Shree Jagadguru Madivaleshwara Shivayogigala – Neginahala

Shree Jagadguru Madivaleshwara Shivayogigala – Neginahala Claimed

ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ - ನೇಗಿನಹಾಳ

Average Reviews

Description

ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ – ನೇಗಿನಹಾಳ

ಪೂಜ್ಯ ಶ್ರೀ ಅಡವೆಪ್ಪಜ್ಜನವರು

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ 12 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಪೂಜ್ಯ ಶ್ರೀಅಡವೆಪ್ಪಜ್ಜನವರಿಂದ 1972ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಮಡಿವಾಳೇಶ್ವರಶಿವಯೋಗಿಗಳ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಈ ಭಾಗದಲ್ಲಿ ಪ್ರಸಿದ್ದಿ ಪಡೆದಿದೆ.ಗರಗದ ಜಗದ್ಗುರು ಶ್ರೀ ಮಡಿವಾಳೇಶ್ವರ ಶಿವಯೋಗಿಗಳೆಂದರೆ ನಾಡಿನಧಾರ್ಮಿಕ ವಲಯದಲ್ಲಿ ಪ್ರಮುಖ ಹೆಸರು. ಶ್ರೀ ಮಡಿವಾಳೇಶ್ವರರು ಕಿತ್ತೂರು ಸಂಸ್ಥಾನದರಾಜಗುರು ಮಠದಲ್ಲಿ ತಮ್ಮ ಪವಾಡಗಳಿಂದ ಹೆಸರಾಗಿದ್ದರು. ಆದರೆ ಕಾರಣಾಂತರಗಳಿಂದಕಿತ್ತೂರನ್ನು ತೊರೆದು ಲೋಕಸಂಚಾರ ಹೊರಟ ಶ್ರೀಗಳು ಅಲ್ಲಲ್ಲೇ ನೆಲೆಗೊಂಡು ಅನುಷ್ಠಾನಕೈಗೊಂಡು ಮುಂದುವರೆದಿದ್ದು ಕೊನೆಯಲ್ಲಿ ಧಾರವಾಡ ಜಿಲ್ಲೆ ಗರಗದಲ್ಲಿ ನೆಲೆನಿಲ್ಲುತ್ತಾರೆ.ಹೀಗೆ ಅವರು ಅನುಷ್ಠಾನಗೊಂಡ ಸ್ಥಳಗಳಲ್ಲೆಲ್ಲಾ ಮಠಗಳು ಸ್ಥಾಪನೆಯಾಗಿದ್ದು ಅವುಗಳಲ್ಲಿನೇಗಿನಹಾಳ ಶ್ರೀಮಠವು ಒಂದು.ಹೀಗೆ ಶ್ರೀ ಮಡಿವಾಳೇಶ್ವರರ ಅನುಷ್ಠಾನದಿಂದ ಜಾಗೃತಗೊಂಡಿದ್ದ ಸ್ಥಳದಲ್ಲಿ1972ರಲ್ಲಿ ಶ್ರೀ ಅಡವೆಪ ್ಪಜ್ಜನವರು ಶ್ರೀಮಠವನ್ನು ಸಾ್ಥಪಿಸುತ್ತಾರೆ. ಶ್ರೀಗಳುಶಿವಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಶ್ರೀಮಠಕ್ಕೆಸೆಳೆದು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ. ಶ್ರೀಗಳು ಶ್ರೀಮಡಿವಾಳೇಶ್ವರರ ತತ್ತ್ವಸಿದ್ದಾಂತಗಳನ್ನು, ವೀರಶೈವ ಧರ್ಮದ ಆಚರಣೆಗಳನ್ನು ಭಕ್ತರಿಗೆಸವಿವರವಾಗಿ ವಿವರಿಸಿ ಸನ್ಮಾರ್ಗ ತೋರುತ್ತಾ ಕೊನೆಗೆ 2007ರಲ್ಲಿ ಬೈಲಹೊಂಗಲತಾಲ್ಲೂಕಿನ ಇಂಚಲದಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಬಸವ ಸಿದ್ದಲಿಂಗ ಸ್ವಾಮಿಗಳು 2007ರ ಮೇ05ರಂದು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡಿದ್ದು ಗುರುಗಳ ಹಾದಿಯಲ್ಲಿಯೇಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ವಿಜೃಂಬಣೆಯ ಬಸವಜಯಂತಿ ಆಚರಿಸುತ್ತಿದ್ದು ದವನದ ಹುಣ್ಣಿಮೆಗೆ ಶ್ರೀಮಠದ ಜಾತ್ರೆಯನ್ನು ನಡೆಸಲಾಗುತ್ತದೆ.ಹಾಗೂ ಆ ಸಮಯದಲ್ಲಿ “ಬಸವ ತತ್ತ ಸಮಾವೇಶ”ವನ್ನು ಆಯೋಜಿಸಲಾಗುತ್ತಿದ್ದು ಭಕ್ತರುಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

Swamiji

Swamiji Name :
ಪೂಜ್ಯ ಶ್ರೀ ಬಸವ ಸಿದ್ದಲಿಂಗ ಸ್ವಾಮಿಗಳು
Date of Birth :
10-07-1972
Place :
ನೇಗಿನಹಾಳ, ಬೈಲಹೊಂಗಲ ತಾ||
Pattadikara :
5-5-2007
Photo :

Programs

ದವನದ ಹುಣ್ಣಿಮೆಗೆ ಶ್ರೀಮಠದ ಜಾತ್ರೆ ಹಾಗೂ “ಬಸವ ತತ್ವ ಸಮಾವೇಶ” ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಬಸವ ಜಯಂತಿ ಆಚರಣೆ

Photos

Full Address Kannada

ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ
ನೇಗಿನ ಹಾಳ - 591 102
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ

Map

Near by Places

ಯರಡಾಲ ಕ್ರಾಸ್ - 7 ಕಿ.ಮೀ.
ಬೈಲಹೊಂಗಲ - 12 ಕಿ.ಮೀ.
ಕಿತ್ತೂರು - 25 ಕಿ.ಮೀ.
ಬೆಳಗಾವಿ - 47 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!