ಕರ್ತೃ – ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು
ಸಿಂಧಗಿ ತಾಲ್ಲೂಕಿನ ಯಂಕಂಚಿ ಗ್ರಾಮವು ತಾಲ್ಲೂಕು ಕೇಂದ್ರದಿಂದ 14 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 50 ವರ್ಷಗಳ ಹಿಂದೆ ಶ್ರೀ ಷ.ಬ್ರ. ಚನ್ನಬಸವಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದೆ.ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀ ಹಿರೇಮಠದ ಕರ್ತೃಗುರುಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯರು ˉÉೂೀಕಸಂಚಾರದಲ್ಲಿದ್ದ ಸಮಯದಲ್ಲಿಯಂಕಂಚಿಗೆ ಬಂದವರಾಗಿದ್ದು ಧೀರ್ಘಾನುಷ್ಠಾನ ಕೈಗೊಂಡು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸ್ಥಾಪನೆ ಮಾಡಿದ್ದಾರೆ. ಶ್ರೀಗಳು ಇಲ್ಲಿ ಮಠವನ್ನು ಸ್ಥಾಪಿಸಿದ ನಂತರಗ್ರಾಮದಲ್ಲಿ ಧಾರ್ಮಿಕ ವಾತಾವರಣ ನೆˉÉಗೊಂಡಿತೆಂದು ಹಿರಿಯ ಭಕ್ತರು ಹೇಳುತ್ತಾರೆ.ತದನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀ ಷ.ಬ್ರ. ರುದ್ರಮುನಿಶಿವಾಚಾರ್ಯ ಸ್ವಾಮಿಗಳು ಮಹಾಮಹಿಮ ಪುರುಷರಾಗಿದ್ದು ಗ್ರಾಮದ ಭಕ್ತರನ್ನು ತಮ್ಮಧರ್ಮೋಪದೇಶಗಳ ಮೂಲಕ ಸಂಸ್ಕಾರವಂತರನ್ನಾಗಿ ಮಾಡಿದ್ದಾರೆ. ಶ್ರೀಗಳು ಶ್ರೀಮಠದಲ್ಲಿಧಾರ್ಮಿಕ ಕಾರ್ಯಕ್ರಮಗಳನ್ನು ಚುರುಕುಗೊಳಿಸಿ ಭಕ್ತರನ್ನು ಶ್ರೀಮಠಕ್ಕೆ ಸೆಳೆದಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯಮಹಾಸ್ವಾಮಿಗಳು 2006ರ ಮೇ 08 ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿದ್ದುಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ಶ್ರೀ ಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ನಿತ್ಯ“ಸಿದ್ದಾಂತ ಶಿಖಾಮಣಿ” ಗ್ರಂಥದ ಪ್ರವಚನ ಹಾಗೂ ಛಟ್ಟಿ ಅಮವಾಸ್ಯೆ ನಂತರ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮತ್ತು ಪುರಾಣ ಮಂಗಳ ಕಾರ್ಯಕ್ರಮಗಳು ನಡೆಯುತ್ತವೆ.ಹಾಗೂ ಮೇ ತಿಂಗಳಲ್ಲಿ ಶ್ರೀಗಳ ವಾರ್ಷಿಕ ಪಟ್ಟಾಧಿಕಾರದ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಆಯೋಜಿಸˉÁಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
2-8-1978
Place :
ರೋಡಗಿ, ಇಂಡಿ ತಾ||
Pattadikara :
8-5-2006
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ "ಸಿದ್ಧಾಂತ ಶಿಖಾಮಣಿ" ಪ್ರವಚನ.
ಛಟ್ಟಿ ಅಮವಾಸ್ಯೆ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಪುರಾಣ ಮಂಗಳ.
ಶ್ರೀಗಳ ವಾರ್ಷಿಕ ಪಟ್ಟಾಧಿಕಾರದ ನಿಮಿತ್ತ ಸಾಮೂಹಿಕ ವಿವಾಹಗಳು ಹಾಗೂ ವಿವಿಧ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಹಿರೇಮಠ
ಯಂಕಂಚಿ - 586 128
ಸಿಂಧಗಿ ತಾ||, ವಿಜಯಪುರ ಜಿ||