Shree Jangama Samsthana Matha

Shree Jangama Samsthana Matha Claimed

ಶ್ರೀ ಜಂಗಮ ಸಂಸ್ಥಾನ ಮಠ

Average Reviews

Description

ಶ್ರೀ ಜಂಗಮ ಸಂಸ್ಥಾನ ಮಠ – ಗುರುಪುರ

ಕರ್ತೃ – ಪೂಜ್ಯ ಶ್ರೀ ನೀಲಕಂಠ ಮಹಾಸ್ವಾಮಿಗಳು

ಜಿಲ್ಲಾ ಕೇಂದ್ರ ಮಂಗಳೂರಿನಿಂದ 14 ಕಿ.ಮೀ. ದೂರದಲ್ಲಿ ಗುರುಪುರ ಗ್ರಾಮದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಜಂಗಮ ಸಂಸ್ಥಾನ ಮಠವು ಶ್ರೀಮಂತ ಪರಂಪರೆಯನ್ನುಹೊಂದಿರುವ ಪ್ರಾಚೀನ ಮಠವಾಗಿದೆ. ಇಲ್ಲಿನ ಭಕ್ತರ ಅಭಿಪ್ರಾಯದಲ್ಲಿ ಶ್ರೀಮಠವು 700ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದು ಆದರೆ ಸೂಕ್ತ ದಾಖಲೆಗಳಕೊರತೆಯಿರುವುದರಿಂದ ನಿರೂಪಿಸಲು ಸಾಧ್ಯವಿಲ್ಲ. ಬಹುಶಃ 15ನೇ ಶತಮಾನದಲ್ಲಿಎಡೆಯೂರಿನ ಶ್ರೀ ತೋಂಟದ ಸಿದ್ದಲಿಂಗೇಶ್ವರರ ಪ್ರವಾಸದಲ್ಲಿ ಗುರುಗಳು ಇಲ್ಲಿಗೆ ಬಂದುಅನುಷ್ಠಾನಗೊಂಡಿದ್ದು ಆ ಸ್ಥಳದಲ್ಲಿ ಮಠ ಸ್ಥಾಪಿತಗೊಂಡಿದೆ ಎಂದು ತಿಳಿದುಬರುತ್ತದೆ.ವಿರಕ್ತ ಸಂಪ್ರದಾಯದ ಶ್ರೀ ಜಂಗಮ ಸಂಸ್ಥಾನ ಮಠದ ಪ್ರಥಮ ಗುರುಗಳೆಂದುಶ್ರೀ ನೀಲಕಂಠೇಶ್ವರ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಇವರು ಕರಾವಳಿಯ ಈನಾಡಿನಲ್ಲಿ ವೀರಶೈವ ಧರ್ಮ ಬೆಳೆಯಲು ಭದ್ರಬುನಾದಿಯನ್ನು ಹಾಕಿದರು. ಇವರ ಕಾಲದಲ್ಲಿಜಾತಿ ಬೇದವಿಲ್ಲದೆ ಎಲ್ಲ ವರ್ಗದ ಜನರು ಸಹಾಬಾಳ್ವೆಯನ್ನು ನಡೆಸುತ್ತಿದ್ದರು. ತಮ್ಮಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ, ನಿತ್ಯ ಶಿವಾನುಭವ ಗೋಷ್ಠಿಗಳಮೂಲಕ ಭಕ್ತರನ್ನು ಸನ್ಮಾರ್ಗಕ್ಕೆ ತಂದ ಮಹಾಮಹಿಮರು. ಇಂತಹ ಗುರುಗಳ ಸ್ಮರಣಾರ್ಥಮಠದಲ್ಲಿ ಭಕ್ತರೇ ಗುರುಗಳ ತೋರುಗದ್ದುಗೆಯನ್ನು ಸ್ಥಾಪಿಸಿ, ಕಾರ್ತಿಕ ಮಾಸದಲ್ಲಿ ಜಾತ್ರೆನಡೆಯುವಂತೆ ವ್ಯವಸ್ಥೆ ಮಾಡಿದರು. ಅಂದು ಪ್ರಾರಂಭಗೊಂಡ ಜಾತ್ರಾ ಮಹೋತ್ಸವಇಂದಿಗೂ ಮುಂದುವರೆದುಕೊಂಡು ಬಂದಿದೆ. ಕೆಳದಿ ಅರಸರ ಕಾಲದಲ್ಲಿ ಶ್ರೀಮಠಕ್ಕೆರಾಜಾಶ್ರಯ ದೊರಕಿ ಪ್ರಬಲವಾಗಿ ಬೆಳೆದಿದೆ.ಕರ್ತೃಗುರುಗಳ ನಂತರದ ಗುರುಪರಂಪರೆ ಅಸ್ಪಷ್ಟವಾಗಿದೆ. ಶ್ರೀಮಠದಲ್ಲಿ 8ಗದ್ದುಗೆಗಳನ್ನು ಕಾಣಬಹುದಾಗಿದ್ದು ವಿರಾಜಪೇಟೆಯಲ್ಲಿ 6 ಗದ್ದುಗೆಗಳಿವೆ. ಈ ಆಧಾರದಮೇಲೆ ಶ್ರೀ ಮಠದಲ್ಲಿ 15ಕ್ಕೂ ಹೆಚ್ಚಿನ ಗುರುಗಳು ಆಳ್ವಿಕೆ ನಡೆಸಿದ್ದಾರೆಂದುಅಂದಾಜಿಸಬಹುದು. ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಪ್ರಕಾಶ ಮಹಾಸ್ವಾಮಿಗಳುಮಠದ ಪರಂಪರೆಯನ್ನು ಶ್ರೀಮಂತಗೊಳಿಸಿ 2012ರ ಮೇ 24ರಂದು ಲಿಂಗೈಕ್ಯರಾಗಿದ್ದುಇವರ ಐಕ್ಯಾನಂತರ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ರುದ್ರಮುನಿ ಸ್ವಾಮಿಗಳು. ಪರಂಪರೆಯ ಹಾದಿಯಲ್ಲಿ ಸಿದ್ದಗಂಗಾ ಶ್ರೀಗಳ ಆಶೀರ್ವಾದದಲ್ಲಿಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ರುದ್ರಮುನಿ ಸ್ವಾಮಿಗಳು
Date of Birth :
20-12-1982
Place :
ಮೂಡಬಿದ್ರೆ, ಮಂಗಳೂರು ತಾ||
Pattadikara :
2012

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಎಲ್ಲಾ ಹಬ್ಬಗಳ ಆಚರಣೆ, ವಿಶೇಷ ಧಾರ್ಮಿಕ ಆಚರಣೆಗಳು ಕಾರ್ತಿಕ ಮಾಸದಲ್ಲಿ ಶ್ರೀ ಮಠದ ಜಾತ್ರಾ ಮಹೋತ್ಸವ

Full Address Kannada

ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರ - 574 145 ಮಂಗಳೂರು ತಾಲ್ಲೂಕು ದಕ್ಷಿಣ ಕನ್ನಡ ಜಿಲ್ಲೆ

Map

Near by Places

ಮಂಗಳೂರು - 14 ಕಿ.ಮೀ. ಮೂಡಬಿದ್ರೆ - 22 ಕಿ.ಮೀ. ಕಟೀಲ್ - 22 ಕಿ.ಮೀ. ಉಡುಪಿ - 60 ಕಿ.ಮೀ.

Statistic

301 Views
0 Rating
0 Favorite
2 Shares
error: Content is protected !!