ಕರ್ತೃ – ಶ್ರೀ ಷ.ಬ್ರ. ಜಡೆ ಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು
ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಮಲಘಾಣ ಗ್ರಾಮದಲ್ಲಿ ಶ್ರೀ ಷ.ಬ್ರ. ಜಡೆಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಜಡೆ ಶಾಂತೇಶ್ವರ ಮಠವು ತನ್ನ ಧಾರ್ಮಿಕ ಆಚರಣೆಗಳಿಂದ ಈಭಾಗದ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಮಠವುಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿಬೆಳೆದುಬಂದಿದೆ.ಶ್ರೀಶೈಲ ಸಮೀಪದ ಸಿದ್ಧಾಪುರದಿಂದ ˉಲೋಕಸಂಚಾರಕ್ಕೆ ಹೊರಟ ಶ್ರೀ ಜಡೆಶಾಂತೇಶ್ವರ ಶಿವಾಚಾರ್ಯರು ಅಲ್ಲಲ್ಲಿ ಅನುಷ್ಠಾನ ಕೈಗೊಳ್ಳುತ್ತಾ ಮಲಘಾಣ ಗ್ರಾಮಕ್ಕೆಆಗಮಿಸುತ್ತಾರೆ. ಶ್ರೀಗಳು ಮಹಾತಪಸ್ವಿಗಳಾಗಿದ್ದು, ಗ್ರಾಮದಲ್ಲಿ ಧೀರ್ಘಕಾಲ ತಪಸ್ಸನ್ನುಆಚರಿಸಿ ತಪೋಸಿದ್ಧಿಯನ್ನು ಪಡೆದು ತಾವು ತಪಸ್ಸನ್ನಾಚರಿಸಿದ ಸ್ಥಳದಲ್ಲಿ ಶ್ರೀಮಠವನ್ನುಸ್ಥಾಪಿಸಿದ್ದಾರೆ. ಭಕ್ತರು ಕೂಡ ಶ್ರೀಮಠದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಶ್ರೀ ಜಡೆಶಾಂತೇಶ್ವರ ಸ್ವಾಮಿಗಳು ಶ್ರೀ ಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಸಮಾಜವನ್ನು ಧಾರ್ಮಿಕ ತಳಹದಿಯ ಮೇˉÉ ಬೆಳೆಸುವಲ್ಲಿ ಶ್ರಮಿಸಿದ್ದು ಭಕ್ತರಿಗೆ ಶಾಂತಿ,ಸಹಬಾಳ್ವೆಯಿಂದ ಬದುಕುವ ಮಾರ್ಗವನ್ನು ತೋರಿಸಿ ಸ್ವಾವಲಂಬಿಗಳಾಗುವಂತೆಮಾಡಿದರು. ಶ್ರೀಗಳ ನಂತರದ ಪರಂಪರೆಯಲ್ಲಿ ಶ್ರೀ ಬಸವಲಿಂಗ ಶಿವಾಚಾರ್ಯರು, ಶ್ರೀಕರಿಬಸವ ಶಿವಾಚಾರ್ಯರು ಮತ್ತು ಹಿಂದಿನ ಗುರುಗಳಾದ ಶ್ರೀ ದುಂಡಯ್ಯಶಿವಾಚಾರ್ಯರು ಅಧಿಕಾರ ನಡೆಸಿದ್ದಾರೆ ಎಂದು ಹೇಳˉÁಗಿದ್ದು ಸ್ಪಷ್ಟ ದಾಖˉÉಗಳಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ ಜಡೆಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ತಮ್ಮಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು, ಸುಧೀರ್ಘ ಕಾಲದಿಂದಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಜುಲೈ ತಿಂಗಳಿನಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ಮಹೋತ್ಸವ ನಡೆಸುತ್ತಿದ್ದು, ಯುಗಾದಿಯಲ್ಲಿ ಶ್ರೀಮಠದ ಜಾತ್ರೆಯನ್ನುವಿಜೃಂಭಣೆಯಿಂದ ನಡೆಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಜಡೆ ಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1948
Place :
ಮಲಘಾಣ, ಸಿಂಧಗಿ ತಾ||
Pattadikara :
1964
Photo :
Programs
ಯುಗಾದಿಯ ದಿನದಂದು ಶ್ರೀಮಠದ ಜಾತ್ರೆ.
ಜುಲೈ ತಿಂಗಳಲ್ಲಿ ಲಿಂ. ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ.