾಲ ನೆಲೆನಿಂತು ನಂತರ ಅಬ್ಬಿಮಠವನ್ನು ಸ್ಥಾಪಿಸಿದರು.ಈ ರೀತಿಯಾಗಿ ಶ್ರೀಮಠದಲ್ಲಿ ಯಾರು ಖಾಯಂ ಆಗಿ ಇದ್ದವರಿಲ್ಲ. ಆ ನಂತರಶ್ರೀ ಕಲ್ಲಳ್ಳಿ ಮಠವನ್ನು ಸುಭದ್ರವಾಗಿ ಸ್ಥಾಪಿಸಿದಂತಹ ಶ್ರೀ ವೀರಭದ್ರ ಸ್ವಾಮಿಗಳು ಮಠದಲ್ಲಿಶ್ರೀ ತಾಯಿ ಚೌಡೇಶ್ವರಿ ದೇವಿಯನ್ನು ಸ್ಥಾಪಿಸಿದರು. ಇವರಿಗೆ ಕೊಡಗಿನ ಹಾಲೇರಿ ರಾಜವಂಶಸ್ಥರು 11 ಎಕರೆ ಜಮೀನನ್ನು ಜಹಗೀರ್ ನೀಡಿದ್ದರು. ಶ್ರೀಮಠವನ್ನು ಸಮೃದ್ದಿಗೊಳಿಸಿದಶ್ರೀಗಳು 1954ರಲ್ಲಿ ಸಜೀವ ಕ್ರಿಯಾ ಸಮಾಧಿ ಹೊಂದಿದರು. ಇವರ ನಂತರ ಚಿತ್ರದುರ್ಗದಶ್ರೀ ಜಯ ವಿಭವ ಜಗದ್ಗುರುಗಳು ಶ್ರೀ ಸಂಗಮೇಶ್ವರ ಸ್ವಾಮಿಗಳನ್ನು 1969ರಲ್ಲಿ ಶ್ರೀಮಠಕ್ಕೆಪಟ್ಟಾಧಿಕಾರಗೊಳಿಸಿದರು. ಇವರು 1992ರಲ್ಲಿ ಲಿಂಗೈಕ್ಯರಾದ ನಂತರ 1995ರ ಜನವರಿ19ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿ ಬಂದ ಪ್ರಸ್ತುತ ಶ್ರೀಗಳಾದ ಶ್ರೀ ಮ.ಘ.ಚ.ರುದ್ರಮುನಿ ಸ್ವಾಮಿಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ಘ.ಚ. ರುದ್ರಮುನಿ ಸ್ವಾಮಿಗಳು
Date of Birth :
26-03-1965
Place :
ಹೊಂಬಳಗಟ್ಟಿ, ಹರಪನಹಳ್ಳಿ ತಾ||
Pattadikara :
07-02-1995
Photo :

Programs

ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಶ್ರೀ ಚೌಡೇಶ್ವರಿ ದೇವಿ ಆರಾಧನೆ ಶ್ರಾವಣ ಮಾಸ ಹಾಗೂ ಕಾರ್ತೀಕ ಮಾಸಗಳಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ

Photos

Full Address Kannada

ಶ್ರೀ ಕಲ್ಲಳ್ಳಿ ಮಠ
ಕೊಡ್ಲಿಪೇಟೆ ಪೋಸ್ಟ್ - 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ

Map

Near by Places

ಕೊಡ್ಲಿಪೇಟೆ - 1 ಕಿ.ಮೀ.
ಬಾಳುಪೇಟೆ - 24 ಕಿ.ಮೀ.
ಸಕಲೇಶಪುರ - 28 ಕಿ.ಮೀ.
ಹಾಸನ - 54 ಕಿ.ಮೀ.

Statistic

77 Views
0 Rating
0 Favorite
0 Share
error: Content is protected !!