ಕಮತಗಿ ಗ್ರಾಮದಲ್ಲಿ ಶ್ರೀ ಮರುಳ ಶಂಕರ ದೇವರಿಂದ ಸುಮಾರು 12ನೇಶತಮಾನದಲ್ಲಿ ಸ್ಥಾಪನೆಯಾಗಿದೆಯೆಂದು ಹೇಳಲಾಗಿರುವ ಶ್ರೀ ಹುಚ್ಚೇಶ್ವರ ಸಂಸ್ಥಾನಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಈಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀ ಮರುಳ ಶಂಕರ ದೇವರು 12ನೇಶತಮಾನದ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕಲ್ಯಾಣದಲ್ಲಿ ಮಹಾಪ್ರಸಾದಿಯೆಂದುಹೆಸರಾಗಿದ್ದವರು. ಶ್ರೀಗಳು ಕಲ್ಯಾಣ ಕ್ರಾಂತಿಯ ನಂತರ ದೇಶಸಂಚಾರ ಮಾಡುತ್ತಾಕಮತಗಿಗೆ ಬಂದು ಅನುಷ್ಠಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಕರ್ತೃಗುರುಗಳನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲವಾದರೂ 15ನೇಶತಮಾನದಲ್ಲಿ ಶ್ರೀಮಠದ ಪರಂಪರೆಯು ಬೆಳೆದಿರುವುದನ್ನು ಕಾಣಬಹುದು.15ನೇ ಶತಮಾನದಲ್ಲಿ ಆಧ್ಯಾತ್ಮದ ಹುಚ್ಚನ್ನು ಮೈಗೂಡಿಸಿಕೊಂಡು ದೇಶ ಸಂಚಾರಮಾಡುತ್ತಾ ಕಮತಗಿಗೆ ಬಂದ ಶಿವಯೋಗಿಗಳೊಬ್ಬರು ತಮ್ಮ ಆಧ್ಯಾತ್ಮದ ಹುಚ್ಚಿನಿಂದಾಗಿಭಕ್ತರಿಂದ ಶ್ರೀ ಹುಚ್ಚೇಶ್ವರರೆಂಬ ಹೆಸರನ್ನು ಪಡೆದು ಪ್ರಚಲಿತಕ್ಕೆ ಬಂದರು. ಜೀರ್ಣಾವಸ್ಥೆಯಲ್ಲಿದ್ದ ಮಠದಲ್ಲಿ ಅನುಷ್ಠಾನಗೊಂಡಿದ್ದ ಶ್ರೀಗಳನ್ನು ಕಂಡ ಭಕ್ತರು ಅವರಿಗೋಸ್ಕರಶ್ರೀಮಠದ ಕಟ್ಟಡವನ್ನು ಜೀರ್ಣಾಭಿವೃದ್ಧಿಗೊಳಿಸಿ ಕೊಟ್ಟಿದ್ದಾರೆ. ಮುಂದೆ ವಿಜಯನಗರದಅರಸರ ಕಾಲದಲ್ಲಿ ನೆರವು ದೊರೆತು ಶ್ರೀಮಠವು ಸಂಸ್ಥಾನ ಮಠವಾಗಿ ರೂಪುಗೊಂಡಿದೆ.ಶ್ರೀ ಹುಚ್ಚೇಶ್ವರ ಸ್ವಾಮಿಗಳ ನಂತರದ ಪರಂಪರೆಯಲ್ಲಿ ಬಂದ ಎಲ್ಲಾ ಗುರುಗಳುಶ್ರೀ ಹುಚ್ಚೇಶ್ವರ ಸ್ವಾಮಿಗಳೆಂದೇ ಅಭಿದಾನ ಪಡೆದು ಬಂದವರಾಗಿದ್ದು ಈಗಿನ ಶ್ರೀಗಳು13ನೆಯವರೆಂದು ಹೇಳಲಾಗಿದೆ. ಹಿಂದಿನ ಶ್ರೀಗಳಾದ ಶ್ರೀ ಹುಚ್ಚೇಶ್ವರ ಸ್ವಾಮಿಗಳು ಮಠದಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶ್ರೀಗಳ ಕಾಲದಲ್ಲಿ ನಾಡಿನಾದ್ಯಂತ ಶಾಖಾಮಠಗಳನ್ನು ಸ್ಥಾಪಿಸಿದ್ದು ಧಾರ್ಮಿಕ ಕಾರ್ಯಗಳು ನಡೆದುಕೊಂಡು ಬಂದಿವೆ.ಈಗಿನ ಶ್ರೀಗಳಾದ 13ನೇ ಶ್ರೀ ಹುಚ್ಚೇಶ್ವರ ಸ್ವಾಮಿಗಳು 2000ದ ಫೆಬ್ರವರಿ 10ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಯಲ್ಲಿ ಶಾಖಾ ಮಠಗಳನಿರ್ವಹಣೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಹುಚ್ಚೇಶ್ವರ ಸ್ವಾಮಿಗಳು
Date of Birth :
11-3-1981
Place :
ಕಮತಗಿ, ಹುನಗುಂದ ತಾ||
Pattadikara :
10-2-2000
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ.
ಫೆಬ್ರವರಿಯಲ್ಲಿ ಶ್ರೀಮಠದ ಜಾತ್ರೆ. ಶ್ರಾವಣ ಮಾಸದಲ್ಲಿ ಶ್ರೀ ಗಿರಿಮಠದ ರಥೋತ್ಸವ. ದಸರಾದಲ್ಲಿ 10ನೇ ಲಿಂ. ಶ್ರೀಗಳ ಪುಣ್ಯಾರಾಧನೆ.
ಡಿಸೆಂಬರ್ನಲ್ಲಿ 12ನೆ ಲಿಂ. ಶ್ರೀಗಳ ಪುಣ್ಯಾರಾಧನೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ / ಪದವಿ ಕಾಲೇಜು.
ಮಹಿಳಾ ಬಿ.ಎಡ್ ಕಾಲೇಜು. ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಹುಚ್ಚೇಶ್ವರ
ಸಂಸ್ಥಾನ ಮಠ ಕಮತಗಿ- 587 120
ಹುನಗುಂದ ತಾ||, ಬಾಗಲಕೋಟೆ ಜಿ||