ಕರ್ತೃ – ಶ್ರೀ ಮ. ನಿ. ಪ್ರ. ಸ್ವ. ಶಿವಕುಮಾರ ಮಹಾಸ್ವಾಮಿಗಳು
ತುಮಕೂರು ಜಿಲ್ಲೆ ಹರಳೂರು ಗ್ರಾಮದ ಹೊರವಲಯದಲ್ಲಿ 2003ರಲ್ಲಿಸ್ಥಾಪಿತಗೊಂಡಿರುವ ಶ್ರೀ ಜಂಗಮಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕಕಾರ್ಯಚಟುವಟಿಕೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಮಠವು ಶ್ರೀ ಸಿದ್ದಗಂಗಾ ಮಠದಶಾಖಾ ಮಠವಾಗಿದ್ದು ಶ್ರೀ ಮ. ನಿ. ಪ್ರ. ಸ್ವ. ಶಿವಕುಮಾರ ಮಹಾಸ್ವಾಮಿಗಳ ಅಮೃತಹಸ್ತದಿಂದ 2003ರಲ್ಲಿ ಸ್ಥಾಪಿತಗೊಂಡಿದೆ.2003ರಲ್ಲಿ ಸ್ಥಾಪಿತಗೊಂಡ ಶ್ರೀ ಮಠದಲ್ಲಿ ಸಂಸ್ಕøತ ಪಾಠಶಾಲೆ ಹಾಗೂಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು ಎರಡೂ ಶಾಲೆಗಳು ತುಮಕೂರು ಸಿದ್ದಗಂಗಾಮಠದ ಮೇಲ್ವಿಚಾರಣೆಯಲ್ಲಿ ಮುನ್ನಡೆಯುತ್ತಿವೆ ಹಾಗೂ 2011ರವರೆಗೆ ಸಿದ್ದಗಂಗಾಮಠದಿಂದ ನೇರವಾಗಿ ಧಾರ್ಮಿಕ ಆಚರಣೆಗಳನ್ನು, ಸಾಮಾಜಿಕ ಚಟುವಟಿಕೆಗಳನ್ನುನಡೆಸುತ್ತಿದ್ದು, 2011ರ ಜೂನ್ 06ರಂದು ಶ್ರೀ ಮ. ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳನ್ನುಪೀಠಾಧಿಪತಿಗಳಾಗಿ ನೇಮಕಗೊಳಿಸಲಾಗಿದೆ.ಶ್ರೀ ಚನ್ನಬಸವ ಸ್ವಾಮಿಗಳು ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದು ಶ್ರೀ ಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಗಳು ತುಮಕೂರಿನ ಸಿದ್ದಗಂಗಾಬಾಲಕರ ಪದವಿ ಕಾಲೇಜಿನಲ್ಲಿ ಬಿ.ಎ. ಪದವಿ ಪೂರೈಸಿದ್ದು ಶ್ರೀ ಶಿವಕುಮಾರಮಹಾಸ್ವಾಮಿಗಳ ಆಶೀರ್ವಾದ ಬಲದಿಂದ ಬೆಳೆದವರು. ಶ್ರೀಗಳು ಶ್ರೀ ಮಠಕ್ಕೆ ಬಂದ ನಂತರತಮ್ಮ ಕೈಲಾದಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ.ಶ್ರೀ ಮಠದಲ್ಲಿ ಪ್ರತಿ ಅಮವಾಸ್ಯೆಗೆ “ಧಾರ್ಮಿಕ ಚಿಂತನ” ಸಮಾರಂಭ ನಡೆಸುತ್ತಿದ್ದುಕಾರ್ತೀಕ ಮಾಸದ ಅಮವಾಸ್ಯೆ ದಿನ ದೀಪೋತ್ಸವವನ್ನು ನಡೆಸಲಾಗುತ್ತಿದೆ. ನವರಾತ್ರಿಯಲ್ಲಿಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ವೀರಭದ್ರೇಶ್ವರ ರಥೋತ್ಸವವು ಚೈತ್ರ ಮಾಸದಲ್ಲಿಜರುಗುತ್ತದೆ.
Swamiji
Swamiji Name :
ಶ್ರೀ ಮ. ನಿ. ಪ್ರ. ಸ್ವ. ಚನ್ನಬಸವ ಸ್ವಾಮಿಗಳು
Date of Birth :
26-12-1990
Place :
ದೇವರಾಯಪಟ್ಟಣ, ತುಮಕೂರು ತಾ||
Pattadikara :
06-06-2011
Photo :
Programs
ಪ್ರತಿ ಅಮವಾಸ್ಯೆಗೆ "ಧಾರ್ಮಿಕ ಚಿಂತನ" ಸಮಾರಂಭ ಕಾರ್ತಿಕ ಮಾಸದ ಅಮವಾಸ್ಯೆ ದಿವಸ ದೀಪೋತ್ಸವ ನವರಾತ್ರಿಯಲ್ಲಿ ಮುತ್ತಿನ ಪಲ್ಲಕ್ಕಿ ಉತ್ಸವ ಚೈತ್ರ ಮಾಸದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಬಸವ ಜಯಂತಿ ಆಚರಣೆ
Institutions
ಸಂಸ್ಕøತ ಪಾಠಶಾಲೆ ಪ್ರೌಢ ಶಾಲೆ (ಎರಡೂ ತುಮಕೂರು ಸಿದ್ದಗಂಗಾ ಮಠದ ಮೇಲ್ವಿಚಾರಣೆಯಲ್ಲಿವೆ)
Photos
Full Address Kannada
ಶ್ರೀ ಜಂಗಮ ಮಠ ಹರಳೂರು - 572 104 ತುಮಕೂರು ತಾ|| ಮತ್ತು ಜಿಲ್ಲೆ