ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಅಡಹಳಟ್ಟಿ ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಇತ್ತೀಚೆಗೆ 2015ರ ಫೆಬ್ರವರಿ16ರಂದು ಪ್ರಾರಂಭಗೊಂಡಿರುವ ಶ್ರೀ ಜಗದ್ಗುರು ದುರುದುಂಡೀಶ್ವರ ಶಾಖಾ ಮಠವುಅಸ್ತಿತ್ವದಲ್ಲಿದೆ. ಪೂಜ್ಯ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು ಆಧ್ಯಾತ್ಮ ಮಂದಿರವನ್ನು ಸ್ಥಾಪಿಸಿಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನುಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು ಮೂಲತಃ ದಾವಣಗೆರೆಯವರಾಗಿದ್ದುಚಿಕ್ಕವಯಸ್ಸಿನಲ್ಲಿಯೇ ಅಥಣಿ ಗಚ್ಚಿನ ಮಠದ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳಕೃಪಾದೃಷ್ಟಿಗೆ ಒಳಗಾದವರು. ಬಾಲಶಿವಯೋಗಿಗಳೆಂದೇ ಹೆಸರು ಪಡೆದಿದ್ದ ಶ್ರೀಗಳುಪ್ರಾಥಮಿಕದಿಂದ ಆಧ್ಯಾತ್ಮದ ತನಕ ಶಿಕ್ಷಣವನ್ನು ಗಚ್ಚಿನ ಮಠದಲ್ಲಿ ಪಡೆದು, ಸಂಸ್ಕøತ ಬಿ.ಎ.ಪದವಿಯನ್ನು ನಂತರ ಶಿವಯೋಗ ಮಂದಿರ, ಬೆಂಗಳೂರಿನ ಮಹಾಂತಿನ ಮಠ ಹಾಗೂಕಾಶಿಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಆನಂತರ ಶ್ರೀ ರಂಭಾಪುರಿ ಗಂಗಾಧರಜಗದ್ಗುರುಗಳು ಹಾಗೂ ಶ್ರೀಶೈಲ ವಾಗೀಶ ಪಂಡಿತಾರಾಧ್ಯರ ಸೇವೆ ಮಾಡುತ್ತಾ ಆಧ್ಯಾತ್ಮದಪೂರ್ಣ ಅರಿವನ್ನು ಪಡೆದರು. ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಶ್ರೀಗಳು ಸಂಸಾರಬಂಧನಕ್ಕೆ ಒಳಪಟ್ಟು 23 ವರ್ಷಗಳ ಕಾಲ ಕೆ.ಎಸ್.ಆರ್.ಟಿ.ಸಿ. ಯಲ್ಲಿ ಸೇವೆ ಸಲ್ಲಿಸಿ ಆನಂತರಬನವಾಸಿ ಶ್ರೀಗಳಿಂದ ಸನ್ಯಾಸ ಸ್ವೀಕರಿಸಿದರು. ಹೀಗೆ ಆಧ್ಯಾತ್ಮ, ಕಾಯಕ, ಸಂಸಾರಎಲ್ಲವನ್ನೂ ತೂಗಿಸಿಕೊಂಡು ತಮ್ಮ ಸಿದ್ದಿಗೆ ಯಾವುದೇ ಚ್ಯುತಿ ಬಾರದಂತೆ ಸಾಗಿ ಬಂದವರುಶ್ರೀಗಳು.ಸನ್ಯಾಸ ದೀಕ್ಷೆ ಸ್ವೀಕರಿಸಿದ ಶ್ರೀಗಳು ಮತ್ತೆ ಕೆಲ ಕಾಲ ಆಧ್ಯಾತ್ಮದ ಅರಿವನ್ನುಪರಿಪೂರ್ಣಗೊಳಿಸಿಕೊಂಡು ನಂತರ 2015ರ ಫೆಬ್ರವರಿ 16ರಿಂದಸ್ಥಾಪಿಸಿದರು. ನಿಡಸೋಸಿಜಗದ್ಗುರುಗಳ ಆಶೀರ್ವಾದ ಪಡೆದು ಮಂದಿರವನ್ನು ಪ್ರಾರಂಭಿಸಿದ ಶ್ರೀಗಳು ಮಂದಿರದಲ್ಲಿತಮ್ಮ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣನೆಲೆಗೊಳಿಸಿದ್ದಾರೆ ಹಾಗೂ ಚೈತ್ರಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಶಿವಪಂಚಾಕ್ಷರಿ ಸ್ವಾಮಿಗಳು
Date of Birth :
09-03-1962
Place :
ದಾವಣಗೆರೆ
Programs
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಪ್ರತಿ ವರ್ಷ ಚೈತ್ರ ಮಾಸದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
Full Address Kannada
ಶ್ರೀ ಜಗದ್ಗುರು ದುರುದುಂಡೀಶ್ವರ ಶಾಖಾ ಮಠ
ಅಡಹಳಟ್ಟಿ - 591 248
ಅಥಣಿ ತಾ||, ಬೆಳಗಾವಿ ಜಿಲ್ಲೆ