ಮೈಸೂರು ನಗರದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀ ಹೊಸಮಠವುವಿರಕ್ತ ಪರಂಪರೆಯ ಒಂದು ಪ್ರಸಿದ್ದ ಮಠ. ಐದು ಶತಮಾನಗಳಿಗೂ ಮೀರಿದಇತಿಹಾಸವುಳ ್ಳ ಶ್ರೀಮಠದ ಗುರು ಪರಂಪರೆಯವರು ಯಾವುದೇ ಅಬ್ಬರಆರ್ಭಟಗಳಿಗೆಡೆಯಿಲ್ಲದೆ ತಮ್ಮ ಮಿತಿಯೊಳಗೆ ಶ್ರೀಮಠದ ಕಾರ್ಯಕ್ರಮಗಳನ್ನುಮುನ್ನಡೆಸುತ್ತಾ ಬಂದವರೆಂಬ ಖ್ಯಾತಿಗೆ ಒಳಗಾದವರು. ಶ್ರೀಮಠದ ಆದಿ ಕರ್ತೃಗುರುಗಳಾದಶ್ರೀ ಸಂಗನ ಬಸವ ದೇಶಿಕರಿಂದ ಇಲ್ಲಿಯವರೆಗೂ 20 ಜನ ಶ್ರೀಗಳ ಮೂಲಕ ಸಾಗಿಬಂದಿರುವ ಪರಂಪರೆಯಲ್ಲಿ ಅನೇಕರು ತಪೋನಿಷ್ಠರು, ಸಮಷ್ಟಿ ಸಮಾಜದ ಹಿತ ಚಿಂತಕರುಆಗಿದ್ದು ಮತ್ತೆ ಕೆಲವರು ಘನ ವಿದ್ವಾಂಸರು, ವಾಗ್ಮಿಗಳು, ಶ್ರೇಷ್ಟ ತತ್ತ್ವವೇತ್ತರರೆನಿಸಿದ್ದುಶ್ರೀಮಠದ ಅಭಿವೃದ್ದಿಯಲ್ಲಿ ಪಾತ್ರವಹಿಸಿದ್ದಾರೆ.ಶ್ರೀ ಹೊಸಮಠದ ಸಂಸ್ಥಾನದ ಪರಂಪರೆಯಲ್ಲಿ ಸಾಗಿಬಂದ ಶ್ರೀ ಶಿವಪೂಜಾಶಿವಲಿಂಗ ದೇಶಿಕರು, ಆದಿಯಲ್ಲಿ ತಮಿಳುನಾಡಿನ ಕುಂಬಕೋಣಂನಲ್ಲಿಪ್ರಾಜ್ಞವಾಗ್ಮಿಗಳಾಗಿದ್ದರು. ತಮ್ಮ ಶಿಷ್ಯರೊಡನೆ ದೇಶಾದ್ಯಂತ ಸಂಚರಿಸಿ, ರೇವಣಸಿದ್ದಗಿರಿಯಲ್ಲಿ ತಪಃಗೈದು, ಕೊನೆಗೆ ಮೈಸೂರಿಗೆ ಆಗಮಿಸಿದ ಶ್ರೀಗಳು ದೇವರಾಜಸಾಗರ,ದೊಡ್ಡಕೆರೆಯ ಕೋಡಿಯ ಹತ್ತಿರ ಏಳು ಎಕರೆ ಪ್ರದೇಶದಲ್ಲಿ ಶ್ರೀ ಹೊಸಮಠವನ್ನು ಸ್ಥಾಪಿಸಿಸಮೀಪದ ಗ್ರಾಮಗಳಲ್ಲಿಯೂ ಹಲವಾರು ಶಾಖಾಮಠಗಳನ್ನು ಸ್ಥಾಪಿಸಿದರು.ನಂತರದಲ್ಲಿ ಮೈಸೂರಿನ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಇಲ್ಲಿಗೆಆಗಮಿಸಿದ ಶ್ರೀ ಪಾದಪೂಜೆಯ ಬಸವಲಿಂಗ ಮಹಾಸ್ವಾಮಿಗಳವರ ಕಾಲದಲ್ಲಿ ಶ್ರೀಹೊಸಮಠವು ಶ್ರೀಮತಿ ಮಲ್ಲಿಗೆಮ್ಮ ತಾಯಿಯವರಿಂದ ಮಹಾಸೇವಾ ಕೈಂಕರ್ಯವನ್ನುಕೈಗೊಂಡುದರಿಂದ ಶ್ರೀಮಠಕ್ಕೆ “ಮಲ್ಲಿಗೆಮ್ಮನವರ ಮಠ”ವೆಂಬ ಹೆಸರಿನೊಂದಿಗೆಪ್ರಖ್ಯಾತಗೊಂಡಿತು. ಶ್ರೀ ಪಾದಪೂಜಾ ಬಸವಲಿಂಗ ಮಹಾಸ್ವಾಮಿಗಳು ಸ್ವಯಂವಿದ್ವಾಂಸರೂ ಆಗಿದ್ದರಲ್ಲದೆ ಅನೇಕ ಶ್ರೇಷ್ಠ ವಿದ್ವಾಂಸ ಶಿಷ್ಯರನ್ನು ಹೊಂದಿದ್ದರು.