Shree Jnanayogashrama, VIjaypura

Shree Jnanayogashrama, VIjaypura Claimed

ಶ್ರೀ ಜ್ಞಾನಯೋಗಾಶ್ರಮ, ವಿಜಯಪುರ

Average Reviews

Description

ಶ್ರೀ ಜ್ಞಾನಯೋಗಾಶ್ರಮ, ವಿಜಯಪುರ

ಕರ್ತೃ – ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು

ವಿಜಯಪುರ ನಗರ ಐತಿಹಾಸಿಕ ನಗರವಾಗಿದ್ದು ಈ ನಗರದ ಮಧ್ಯಭಾಗದಲ್ಲಿ ಶ್ರೀಮಲ್ಲಿಕಾರ್ಜುನ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಜ್ಞಾನ ಯೋಗಾಶ್ರಮವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಾಗೂ ಪ್ರವಚನಗಳ ಮೂಲಕನಾಡಿನ ಪ್ರಮುಖ ಮಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು 12ನೇ ಶತಮಾನದ ಶಿವಶರಣರುನೀಡಿದ ಅನುಭಾವವನ್ನು, ವಚನ ಸಾಹಿತ್ಯದ ಆಳ ಅರಿವನ್ನು ನಾಡಿಗೆ ನೀಡುವ ಸಲುವಾಗಿಶ್ರೀ ಜ್ಞಾನಯೋಗಾಶ್ರಮವನ್ನು ಸ್ಥಾಪಿಸಿದರು. ಹಾಗೂ ತಮ್ಮ ಪ್ರವಚನಗಳ ಮೂಲಕ ನಾಡಿನಮೂˉÉಮೂˉÉಗೂ ತಲುಪಿಸುವ ಕಾರ್ಯವನ್ನು ಕೈಗೊಂಡು ಆ ಮೂಲಕ ಶರಣ ಸಾಹಿತ್ಯದಮಹತ್ವವನ್ನು ಪಸರಿಸಿದರು.ತದನಂತರ ಈ ಪರಂಪರೆಯನ್ನು ಮುಂದುವರೆಸಿದವರು ನಾಡಿನ ಪ್ರಖ್ಯಾತಪ್ರವಚನಕಾರರಾಗಿ ನಾಡಿಗೆ ತಮ್ಮ ಜ್ಞಾನದ ಸುಧೆಯನ್ನು ನೀಡುತ್ತಿರುವ ಪೂಜ್ಯ ಶ್ರೀ ಸಿದ್ದೇಶ್ವರಮಹಾಸ್ವಾಮಿಗಳು. ಶ್ರೀ ಸಿದ್ದೇಶ್ವರ ಸ್ವಾಮಿಗಳು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನುಪಡೆದು ಅಪಾರ ಜ್ಞಾನವನ್ನು ಸಂಪಾದಿಸಿಕೊಂಡು ಜ್ಞಾನದ ಗಣಿಯಾಗಿದ್ದಾರೆ. ಆ ಮೂಲಕಗುರುಗಳು ತತ್ವಶಾಸ್ತ್ರವನ್ನು ಸರಳಗೊಳಿಸಿ ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡಿದ್ದಾರೆ.ಶ್ರೀ ಸಿದ್ದೇಶ್ವರ ಸ್ವಾಮಿಗಳ ಕಾಲದಲ್ಲಿ ಸ್ವಚ್ಛ ಹಾಗೂ ನಿರ್ಮಲ ಪರಿಸರದಲ್ಲಿರೂಪುಗೊಂಡಿರುವ ಜ್ಞಾನಯೋಗಾಶ್ರಮವು ಸುಂದರ ಕೈತೋಟದ ಮಧ್ಯೆ ಸ್ಥಾಪನೆಯಾಗಿಆಧ್ಯಾತ್ಮದ ಪರಿಸರವನ್ನು ರೂಪಿಸಿದೆ. ಪ್ರಪಂಚದ ಎˉÁ್ಲ ದಾರ್ಶನಿಕರ ಪುಸ್ತಕಗಳನ್ನುಒಳಗೊಂಡ ಗ್ರಂಥಾಲಯ, ಭಕ್ತರಿಗಾಗಿ ನಿರ್ಮಿಸಿದ ದಾಸೋಹ ಮಂದಿರ, ಪ್ರಾರ್ಥನಾಮಂದಿರ, ಪುಸ್ತಕ ಮಾರಾಟ ಮಳಿಗೆ ಜ್ಞಾನಯೋಗಾಶ್ರಮದ ಸಮುಚ್ಛಯದಲ್ಲಿದ್ದು ಆಧ್ಯಾತ್ಮಜ್ಞಾನದ ಹಸಿವನ್ನು ತೀರಿಸಿಕೊಳ್ಳಲು ಬೇಕಾದಂತಹ ಎˉÁ್ಲ ವ್ಯವಸ್ಥೆಗಳೂ ಇಲ್ಲಿವೆ.ಪ್ರಸ್ತುತ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಶ್ರೀಮಠದಿಂದ ಹೊರಬಂದುನಾಡಿನಾದ್ಯಂತ ಸಂಚಾರಿಗಳಾಗಿ ಪ್ರವಚನಗಳನ್ನು ನೀಡುತ್ತಿದ್ದು ಶ್ರೀ ಜ್ಞಾನಯೋಗಾಶ್ರಮವನ್ನುಟ್ರಸ್ಟ್ ಕಮಿಟಿಯವರು ನಿಭಾಯಿಸುತ್ತಿದ್ದಾರೆ ಹಾಗೂ ಆಶ್ರಮದ ಶಾಖಾ ಮಠಗಳ ಸ್ವಾಮಿಗಳುಆಗಾಗ್ಗೆ ಪರಿಶೀಲನೆ ನಡೆಸುತ್ತಾರೆ.

Swamiji

Swamiji Name :
ಪರಮ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು
Photo :

Programs

ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಪ್ರವಚನ ಹಾಗೂ ಯೋಗ.
ಗುರು ಪೂರ್ಣಿಮೆ ಪೂರ್ವದಲ್ಲಿ ಲಿಂ. ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳ ಧ್ವನಿಸುರಳಿ ಪ್ರವಚನ.
ಗುರು ಪೂರ್ಣಿಮೆಗೆ ಜಪ ಯಜ್ಞ ಪ್ರಣವ ಮಂಟಪದ ಪೂಜೆ.
ಗುರು ಪೂರ್ಣಿಮೆಯ ನಂತರ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ
(15 ದಿನಗಳ ಕಾಲ ಬೆಳಗಿನ ಜಾವ).

Photos

Full Address Kannada

ಶ್ರೀ ಜ್ಞಾನಯೋಗಾಶ್ರಮ ಟ್ರಸ್ಟ್ (ರಿ)
ವಿಜಯಪುರ - 586 106
ವಿಜಯಪುರ ತಾ||, ಜಿ||

Map

Near by Places

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ - 4 ಕಿ.ಮೀ.
ರೈಲು ನಿಲ್ದಾಣ - 4 ಕಿ.ಮೀ.

Statistic

131 Views
0 Rating
0 Favorite
0 Share
error: Content is protected !!