ಗೋಕಾಕ್ ತಾಲ್ಲೂಕಿನ ಸುಂದರ ಪ್ರವಾಸಿ ತಾಣ ಗೋಕಾಕ್ ಜಲಪಾತ(ಫಾಲ್ಸ್)ನಿಂದ ಕೇವಲ ಎರಡು ಕಿ.ಮೀ. ದೂರದಲ್ಲಿನ ಮರಡಿಮಠದಲ್ಲಿ ಅಷ್ಟೇ ಸುಂದರಹಾಗೂ ಪುರಾತನ ಕಾಲದ ಶ್ರೀ ಕಾಡಸಿದ್ದೇಶ್ವರ ಮಠವು ಅಸ್ತಿತ್ವದಲ್ಲಿದೆ. ಮೂಲ ಕೊಣ್ಣೂರುಗ್ರಾಮದಲ್ಲಿ ಅಸ್ತಿತ್ವದಲ್ಲಿತ್ತೆಂದು ಹೇಳಲಾಗುವ ಶ್ರೀ ಕಾಡಸಿದ್ದೇಶ್ವರ ಮಠದ ಕರ್ತೃಗುರುಗಳುಜಗದ್ಗುರು ಶ್ರೀ ಕಾಡಸಿದ್ದೇಶ್ವರರು ಹಾಗೂ ಅವರ ಕಾಲಮಾನ ಸುಮಾರು 12ನೇಶತಮಾನವೆಂದು ಅಂದಾಜಿಸಲಾಗಿದೆ.ಜಗದ್ಗುರು ಶ್ರೀ ಕಾಡಸಿದ್ದೇಶ್ವರರು ಮಹಾಮಹಿಮ ಪವಾಡ ಪುರುಷರಾಗಿದ್ದುಅವರು ಎಲ್ಲೆಲ್ಲಿ ನೆಲೆನಿಂತು ಅನುಷ್ಠಾನಗೊಂಡರೋ ಅಲ್ಲೆಲ್ಲಾ ತೋರುಗದ್ದುಗೆಗಳುಸ್ಥಾಪನೆಯಾಗಿವೆ. ತಮ್ಮ ಆಚರಣೆಗಳು ತತ್ವೋಪದೇಶಗಳ ಮೂಲಕ ಸಮಾಜದಲ್ಲಿನವಮನ್ವಂತರಕ್ಕೆ ಕಾರಣರಾದವರು ಜಗದ್ಗುರು ಶ್ರೀ ಕಾಡಸಿದ್ದೇಶ್ವರರು. ಕರ್ತೃಗುರುಗಳನಂತರದ ಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲವಾದರೂ ಇಲ್ಲಿಯವರೆಗೂ9 ಜನ ಶ್ರೀಗಳು ಅಧಿಕಾರ ನಡೆಸಿದ್ದು ಈಗಿನವರು 10 ನೇ ಯವರೆಂದು ಹೇಳಲಾಗಿದೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀ ಮ.ನಿ.ಪ್ರ. ಪವಾಡೇಶ್ವರಮಹಾಸ್ವಾಮಿಗಳ ಬಗ್ಗೆ ಜನಪದದ ಕಥೆಗಳು ಕೇಳಿಬರುತ್ತವೆ. ಶ್ರೀಗಳು ಪವಾಡಪುರುಷರಾಗಿದ್ದು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಹಾಗೂಸಾಮಾಜಿಕ ಚಟುವಟಿಕೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಾಸನ್ಮಾರ್ಗದಲ್ಲಿ ಕೊಂಡೊಯ್ದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಅದೃಶ್ಯ ಗುರುಸಿದ್ದೇಶ್ವರ ಮಹಾಸ್ವಾಮಿಗಳು1979ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನುಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಿದ್ದಾರೆ ಹಾಗೂ 1725ರಲ್ಲಿ ಜೀವಿಸಿದ ವಚನಕಾರಶ್ರೀ ಕಾಡಸಿದ್ದೇಶ್ವರರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿ ಕನ್ನಡ ವಚನಸಾಹಿತ್ಯ ಲೋಕಕ್ಕೆಕೊಡುಗೆ ನೀಡಿದ್ದಾರೆ.ಶ್ರೀಗಳು ಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಶೈಕ್ಷಣಿಕವಾಗಿಯೂಶಾಲಾ ಕಾಲೇಜುಗಳನ್ನು ನಡೆಸುತ್ತಾ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಧಾನಮಾಡುತ್ತಿದ್ದಾರೆ ಹಾಗೂ ಸಾಮಾಜಿಕವಾಗಿ ಸರ್ವಜನರ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾಗೂಶ್ರೀಮಠಕ್ಕೆ ಸುಂದರ ರಥವನ್ನು ಮಾಡಿಸಿದ್ದು ಶ್ರೀಮಠದ ರಥೋತ್ಸವವು ಏಪ್ರಿಲ್ನಲ್ಲಿಜರುಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅದೃಶ್ಯ ಗುರುಸಿದ್ಧೇಶ್ವರ ಮಹಾಸ್ವಾಮಿಗಳು
Place :
ಕೊಣ್ಣೂರು, ಗೋಕಾಕ್ ತಾ||
Photo :
Programs
ಪ್ರತಿ ನಿತ್ಯ ರುದ್ರಾಭಿಷೇಕ
ಪ್ರತಿ ಸೋಮವಾರ ಮತ್ತು ಅಮವಾಸÉಗೆ ವಿಶೇಷ ಪೂಜೆ
ಏಪ್ರಿಲ್‍ನಲ್ಲಿ ಶ್ರೀ ಕಾಡಸಿದ್ಧೇಶ್ವರ ರಥೋತ್ಸª
ಹಾಗೂ ಶ್ರೀ ಮಠದ ಜಾತ್ರೆ
ಮೇ ಒಂದನೇ ತಾರೀಖು ಲಿಂ|| ಶ್ರೀ ಮ.ನಿ.ಪ್ರ.
ಪವಾಡೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ
ಜುಲೈ 6 ರಂದು ಲಿಂ|| ಶ್ರೀ ಮ.ನಿ.ಪ್ರ. ಗುರುಸಿದ್ಧೇಶ್ವರ
ಮಹಾಸ್ವಾಮಿಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ
ಗಣೇಶ ಚತುದರ್ಶಿ ವಿಶೇಷ ಕಾರ್ಯಕ್ರಮ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ ಕಾಲೇಜ್ ಐ.ಟಿ.ಐ ಕಾಲೇಜ್ ಉರ್ದು ಪ್ರೌಢಶಾಲೆ
Photos
Full Address Kannada
ಶ್ರೀ ಕಾಡಸಿದ್ಧೇಶ್ವರ ಮಠ
ಮರಡಿಮಠ - 591 231
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