Shree Jagadguru Shivalingeshwara Kumarendra Maha Sannidi Sidda Samsthana Peetha-Savalagi

Shree Jagadguru Shivalingeshwara Kumarendra Maha Sannidi Sidda Samsthana Peetha-Savalagi Claimed

ಶ್ರೀ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಸಿದ್ದಸಂಸ್ಥಾನ ಪೀಠ - ಸಾವಳಗಿ

Average Reviews

Description

ಶ್ರೀ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಸಿದ್ದಸಂಸ್ಥಾನ ಪೀಠ – ಸಾವಳಗಿ

ಕರ್ತೃ – ಶ್ರೀ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ

ಗೋಕಾಕ್ ತಾಲ್ಲೂಕಿನ ಸಾವಳಗಿಯಲ್ಲಿ ಅಸ್ತಿತ್ವದಲ್ಲಿರುವ ಪುರಾತನ ಕಾಲದಶ್ರೀ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿದಿ ಸಿದ್ದಸಂಸ್ಥಾನ ಪೀಠವು ನಾಡಿನಪ್ರಮುಖ ಮಠಗಳಲ್ಲೊಂದಾಗಿದ್ದು ತನ್ನ ವಿಶಿಷ್ಟ ಪರಂಪರೆಯಿಂದ ಹಿಂದೂ-ಮುಸ್ಲಿಂಸಾಮರಸ್ಯದ ಕೇಂದ್ರವಾಗಿ ಅಪಾರ ಸಂಖ್ಯೆಯ ಭಕ್ತರನ್ನು ಸಂಪಾದಿಸಿಕೊಂಡು ಭಕ್ತರನ್ನುಸನ್ಮಾರ್ಗದಲ್ಲಿ ಮುನ್ನಡೆಸುತ್ತಿದೆ.ಕರ್ತೃಗುರುಗಳಾದ ಜಗದ್ಗುರು ಶ್ರೀ ಮ.ನಿ.ಪ್ರ. ಶಿವಲಿಂಗೇಶ್ವರ ಶಿವಯೋಗಿಗಳುತಪೋನಿಷ್ಠರಾಗಿದ್ದು ತಮ್ಮ ಪವಾಡಗಳಿಂದ ಮನೆಮಾತಾದವರು. ಗುಲ್ಬರ್ಗ ಜಿಲ್ಲೆಹಿರೇಸಾವಳಗಿ ಸಮೀಪದ ಕೊಳ್ಳೂರು ಗ್ರಾಮದಲ್ಲಿ ಜನಿಸಿದ ಶ್ರೀಗಳು ತಮ್ಮಚಿಕ್ಕವಯಸ್ಸಿನಲ್ಲಿಯೇ ಮನೆಯನ್ನು ತೊರೆದು ಹಿರೇಸಾವಳಗಿಯ ದುರ್ಗಮ ಪ್ರದೇಶವಾದಬೆಟ್ಟದ ಮೇಲೆ ತಪೋನಿಷ್ಠರಾಗಿ ತಪೋಸಿದ್ದಿ ಹಾಗೂ ಯೋಗ ಸಿದ್ದಿಗಳನ್ನುಸಂಪಾದಿಸಿಕೊಂಡರು.ಶ್ರೀಗಳ ಕಠಿಣ ವ್ರತಾಚರಣೆಗಳು ಹಾಗೂ ಧಾರ್ಮಿಕ ಪ್ರಭೆಯಿಂದ ಪ್ರಭಾವಿತರಾದಜನರು ಶ್ರೀಗಳಿಗೋಸ್ಕರ ಹಿರೇಸಾವಳಗಿಯಲ್ಲಿ ಮಠವನ್ನು ಕಟ್ಟಿಸಿಕೊಟ್ಟರು. ಇಲ್ಲಿ ಹತ್ತಾರುವರ್ಷಗಳ ಕಾಲ ನೆಲೆನಿಂತು ತಮ್ಮ ಪವಾಡಗಳಿಂದ ಜನಜನಿತರಾದ ಶ್ರೀಗಳು ಮುಸ್ಲಿಂಸಂತರಾದ ಬಂದೇ ನವಾಜರಿಗೆ ತಮ್ಮ ಪವಾಡವನ್ನು ತೋರಿಸಿ ಅವರನ್ನುಆಶ್ಚರ್ಯಚಕಿತರನ್ನಾಗಿ ಮಾಡಿದ್ದರು. ಹಾಗೆಯೇ ಬಂದೇ ನವಾಜರ ವಿನಂತಿಯಂತೆಗುಲ್ಬರ್ಗದ ಉರುಸ್ಗೆ ಆಗಮಿಸಿದ ಶ್ರೀಗಳನ್ನು ರೋಜಾದ ರಾಜನು ಊರಲ್ಲೆಲ್ಲಾಮೆರವಣಿಗೆ ಮಾಡಿ ಗೌರವ ಸಮರ್ಪಿಸುತ್ತಾರೆ.