ಹೀಗೆ ಶ್ರೀಮಠವು ಅನೇಕಾನೇಕ ವಿದ್ವಾಂಸ ವಿರಕ್ತ ಮಹಾಸ್ವಾಮಿಗಳವರನ್ನುಲಿಂಗವಂತಧರ್ಮ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದು, ವೀರಶೈವ ವಾಙ್ಮಯದ ಆದ್ಯಪ್ರಕಾಶಕರುಗಳಲ್ಲಿ ಶ್ರೀಮಠವು ಕೂಡ ಒಂದಾಗಿದೆ. ಪರಂಪರೆಯ 18ನೇ ಶ್ರೀಗಳಾದ ಶ್ರೀಬಸವಲಿಂಗ ಚರಮೂರ್ತಿಗಳು ವ್ಯಾಕರಣ ವಿದ್ವಾಂಸರೂ, ಕವಿ-ವಾದಿ-ವಾಗ್ಮಿಗಳೂಆಗಿದ್ದರಲ್ಲದೇ ಅನೇಕಾನೇಕ ಗ್ರಂಥಗಳನ್ನು ಪ್ರಕಾಶ ಪಡಿಸಿದರು. ಅವುಗಳಲ್ಲಿ ಕೆಲವು1) ಶಿವಪಂಚಸ್ತವ 2) ವೇದ ಸಂಜೀವಿನಿ 3) ಪುರುಷಸೂಕ್ತ 4) ಶಿವಸ್ತವ ಶಿರೋಮಣಿ5) ವೀರಶೈವ ಷಟ್ಸ್ಥಲ ನಿರಾಭಾರಿ ಸಿದ್ದಾಂತ ಮುಂತಾದವು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಶಾಂತ ಮಹಾಸ್ವಾಮಿಗಳುವ್ಯಾಕರಣಶಾಸ್ತ್ರ ವಿದ್ವಾನ್, ಅಲಂಕಾರಶಾಸ್ತ್ರ ವಿದ್ವಾನ್, ಶಕ್ತಿ ವಿಶಿಷ್ಟಾದ್ವೈತ ವೇದಾಂತ ವಿದ್ವಾನ್ಎಂದು ಹೆಸರಾಗಿದ್ದರು. ಶ್ರೀಗಳು ಶ್ರೀಮಠದ ಎಲ್ಲ ರೀತಿಯ ಆಧುನಿಕ ಪ್ರಗತಿ-ಶ್ರೇಯಸ್ಸುಗಳಿಗೆ ಕಾರಣಕರ್ತರಾಗಿದ್ದಾರೆ. ಶ್ರೀಗಳ ಕಾಲದಲ್ಲಿ ಶ್ರೀಮಠವು ಉತ್ತುಂಗ ಸ್ಥಿತಿಗೆತಲುಪಿದ್ದು ತಮ್ಮ ಪ್ರಗತಿಪರ-ಧಾರ್ಮಿಕ-ಸಾಮಾಜಿಕ ಚಿಂತನೆಗಳಿಂದ ಪ್ರಸಿದ್ದರಾಗಿದ್ದರು.ಶ್ರೀಗಳು ತಮ್ಮ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿದ್ದಾಗ ಮುಡುಕನಪುರದ ತಮ್ಮ ಹತ್ತಿರದಪೂರ್ವಾಶ್ರಮದ ಸಂಬಂದಿಗಳ ಪುತ್ರರಾಗಿ ಜನಿಸಿದ್ದ ಎರಡು ವರ್ಷದ ಬಾಲಕನನ್ನು ತಮ್ಮಉತ್ತರಾಧಿಕಾರಿಯನ್ನಾಗಿ ನೇಮಿಸಿದರು.