Shree Jagatguru Allama Prabhu Siddha Samsthana Virakta Matha

Shree Jagatguru Allama Prabhu Siddha Samsthana Virakta Matha

ಶ್ರೀ ಜಗದ್ಗುರು ಅಲ್ಲಮಪ್ರಭು ಸಿದ್ಧಸಂಸ್ಥಾನ ವಿರಕ್ತಮಠ

Average Reviews

Description

ಶ್ರೀ ಜಗದ್ಗುರು ಅಲ್ಲಮಪ್ರಭು ಸಿದ್ಧಸಂಸ್ಥಾನ ವಿರಕ್ತಮಠ

ಕರ್ತೃ – ಶ್ರೀ ಮ.ನಿ.ಪ್ರ. ಮುರುಗಿ ಮಹಾರುದ್ರ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮವು ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಮ.ನಿ.ಪ್ರ. ಮುರುಗಿ ಮಹಾರುದ್ರ ಮಹಾಸ್ವಾಮಿಗಳಿಂದ ಸುಮಾರು 18ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಅಲ್ಲಮಪ್ರಭು ಸಿದ್ಧಸಂಸ್ಥಾನ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ. ಶ್ರೀ ಮುರುಗಿ ಮಹಾರುದ್ರ ಸ್ವಾಮಿಗಳು ಮಹಾನ್ ಧರ್ಮನಿಷ್ಠರಾಗಿದ್ದು ತಮ್ಮ ಆಧ್ಯಾತ್ಮಿಕ ಜೀವನದಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಹಾಗೂ ವೀರಶೈವ ಧರ್ಮದ ಆಚರಣೆಗಳನ್ನು ಅವರಿಗೆ ತಿಳಿಯಪಡಿಸುತ್ತಾ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಶ್ರಮಿಸಿದ್ದಾರೆ. ಕರ್ತೃಗುರುಗಳ ನಂತರ ಬಂದ ಶ್ರೀಗಳ ಬಗ್ಗೆ ಮಾಹಿತಿಗಳ ಅಲಭ್ಯತೆ ಇದೆ. ಹಿಂದಿನ ಶ್ರೀಗಳಾದ ಶ್ರೀ ವೀರಪ್ಪ ಸ್ವಾಮಿಗಳು ಶ್ರೀಮಠದ ಪರಂಪರೆಯಲ್ಲಿ 5ನೇ ಶ್ರೀಗಳಾಗಿ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿದ್ದಾರೆ. ಇವರು ಸಂಸ್ಕøತ ಹಾಗೂ ಶರಣ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು ತಮ್ಮ ಗುರುಗಳಾದ ಅಥಣಿಯ ಶ್ರೀ ಸಿದ್ದಲಿಂಗ ಸ್ವಾಮಿಗಳ ಸೇವೆ ಮಾಡುವುದರಲ್ಲಿ ಸಾರ್ಥಕತೆ ಕಂಡವರು. ಶ್ರೀಗಳು ಶ್ರೀಮಠವನ್ನು ತಮ್ಮ ಕಾಯಕ ಯೋಗದಿಂದ ಅಭಿವೃದ್ಧಿಪಡಿಸಿದ್ದು ಇತರರಿಗೆ ಮಾದರಿಯಾಗಿ ಶತಾಯುಷಿಗಳಾಗಿ 1993 ರಲ್ಲಿ ಲಿಂಗೈಕ್ಯರಾಗಿದ್ದಾರೆ. ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು 1993ರಲ್ಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು 2001ರ ಮಾರ್ಚ್ 26ರಲ್ಲಿ ಪಟ್ಟಾಧಿಕಾರ ವಹಿಸಿ ಕೊಂಡಿದ್ದಾರೆ. ಶ್ರೀಗಳು ಶ್ರೀಮಠದ ಪಟ್ಟಕ್ಕೆ ಬಂದ ಮೇಲೆ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿದ್ದು ಶೈಕ್ಷಣಿಕವಾಗಿಯೂ ಕಾರ್ಯನಿರ್ವಹಿಸುತ್ತಾ ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವತ್ತ ಗಮನಹರಿಸಿದ್ದಾರೆ. ಶ್ರೀಮಠದಲ್ಲಿ ದಿನನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಭಾದ್ರಪದ ಮಾಸದಲ್ಲಿ ಅಲ್ಲಮ ಪ್ರಭುದೇವರ “ಕಿಚಡಿ ಜಾತ್ರೆ” ಗಳನ್ನು ನಡೆಸುತ್ತಾರೆ. 

Swamiji

Swamiji Name :
ಶ್ರೀ ಮ.ನಿ.ಪ್ರ. ಪ್ರಭು ಮಹಾಸ್ವಾಮಿಗಳು
Date of Birth :
1-2-1971
Place :
ಚಿಮ್ಮಡ, ಜಮಖಂಡಿ ತಾ||
Pattadikara :
26-03-2001
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ದವನದ ಹುಣ್ಣಿಮೆಗೆ ಶ್ರೀ ಮ.ನಿ.ಪ್ರ. ವೀರಪ್ಪ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು.
ಭಾದ್ರಪದದಲ್ಲಿ ಅಲ್ಲಮ ಪ್ರಭು ದೇವರ ಖಿಚಡಿ ಜಾತ್ರೆ.
ಶ್ರೀ ಜಗದ್ಗುರು ಅಲ್ಲಮಪ್ರಭು ಸಿದ್ಧ ಸಂಸ್ಥಾನ ವಿರಕ್ತಮಠ

Institutions

ಪೂರ್ವ ಪ್ರಾಥಮಿಕ ಶಾಲೆ. ಕಿರಿಯ / ಹಿರಿಯ ಪ್ರಾಥಮಿಕ ಶಾಲೆ. ಐ.ಟಿ.ಐ. ಕಾಲೇಜು / ಎನ್.ಟಿ.ಸಿ. ಕಾಲೇಜು.

Photos

Full Address Kannada

ಶ್ರೀ ಜಗದ್ಗುರು ಅಲ್ಲಮಪ್ರಭು ಸಿದ್ಧಸಂಸ್ಥಾನ ವಿರಕ್ತಮಠ,
ಚಿಮ್ಮಡ - 587 312,
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ಮಹಾಲಿಂಗಪುರ - 4 ಕಿ.ಮೀ.
ರಬಕವಿ - 6 ಕಿ.ಮೀ.
ಜಮಖಂಡಿ - 30 ಕಿ.ಮೀ.
ಬಾಗಲಕೋಟೆ - 70 ಕಿ.ಮೀ.

Statistic

20 Views
0 Rating
0 Favorite
0 Share
error: Content is protected !!