ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕೊಕಟನೂರ ಪ್ರಸಿದ್ದ ಶಕ್ತಿ ಕೇಂದ್ರವೆಂದುಹೆಸರು ಪಡೆದಿದೆ. ಈ ಗ್ರಾಮದ ಹೊರವಲಯದಲ್ಲಿ ಶ್ರೀ ರೇಣುಕಾದೇವಿಯ ಪ್ರಸಿದ್ದಮಂದಿರವಿದ್ದರೆ, ಗ್ರಾಮದ ಪಶ್ಚಿಮ ದಂಡೆಯಲ್ಲಿ ಸಿದ್ದಿಪುರುಷರಾದ ಶ್ರೀ ಕಾಡ ಸಿದ್ದೇಶ್ವರರಮಠ ಪ್ರಸಿದ್ದವಾಗಿದೆ. ಈ ಮಠವು ಸುಮಾರು 1200 ವರ್ಷಗಳಷ್ಟು ಹಿಂದಿನದು ಎಂದುಹೇಳಲಾಗುತ್ತಿದ್ದು ಕಳಚೂರಿ ಅರಸರ ಕಾಲದಲ್ಲಿ ಪ್ರಸಿದ್ದಿಯನ್ನು ಪಡೆದಿತ್ತು.ಶ್ರೀ ಮಠದ ಮೂಲ ಪುರುಷರು ಮಹಾತ್ಮಶ್ರೀ ರೇವಣಸಿದ್ದರು. ಅವರು ಹಲವು ವರ್ಷಗಳ ಕಾಲಅಜ್ಞಾತವಾಗಿ ಕಾಡಿನಲ್ಲಿ ತಪಸ್ಸು ಆಚರಿಸಿದ್ದರಿಂದಅವರಿಗೆ ಶ್ರೀ ಕಾಡಸಿದ್ದೇಶ್ವರರೆಂಬ ಉಪನಾಮವುಪ್ರಾಪ್ತವಾಯಿತು. ಅವರು ಜನ ಕಲ್ಯಾಣಾರ್ಥವಾಗಿಸಂಚಾರ ಮಾಡುತ್ತಾ ಕೊಕಟನೂರು ಗ್ರಾಮದಲ್ಲಿತಂಗಿದ್ದು ಆ ಸ್ಥಳವೇ ಮಠವಾಯಿತು ಎನ್ನಲಾಗಿದೆ.ಶ್ರೀಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿ ಬೆಳೆದುಬಂದಿದೆ.ಶ್ರೀಮಠದ ಇತಿಹಾಸದ ಬಗ್ಗೆ ಅಷ್ಟು ಸ್ಪಷ್ಟತೆಯಿಲ್ಲ ಹಾಗೂ ಶ್ರೀಮಠದಪರಂಪರೆಯಲ್ಲಿ ಬಂದಿರಬಹುದಾದ ಸ್ವಾಮಿಗಳ ಬಗ್ಗೆಯೂ ಮಾಹಿತಿಗಳ ಅಲಭ್ಯತೆ ಇದೆ.ಶ್ರೀಮಠದಲ್ಲಿ ಆಗಿ ಹೋದ ಪೂಜ್ಯ ಸ್ವಾಮಿಗಳವರು ತಪಸ್ವಿಗಳು, ಶಾಪಾನುಗ್ರಹ ಸಮರ್ಥರುಅಲ್ಲದೇ ಪವಾಡ ಪುರುಷರೂ ಆಗಿದ್ದು ಭಕ್ತರ ಭವರೋಗಾದಿಗಳನ್ನು ನಿವಾರಿಸುವಜ್ಞಾನಿಗಳಾಗಿದ್ದರು ಎಂದು ನಂಬಲಾಗಿದೆ.ಪ್ರಸ್ತುತ 2012ರ ನವೆಂಬರ್ 18ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನುವಹಿಸಿಕೊಂಡಿರುವ ಶ್ರೀ ಷ.ಬ್ರ. ಗುರು ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳ ತಾತ ವೇದಮೂರ್ತಿಗುರುಮೂರ್ತಯ್ಯನವರ ಆಶಿರ್ವಾದ ಹಾಗೂ ಆದೇಶವನ್ನು ಶಿರದ ಮೇಲೆ ಹೊತ್ತುಕೊಂಡುಸುಮಾರು ವರ್ಷಗಳವರೆಗೆ ಪಂಚಾಚಾರ್ಯರ ಪೀಠಗಳನ್ನು, ಹನ್ನೆರಡುಜ್ಯೋತಿರ್ಲಿಂಗಗಳನ್ನು ದರ್ಶಿಸಲು ಒಂಟಿಯಾಗಿ ಪಾದಯಾತ್ರೆಯನ್ನು ಮಾಡಿದಮಹಾಮಹಿಮರು. ಶ್ರೀಗಳು ತಮ್ಮ ಹಠಯೋಗ ಹಾಗೂ ಧಾರ್ಮಿಕ ಆಚರಣೆಗಳಿಂದಾಗಿಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ವೈದ್ಯರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಗುರು ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು
Date of Birth :
28-02-1962
Place :
ಕೊಕಟನೂರು, ಅಥಣಿ ತಾ||
Pattadikara :
18-11-2012
Photo :
Programs
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ
ಶಿವರಾತ್ರಿಗೆ ರುದ್ರಾಭಿಷೇಕ, ಭಜನೆ, ವಿಶೇಷ ಪೂಜೆ
Photos
Full Address Kannada
ಶ್ರೀ ಕಾಡಸಿದ್ದೇಶ್ವರ ಮಠ
ಕೊಕಟನೂರ - 591 230
ಅಥಣಿ ತಾ||, ಬೆಳಗಾವಿ ಜಿಲ್ಲೆ