ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಸುಣ್ಣದೋಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 22 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಪುರಾತನಕಾಲದ ಶ್ರೀ ಜಡೆಸಿದ್ದೇಶ್ವರ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವ ಕಾರ್ಯದಲ್ಲಿನಿರತವವಾಗಿದೆ.ಶ್ರೀ ಜಡೆಸಿದ್ದೇಶ್ವರ ಮಠವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿಬೆಳೆದಿದ್ದು ಶ್ರೀಮಠದ ಸ್ಥಾಪನೆ ಹಾಗೂ ಕರ್ತೃಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳುಲಭ್ಯವಿಲ್ಲದಾಗಿದೆ. ಶ್ರೀಮಠವು ಪುರಾತನ ಕಾಲದಲ್ಲೇ ಸ್ಥಾಪಿತಗೊಂಡಿರಬಹುದಾಗಿದ್ದು ತನ್ನವಿಶಿಷ್ಟ ಪರಂಪರೆಯಿಂದಾಗಿ ಗಮನ ಸೆಳೆಯುತ್ತದೆ. ಈ ಮಠದ ಸಂಪ್ರದಾಯದಲ್ಲಿ ಮುಸ್ಲಿಂಸಂತರನ್ನು ಸಹ ಮಠಾಧಿಪತಿಗಳನ್ನಾಗಿ ನೇಮಿಸಬಹುದೆಂದು ತಿಳಿದುಬರುತ್ತದೆ.ಶ್ರೀಮಠವು ವಿಶಿಷ್ಟ ರೀತಿಯ ಸಂಪ್ರದಾಯವನ್ನು ಪಾಲಿಸುತ್ತದೆಯಾದರೂ ಇತರವೀರಶೈವ ಮಠಗಳಂತೆ ಇಲ್ಲಿಯೂ ಧಾರ್ಮಿಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬರಲಾಗಿದೆಹಾಗೂ ತಿಳಿದುಬರುವ ಇನ್ನೊಂದು ಸಂಗತಿಯೆಂದರೆ ಶ್ರೀಮಠದ ಸ್ವಾಮಿಗಳನ್ನು “ಶ್ರೀಕಬೀರಪೂಜ್ಯ” ಎಂಬ ಹೆಸರಿನಲ್ಲಿ ಕರೆಯುವುದು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಶ್ರೀಮಠದಪೀಠಾಧಿಪತಿಗಳಾಗಿ ಬಂದ ನಂತರ ಕ್ರಿಯಾಶೀಲರಾಗಿ, ಪರಂಪರೆಗೆ ಅನುಗುಣವಾಗಿಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸಲು ಶ್ರಮಿಸುತ್ತಿದ್ದಾರೆ ಹಾಗೂ ತಮ್ಮzs Àರ್ಮೋಪದೇಶಗಳಿಂದ, ಸಾಮಾಜಿಕ ಸಾಮರಸ್ಯದ ಕಾರ್ಯಕ್ರಮಗಳಿಂದಸಮಾಜೋದ್ಧಾರಕ್ಕೆ ಶ್ರಮವಹಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ಶಿವರಾತ್ರಿ, ಬಸವಜಯಂತಿಗಳಲ್ಲಿವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಶ್ರಾವಣ ಮಾಸದ ಕೊನೆಯಸೋಮವಾರ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗುತ್ತದೆ ಹಾಗೂ ದವನದ ಹುಣ್ಣಿಮೆನಂತರ ನಾಲ್ಕನೇ ದಿನಕ್ಕೆ ಜರುಗುವ ಶ್ರೀಮಠದ ರಥೋತ್ಸವವು ವಿಶಿಷ್ಟ ಸಂಪ್ರದಾಯದಲ್ಲಿನಡೆಯುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು
Place :
ಸುಣ್ಣಧೋಳಿ, ಗೋಕಾಕ್ ತಾ||
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ
ದವನದ ಹುಣ್ಣಿಮೆಯ ನಂತರ ನಾಲ್ಕನೇ ದಿನಕ್ಕೆ ರಥೋತ್ಸವ
ಶಿವರಾತ್ರಿ ಮತ್ತು ಬಸವಜಯಂತಿ ಆಚರಣೆ
ಶ್ರಾವಣ ಮಾಸದ ಕೊನೆಯ ಸೋಮವಾರ ಪಲ್ಲಕ್ಕಿ ಉತ್ಸವ ಕಾರ್ತಿಕ ಮಾಸದಲ್ಲಿ ದಿಪೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ಜಡೆಸಿದ್ಧೇಶ್ವರ ಮಠ
ಸುಣ್ಣಧೋಳಿ - 591 310
ಗೋಕಾಕ್ ತಾ||, ಬೆಳಗಾವಿ ಜಿಲ್ಲೆ