Shree Hunasikolla Matha – Yamakanamaradi

Shree Hunasikolla Matha – Yamakanamaradi Claimed

ಶ್ರೀ ಹುಣಸಿಕೊಳ್ಳ ಮಠ - ಯಮಕನಮರಡಿ

Average Reviews

Description

ಶ್ರೀ ಹುಣಸಿಕೊಳ್ಳ ಮಠ – ಯಮಕನಮರಡಿ

ಕರ್ತೃ – ಪೂಜ್ಯ ಶ್ರೀ ಸಿದ್ದಬಸವ ಶಿವಯೋಗಿಗಳು

ಬೆಳಗಾವಿ ಜಿಲ್ಲೆಯ ಯಮಕನಮರಡಿ ಗ್ರಾಮದಲ್ಲಿ ಸ್ಥಾಪಿತಗೊಂಡಿರುವಶ್ರೀ ಹುಣಸಿಕೊಳ್ಳ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಈ ಭಾಗದ ಜನರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀಮಠವುಸುಮಾರು 16ನೇ ಶತಮಾನಕ್ಕೂ ಪೂರ್ವದಿಂದಲೇ ಅಸ್ತಿತ್ವದಲ್ಲಿತ್ತು ಎಂದು ಹೇಳಲಾದರೂಕಾಲಮಾನದ ಬಗ್ಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದ ಕರ್ತೃಗುರುಗಳೆಂದು ಶ್ರೀಸಿದ್ದಬಸವ ಶಿವಯೋಗಿಗಳನ್ನು ಗುರುತಿಸಲಾಗಿದೆ.ಪೂಜ್ಯ ಶ್ರೀ ಮ.ನಿ.ಪ್ರ ರಾಚೋಟಿ ಮಹಾಸ್ವಾಮಿಗಳು ಇತ್ತೀಚೆಗೆ ಕಳೆದಶತಮಾನದಲ್ಲಿ ಶ್ರೀಮಠವನ್ನು ಪುನರ್ ಸ್ಥಾಪಿಸಿರುವಂತೆ ತೋರುತ್ತಿದ್ದು ಶ್ರೀಗಳು ಶ್ರೀಮಠಕ್ಕೆಕಟ್ಟಡವನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದರು, ಹಾಗೂ ತಮ್ಮ ಧರ್ಮೋಪದೇಶಗಳಿಂದಅನ್ನದಾಸೋಹ ಕಾರ್ಯಗಳಿಂದ ಶ್ರೀಮಠವನ್ನು ಮುಂಚೂಣಿಗೆ ತಂದರು. ಶ್ರೀ ಮ.ನಿ.ಪ್ರ.ರಾಚೋಟಿ ಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಸರ್ವತೋಮುಖ ಅಭಿವೃದ್ದಿ ಕಂಡುಹೆಚ್ಚಿನ ಪ್ರಸಿದ್ದಿ ಪಡೆದಿದೆ. ಆದರೆ ಶ್ರೀ ರಾಚೋಟಿ ಮಹಾಸ್ವಾಮಿಗಳ ನಂತರ ಅನೇಕವರ್ಷಗಳ ಕಾಲ ಶ್ರೀಮಠವು ಮಠಾಧೀಶರಿಲ್ಲದೇ ಖಾಲಿ ಉಳಿಯಿತು. ಆ ಸಮಯದಲ್ಲಿಹಾವೇರಿಯ ಶ್ರೀ ಹುಕ್ಕೇರಿ ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಶ್ರೀಮಠಕ್ಕೆ ಶ್ರೀಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿ ಮಠದಪರಂಪರೆ ಬೆಳೆಯುವಂತೆ ಮಾಡಿದರು.ಶ್ರೀಗಳು ಮೊದಲು ಅಧ್ಯಾಪಕ ವೃತ್ತಿಯನ್ನು ಮಾಡುತ್ತಿದ್ದು ಶ್ರೀ ಮಠದ ಪಟ್ಟಕ್ಕೆಬಂದ ನಂತರ ಕಾಶಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಶ್ರೀಮಠಕ್ಕೆ ಮರಳಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದರು. ಶ್ರೀಮಠದ ಸುತ್ತಲಲ್ಲಿ ಹುಣಸೇಮರಗಳನ್ನುಹೆಚ್ಚಾಗಿ ಬೆಳೆಸಿದ್ದರಿಂದ ಶ್ರೀಮಠಕ್ಕೆ ಶ್ರೀ ಹುಣಸಿಕೊಳ್ಳ ಮಠ ಎಂಬ ಹೆಸರು ಬಂದಿದೆ.ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಗುರುಸಿದ್ದ ಸ್ವಾಮಿಗಳು ಶ್ರೀಮಠಕ್ಕೆಪಟ್ಟಾಧಿಕಾರಿಗಳಾಗಿ ನೇಮಕಗೊಂಡು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ಲಿಂ|| ಶ್ರೀ.ಮ.ನಿ.ಪ್ರ.ಗುರುಸಿದ್ದ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಮಾಘಮಾಸದನವಮಿಯಂದು ನಡೆಯುತ್ತಿದ್ದು ಆ ಸಮಯದಲ್ಲೇ ಶ್ರೀ ಮಠದ ಜಾತ್ರೆಯುವಿಜೃಂಭಣೆಯಿಂದ ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ದ ಸ್ವಾಮಿಗಳು
Date of Birth :
03-04-1984
Place :
ಅಶೋಕ ನಗರ, ಖಾನಾಪುರ ತಾ||
Photo :

Programs

ಶಿವರಾತ್ರಿ ದಿನ ಲಕ್ಷ ಬಿಲ್ವಾರ್ಚನೆ ಮತ್ತು ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ
ಬಸವ ಜಯಂತಿ ಮತ್ತು ಅಕ್ಕಮಹಾದೇವಿ ಜಯಂತಿ ಆಚರಣೆ
ಮಾಘಮಾಸದ ನವಮಿಯಂದು ಲಿಂ|| ಶ್ರೀ ಮ.ನಿ.ಪ್ರ. ಗುರುಸಿದ್ದ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಮಠದ ಜಾತ್ರೆ ಪ್ರತಿ ತಿಂಗಳ 2ನೇ ಶನಿವಾರ ಮಾಸಿಕ ಶಿವಾನುಭವ ಗೋಷ್ಠಿ ನವರಾತ್ರಿಯಲ್ಲಿ ನಿತ್ಯ ಪುರಾಣ ಪ್ರವಚನ

Photos

Full Address Kannada

ಶ್ರೀ ಹುಣಸಿಕೊಳ್ಳ ಮಠ
ಯಮಕನಮರಡಿ - 591 244
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಹುಕ್ಕೇರಿ - 18 ಕಿ.ಮೀ.
ಸಂಕೇಶ್ವರ - 22 ಕಿ.ಮೀ.
ಬೆಳಗಾವಿ - 32 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!