ಶ್ರೀಗಳ ಜೀವನದ ಮತ್ತೊಂದು ಪ್ರಮುಖ ಘಟನೆ. ಔರಂಗಜೇಬನು ದಕ್ಷಿಣದೇಶಗಳ ಮೇಲೆ ದಂಡೆತ್ತಿ ಬಂದಾಗ ಶ್ರೀಗಳ ಪವಾಡಗಳನ್ನು ಕೇಳಿ ತಿಳಿದು ಅವರ ದರುಶನಕ್ಕೆಬಂದು ರಾಜಮರ್ಯಾದೆಗಳೊಂದಿಗೆ ಗೌರವ ಸಮರ್ಪಣೆ ನೀಡಿ “ರಾಜ ಜಗದ್ಗುರು”ಎಂಬ ಬಿರುದನ್ನು ನೀಡುತ್ತಾನೆ ಹಾಗೂ ಶ್ರೀಗಳಿಗೆ ಮುಸ್ಲಿಂ ರಾಜರು ತೊಡುತ್ತಿದ್ದ ಹಸಿರುರಾಜ ಪೋಷಾಕನ್ನು ತೊಡಿಸಿ ಮುದ್ರೆಯುಂಗುರ ನೀಡಿ ಗೌರವಿಸಿದನು.ಇಂತಹಮಹಾಮಹಿಮ ಶ್ರೀ ಶಿವಲಿಂಗೇಶ್ವರರು ಲೋಕೋದ್ಧಾರಕ್ಕಾಗಿ ಹಿರೇಸಾವಳಗಿಯಿಂದಸಂಚಾರ ಹೊರಟು ಅಲ್ಲಲ್ಲಿ ಭಕ್ತರಿಗೆ ಧರ್ಮೋಪದೇಶ ಮಾಡುತ್ತಾ ಕುರುಬೆಟ್ಟ ಶ್ರೀಸಿದ್ದರಾಮ ದೇಸಾಯಿಗಳ ಮನೆಯಲ್ಲಿ ಕೆಲಕಾಲ ತಂಗಿದ್ದು ಕೊನೆಯಲ್ಲಿ ಘಟಪ್ರಭಾ ಮತ್ತುಹಿರಣ್ಯಕಶಪು ನದಿಗಳ ಸಂಗಮ ಸ್ಥಳದಲ್ಲಿ ನೆಲೆನಿಂತು ಶ್ರೀಮಠವನ್ನು ಸ್ಥಾಪಿಸಿ ಈಭೂಮಿಯನ್ನು ಯೋಗಭೂಮಿಯನ್ನಾಗಿ ಮಾಡಿಕೊಂಡರು.ಹೀಗೆ ಸಾವಳಗಿಯ ಘಟಪ್ರಭಾ ನದಿದಡದಲ್ಲಿ ನೆಲೆನಿಂತ ಶ್ರೀಗಳುದೀರ್ಘಾನುಷ್ಠಾನ ಕೈಗೊಂಡರು ಹಾಗೂ ಇಲ್ಲಿನ ಭಕ್ತರಿಗೆ ತಮ್ಮ ಅನುಷ್ಠಾನಗಳ ಮೂಲಕಸನ್ಮಾರ್ಗ ತೋರಿ ತಾವು ಇಲ್ಲಿಯೇ ಯೋಗ ಸಮಾದಿಯಾದರು.115116ಅವರು ಯೋಗ ಸಮಾದಿಯಾದ ಸ್ಥಳದಲ್ಲಿ ದೊರಕಿದ ಮೂರು ಭಸ್ಮದ ಗಟ್ಟಿಗಳಲ್ಲಿ ಒಂದುಸಾವಳಗಿಯ ಶ್ರೀಮಠದಲ್ಲಿ ಎರಡನೆಯದು ಹಿರೇಸಾವಳಗಿಯಲ್ಲಿ ಹಾಗೂ ಮೂರನೇಯದುಕುರುಬೆಟ್ಟ ಶ್ರೀ ಸಿದ್ದರಾಮ ದೇಸಾಯಿಯವರ ಮನೆಯಲ್ಲಿ ಸ್ಥಾಪಿತಗೊಂಡು ಇಂದಿಗೂಪೂಜೆ ಸಲ್ಲಿಕೆಯಾಗುತ್ತಿದೆ.ಕರ್ತೃಗುರುಗಳಿಂದಾಗಿ ಯೋಗಭೂಮಿಯಾದ ಶ್ರೀಮಠದ ಪರಂಪರೆಯಲ್ಲಿಇಲ್ಲಿಯವರೆಗೂ 15 ಜನ ಶ್ರೀಗಳು ಅಧಿಕಾರ ನಡೆಸಿದ್ದು ಹಿಂದೂ-ಮುಸ್ಲಿಂ ಭಾವೈಕ್ಯತಾಕೇಮದ್ರವಾಗಿಯೇ ಮುಂದುವರೆಸಿಕೊಂಡು ಬರಲಾಗುತ್ತದೆ. ಹಿಂದಿನ ಶ್ರೀಗಳಾದಶ್ರೀ ಮ.ನಿ.ಜ. ಸಿದ್ದರಾ ಮಹಾಸ್ವಾಮಿಗಳು ಸಮಾಜೋದ್ಧಾರಕರಾಗಿದ್ದು ಹಿಂದುಳಿದ, ದೀನ,ದಲಿತರಿಗೆ ನೆರವಾಗಿ ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು ಹಾಗೂ ಶ್ರೀಮಠದಲ್ಲಿನಿತ್ಯ ದಾಸೋಹದ ವ್ಯವಸ್ಥೆ ಪ್ರಾರಂಭಿಸಿದರು.ಈಗಿನ ಶ್ರೀಗಳಾದ ಜಗದ್ಗುರು ಶ್ರೀ ಮ.ನಿ.ಜ. ಶಿವಲಿಂಗೇಶ್ವರ ಕುಮಾರೇಂದ್ರಮಹಾಸ್ವಾಮಿಗಳು 1978ರ ಮೇ 18ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಆಗಮಿಸಿಶ್ರೀಮಂತ ಪರಂಪರೆಯ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಸ್ವತಃ ಸಾಹಿತಿಗಳಾಗಿದ್ದು ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಹಾಗೂ ಸ್ವತಃಆಯುರ್ವೇದ ಪದ್ಧತಿಯಲ್ಲಿ ಔಷಧಗಳನ್ನು ತಯಾರಿಸಿ ಭಕ್ತರಿಗೆ ಉಪಚರಿಸುವಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ ಹಾಗೂ ಶೈಕ್ಷಣಿಕವಾಗಿ ಅನೇಕ ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶ್ರಯದಾತರಾಗಿದ್ದಾರೆ. ಶ್ರೀಗಳು ಶ್ರೀಮಠದ ಅಧಿಕಾರಕ್ಕೆಬರುವ ಮುನ್ನ ಮೈಸೂರಿನ ಅರಮನೆ ಪಂಚಗವಿ ಮಠ ಹಾಗೂ ಅಥಣಿಯ ಗಚ್ಚಿನಮಠಗಳಲ್ಲಿ ಕೆಲ ಕಾಲ ಅಧಿಕಾರ ನಡೆಸಿರುವುದು ಗಮನಾರ್ಹ.ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ತ್ರಿಕಾಲ ಪೂಜಾನಿಷ್ಠರಾಗಿತಮ್ಮ ಆಹಾರವನ್ನು ತಾವೇ ಸಿದ್ದಪಡಿಸಿಕೊಳ್ಳುವ ಅಧಮ್ಯ ವಿರಕ್ತರು. ಸಮಾಜದ ಎಲ್ಲಾವರ್ಗಗಳಲ್ಲೂ ಅಪಾರ ಭಕ್ತರನ್ನು ಹೊಂದಿ ಸಮಾಜದ ಸಾಮರಸ್ಯ, ಸಮಾನತೆಗೆಹೋರಾಡುತ್ತಿರುವ ಶ್ರೀಗಳ ನುಡಿಗಳೆಂದರೆ ಈ ಭಾಗದ ಭಕ್ತರಿಗೆ ವೇದವಾಕ್ಯ. ಶಿಕ್ಷಣ ಕ್ಷೇತ್ರಕ್ಕೆಅಪಾರ ಕೊಡುಗೆ ನೀಡುತ್ತಿರುವ ಶ್ರೀಗಳು ಮಠದ ವತಿಯಿಂದ ಗೋಕಾಕ್ ನಗರದಲ್ಲಿನಡೆಯುತ್ತಿರುವ ಕಾಲೇಜಿಗೆ 75 ಎಕರೆ ಜಮೀನನ್ನು ನೀಡಿ ಶಿಕ್ಷಣ ಸಂಸ್ಥೆಯ ಉನ್ನತೀಕರಣಕ್ಕೆಕಾರಣವಾಗಿರುವುದಲ್ಲದೆ ಆ ಮುಖೇನ ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲಕಲ್ಪಿಸಿದ್ದಾರೆ.

