Shree Hirematha

Shree Hirematha

ಶ್ರೀ ಹಿರೇಮಠ, ಹಿರೇಪಡಸಲಗಿ

Average Reviews

Description

ಶ್ರೀ ಹಿರೇಮಠ, ಹಿರೇಪಡಸಲಗಿ

ಕರ್ತೃ – ಶ್ರೀ ಚನ್ನಬಸವೇಶ ದೇಶಿಕೇಂದ್ರ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹಿರೇಪಡಸಲಗಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಮದಲ್ಲಿ ಸುಮಾರು 200 ವರ್ಷಗಳ ಇತಿಹಾಸವಿರುವ ಶ್ರೀ.ಷ.ಬ್ರ. ಚನ್ನಬಸವೇಶ ದೇಶಿಕೇಂದ್ರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಭಕ್ತರಿಗೆ ಸನ್ಮಾರ್ಗದತ್ತ ಮುನ್ನಡೆಸುತ್ತಿದೆ. ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಕರ್ತೃಗುರುಗಳಾದ ಶ್ರೀ ಚನ್ನಬಸವ ದೇಶೀಕೇಂದ ್ರ ಸ್ವಾಮಿಗಳು ತಪೋನಿಷ್ಠರಾಗಿದ್ದು, ತಮ್ಮ ಧಾರ್ಮಿಕ ಆಚರಣೆಗಳಿಂದಾಗಿ ತಮ್ಮ ಕರ್ತೃತ್ವ ಶಕ್ತಿಯಿಂದಾಗಿ ಶ್ರೀಮಠಕ್ಕೆ ಭಕ್ತರನ್ನು ಸೆಳೆದು ಅವರ ಸಹಾಯದಿಂದ ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದಾರೆ. ಹಾಗೆಯೇ ಶ್ರೀಗಳು ಸದಾ ಸಂಚಾರದಲ್ಲಿದ್ದು ಭಕ್ತರ ಮನೆ ಮನೆಗಳಿಗೆ ಬೇಟಿ ನೀಡಿ ಅವರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಒದಗಿಸುತ್ತಿದ್ದರು. ಕರ್ತೃಗುರುಗಳ ನಂತರ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ವಹಿಸಿಕೊಂಡು ಶ್ರೀ ಮಠವನ್ನು ಮುನ್ನಡೆಸಿದ್ದಾರೆ. ಇವರ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಶ್ರೀಗಳ ನಂತರ ಶ್ರೀ ಚನ್ನಬಸವ ಶಿವಾಚಾರ್ಯರು ಅಧಿಕಾರ ವಹಿಸಿಕೊಂಡು, ತಮ್ಮ ಶ್ರೀ ಚನ್ನಬಸವ ಶಿವಾಚಾರ್ಯರು ಅಧಿಕಾರ ವಹಿಸಿಕೊಂಡು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀ ಚನ್ನಬಸವ ಶಿವಾಚಾರ್ಯರ ನಂತರ ಶ್ರೀಮಠವು ಹೆಚ್ಚು ಕಾಲ ಖಾಲಿ ಉಳಿದಿದ್ದು ಈ ಸಮಯದಲ್ಲಿ ಬಬಲೇಶ್ವರದಿಂದ ಆಗಮಿಸಿ ಶ್ರೀ ಗುರುಪಾದಯ್ಯನವರು ಇಲ್ಲಿ ಮಠದ ಧಾರ್ಮಿಕ ಕಾರ್ಯಗಳನ್ನು ನೋಡಿಕೊಂಡು ಬಂದಿದ್ದಾರೆ. ಈಗಿನ ಶ್ರೀಗಳಾದ ಶ್ರೀ ಸಿದ್ದಲಿಂಗಾ ಶಿವಾಚಾರ್ಯ 1988ರ ಆಗಸ್ಟ್ 02ರಂದು ಪಟ್ಟಾಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಪೂಜಾನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನನು ಶ್ರೀಮಠದತ್ತ ಸೆಳೆಯುತ್ತಿದ್ದಾರೆ. ಹಾಗೆಯೇ ಭಕ್ತರ ಅಪೇಕ್ಷೆ ಮೇರೆಗೆ ಶ್ರೀಗಳು ಭಕ್ತರ ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಶ್ರೀಮಠದಲ್ಲಿ ಹಿಂದಿನ ಶ್ರೀಗಳ ಮೂರು ಗದ್ದುಗೆಗಳಿಂದ ದಿನನಿತ್ಯ ಪೂಜೆ ನಡೆದುಕೊಂಡು ಬರುತ್ತಿದೆ. 

Swamiji

Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
3-8-1945
Place :
ಹಿರೇಪಡಸಲಗಿ, ಜಮಖಂಡಿ ತಾ||
Pattadikara :
2-8-1988

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ, ಪ್ರವಚನ.
ಕಾರ್ತೀಕ ಮಾಸದ ಕೃಷ್ಣಪಕ್ಷ ಏಕಾದಶಿ ತಿಥಿಯಿಂದ ಲಿಂ. ಶ್ರೀ ಷ.ಬ್ರ. ಚನ್ನಬಸವೇಶ್ವರರ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ,
ಹಿರೇಪಡಸಲಗಿ - 587 311
ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ಚಿಕ್ಕಪಡಸಲಗಿ - 8 ಕಿ.ಮೀ.
ಜಮಖಂಡಿ - 20 ಕಿ.ಮೀ.
ಬಾಗಲಕೋಟ - 125 ಕಿ.ಮೀ.
ವಿಜಯಪುರ - 50 ಕಿ.ಮೀ.

Statistic

16 Views
0 Rating
0 Favorite
0 Share
error: Content is protected !!