ಶ್ರೀಮಠದ ಉತ್ತರಾಧಿಕಾರಿಗಳಾಗಿ ಆಯ್ಕೆಗೊಂಡ ಶ್ರೀ ಚಂದ್ರಶೇಖರಸ್ವಾಮಿಯವರು ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡು ಗುರುಗಳ ನೆಚ್ಚಿನಶಿಷ್ಯರೆನಿಸಿದರು. 1981ರಲ್ಲಿ ಗುರುಗಳಿಂದ ಶ್ರೀ ಮ.ನಿ.ಪ್ರ. ಚಿದಾನಂದ ಮಹಾಸ್ವಾಮಿಗಳೆಂಬಅಭಿದಾನ ಪಡೆದು ಪಟ್ಟಕ್ಕೆ ಬಂದ ಶ್ರೀಗಳು ಗುರುಗಳ ಆಶೋತ್ತರಗಳನ್ನು ಈಡೇರಿಸುತ್ತಾಬಂದಿದ್ದಾರೆ. 1962ರಲ್ಲಿ ಹಿಂದಿನ ಗುರುಗಳು ಸ್ಥಾಪಿಸಿದ್ದ ಶ್ರೀ ನಟರಾಜವಿದ್ಯಾರ್ಥಿನಿಲಯವನ್ನು ಶ್ರೀ ನಟರಾಜ ಪ್ರತಿಷ್ಠಾನ ಎಂದು ಬದಲಿಸಿ, 1986ರಲ್ಲಿನೋಂದಾಯಿಸಿ ಪ್ರತಿಷ್ಠಾನದ ನೆರಳಿನಲ್ಲಿ ಎˉÁ್ಲ ಚಟುವಟಿಕೆಗಳು ಕ್ರಿಯಾತ್ಮಕವಾಗಿನಡೆಯುವಂತೆ ಕಾನೂನು ಬದ್ದಗೊಳಿಸಿದರು.ಶ್ರೀ ನಟರಾಜ ಪ್ರತಿಷ್ಠಾನದ ಅಡಿಯಲ್ಲಿ ಅನೇಕ ಶಿಕ್ಷಣ ಕೇಂದ್ರಗಳನ್ನು ತೆರೆದಿರುವಶ್ರೀಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಜನೋಪಯೋಗಿಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಶ್ರೀ ಮ.ನಿ.ಪ್ರ.ಚಿದಾನಂದ ಮಹಾಸ್ವಾಮಿಗಳು ಪ್ರತಿವರ್ಷ ಮೇ ತಿಂಗಳಲ್ಲಿ ತಮ್ಮ ಹಿರಿಯ ಗುರುಗಳವರಪುಣ್ಯಾರಾಧನೆಯನ್ನು ಶರಣರ ಜಯಂತ್ಯುತ್ಸವಗಳನ್ನು ಇದೇ ಸಮಯದಲ್ಲಿ ಸಾಮೂಹಿಕವಿವಾಹ ಕಾರ್ಯಗಳನ್ನು ಆಚರಿಸುತ್ತಾ ಎˉÁ್ಲ ವರ್ಗದವರನ್ನೂ ಮುಖ್ಯವಾಹಿನಿಯಲ್ಲಿಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಚಿದಾನಂದ ಮಹಾಸ್ವಾಮಿಗಳು
Date of Birth :
01-02-1950
Place :
ಮುಡಕನಪುರ, ಟಿ.ನರಸೀಪುರ ತಾ||
Pattadikara :
23-08-1982
Photo :
Programs