Swamiji

Swamiji Name :
ಶ್ರೀ ಶೂನ್ಯಸಿಂಹಾಸನಾಧೀಶ ಶ್ರೀ ಮ.ನಿ.ಜ. ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು
Date of Birth :
5-11-1947
Place :
ಕಮರವಾಡಿ, ಚಾಮರಾಜ ನಗರ ತಾ||
Pattadikara :
18-5-1978
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ
ದವನದ ಹುಣ್ಣಿಮೆ ನಂತರ ಶ್ರೀ ಮಠದ ಜಾತ್ರೆ
ದಸರಾದಲ್ಲಿ "ದಸರಾ ದರ್ಬಾರ್" ಕಾರ್ಯಕ್ರಮ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ / ಸ್ನಾತಕೋತ್ತರ ಕಾಲೇಜ್

Photos

Full Address Kannada

ಶ್ರೀ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ
ಮಹಾಸನ್ನಿದಿ ಸಿದ್ಧಸಂಸ್ಥಾನ ಪೀಠ
ಸಾವಳಗಿ - 591 307
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ

Map

Near by Places

ಗೋಕಾಕ್ - 15 ಕಿ.ಮೀ
ಬೆಳಗಾವಿ - 65 ಕಿ.ಮೀ
ಘಟಪ್ರಭ - 12 ಕಿ.ಮೀ

Statistic

8 Views
0 Rating
0 Favorite
0 Share
error: Content is protected !!