ಪಾಲ್ಗುಣ ಮಾಸದಲ್ಲಿ ಚರಮೂರ್ತಿ ಬಸವಲಿಂಗ ಸ್ವಾಮಿಗಳವರ ಆರಾಧನೆ ಚೈತ್ರ ಮಾಸದಲ್ಲಿ ವಿದ್ವಾನ್ ಗುರುಶಾಂತ ಸ್ವಾಮಿಗಳವರ ಪುಣ್ಯಾರಾಧನೆ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿಗೆ ಶ್ರೀ ಮಠದಿಂದ ಸಾಮೂಹಿಕ ವಿವಾಹ ಮಹೋತ್ಸವ ಕಾರ್ತೀಕ ಮಾಸದಲ್ಲಿ ಪ್ರತಿ ಸೋಮವಾರ ದೀಪೋತ್ಸವ
Institutions
ಶ್ರೀ ನಟರಾಜ ಪ್ರತಿಷ್ಠಾನ (ರಿ.), ಮೈಸೂರು. ದೂ : 0821-2445454, 2425439 ತಿebsiಣe : ತಿತಿತಿ.sಟಿಠಿoಟಿಟiಟಿe.oಡಿg, ಇ-mಚಿiಟ : sಟಿಠಿsಟಿe@gmಚಿiಟ.ಛಿom ಶ್ರೀ ಗೌರಿಶಂಕರ ಹಿರಿಯ ಪ್ರಾಥಮಿಕ ಶಾˉÉ, ಶ್ರೀ ಗೌರಿಶಂಕರನಗರ, ಮೈಸೂರು ಶ್ರೀ ನಟರಾಜ ಹಿರಿಯ ಪ್ರಾಥಮಿಕ ಶಾˉÉ, ಮೈಸೂರು ಶ್ರೀ ಗೌರಿಶಂಕರ ಪ್ರೌಢಶಾˉÉ, ಚಿದರವಳ್ಳಿ, ಟಿ.ನರಸೀಪುರ ತಾಲ್ಲೂಕು ಶ್ರೀ ನಟರಾಜ ಕಾನ್ವೆಂಟ್, ಜೆ.ಸಿ.ನಗರ, ಮೈಸೂರು ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾˉÉೀಜು, ಮೈಸೂರು ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾˉÉೀಜು, ಮೈಸೂರು ಶ್ರೀ ನಟರಾಜ ಆಂಗ್ಲ ಮಾಧ್ಯಮ ಪ್ರೌಢಶಾˉÉ, ಮೈಸೂರು ಶ್ರೀ ನಟರಾಜ ಪಬ್ಲಿಕ್ ಸ್ಕೂˉï, ಮೈಸೂರು ಶ್ರೀ ನಟರಾಜ ಕಾನ್ವೆಂಟ್, ನಾಗವಾಲ, ಮೈಸೂರು ತಾ|| ಶ್ರೀ ಗೌರಿಶಂಕರ ಪ್ರೌಢಶಾˉÉ, ಶ್ರೀ ಗೌರಿಶಂಕರನಗರ, ಮೈಸೂರು ಶ್ರೀ ನಟರಾಜ ಸ್ಕೂˉï ಆಫ್ ನರ್ಸಿಂಗ್, ಮೈಸೂರು ವಾತ್ಸಲ್ಯ ಬಿ.ಎಡ್. ಕಾˉÉೀಜ್, ಮೈಸೂರು ವಾತ್ಸಲ್ಯ ಡಿ.ಎಡ್. ಕಾˉÉೀಜ್, ಮೈಸೂರು ಶ್ರೀ ನಟರಾಜ ಮಂದಿರ, ಮೈಸೂರು ಶ್ರೀ ನಟರಾಜ ವೃದ್ಧ ಸೇವಾಶ್ರಮ, ಮೈಸೂರು ಇನ್ನು ಮುಂತಾದವುಗಳು
Photos
Full Address Kannada
ಶ್ರೀ ಹೊಸಮಠ
ಶಂಕರಮಠದ ರಸ್ತೆ, ಕೆ.ಆರ್.ಮೊಹˉÁ್ಲ,
ಮೈಸೂರು - 570 004