Shree Hirematha, Tikota

Shree Hirematha, Tikota Claimed

ಶ್ರೀ ಹಿರೇಮಠ, ತಿಕೋಟ

Average Reviews

Description

ಶ್ರೀ ಹಿರೇಮಠ, ತಿಕೋಟ

ಕರ್ತೃ – ಶ್ರೀ ಷ.ಬ್ರ. ಪವಾಡಯ್ಯ ಶಿವಾಚಾರ್ಯ ಸ್ವಾಮಿಗಳು

ಬಸವನಬಾಗೇವಾಡಿ ತಾಲ್ಲೂಕಿನ ತಿಕೋಟ ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀಹಿರೇಮಠವು ಶ್ರೀ ಷ.ಬ್ರ. ಪವಾಡಯ್ಯ ಶಿವಾಚಾರ್ಯ ಸ್ವಾಮಿಗಳಿಂದ ಪುರಾತನ ಕಾಲದಲ್ಲಿಸ್ಥಾಪಿತಗೊಂಡಿದ್ದು, ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಭಕ್ತರಲ್ಲಿ ಧಾರ್ಮಿಕಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಶ್ರೀ ಹಿರೇಮಠವು ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಪವಾಡಯ್ಯ ಶಿವಾಚಾರ್ಯ ಸ್ವಾಮಿಗಳು ಮಹಾಮಹಿಮಪುರುಷರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಸಿದ್ದಿ ಪಡೆದುಶ್ರೀಮಠವನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ. ಶ್ರೀಮಠದ ಮುಂದಿನ ಪರಂಪರೆಯಲ್ಲಿ ಕೆಲಸ್ವಾಮಿಗಳು ಪಟ್ಟಾಧಿಕಾರ ಪಡೆದು ಬಂದಿದ್ದಾರಾದರೂ ಅವರ ಬಗ್ಗೆ ತಿಳಿದು ಬರುವುದಿಲ್ಲ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಮಡಿವಾಳ ಶಿವಾಚಾರ್ಯ ಸ್ವಾಮಿಗಳು ಶ್ರೀಮಠಕ್ಕೆಪಟ್ಟಾಧಿಕಾರಗೊಂಡು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಮುನ್ನಡೆಸಿದ್ದು ತಮ್ಮಶಿವಪೂಜಾನಿಷ್ಠತೆಯಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ 1979ರಲ್ಲಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಬಂದಾಗ ಶ್ರೀಮಠದ ಕಟ್ಟಡವು ಶಿಥಿಲಗೊಂಡಿದ್ದು ಜೀರ್ಣಾವಸ್ಥೆಯಲ್ಲಿತ್ತು. ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸುವುದರೊಂದಿಗೆಶ್ರೀಮಠದ ಜಮೀನನ್ನು ಅಭಿವೃದ್ಧಿಪಡಿಸಿ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದುಶ್ರೀಮಠದ ಕಟ್ಟಡವನ್ನು ಜೀರ್ಣಾಭಿವೃದ್ಧಿಗೊಳಿಸುತ್ತಿದ್ದಾರೆ.ಶ್ರೀಮಠದಲ್ಲಿ ನಾಲ್ಕು ಗದ್ದುಗೆಗಳು ಕಾಣಸಿಗುತ್ತಿದ್ದು ಪ್ರತಿನಿತ್ಯ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಜೊತೆಯಲ್ಲಿ ಪ್ರತಿ ಅಮಾವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಆಚರಣೆಗಳುಕಾರ್ತೀಕ ಮಾಸದ ಅಷ್ಟಮಿ ತಿಥಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವನಡೆಸˉÁಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
1-4-1954
Place :
ತಿಕೋಟ, ವಿಜಯಪುರ ತಾ||
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ. ಕಾರ್ತೀಕ ಅಷ್ಟಮಿ ತಿಥಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ
ಬಡಿಗೇರ ಓಣಿ, ತಿಕೋಟ - 586 130
ವಿಜಯಪುರ ತಾ||, ಜಿ||

Map

Near by Places

ವಿಜಯಪುರ - 20 ಕಿ.ಮೀ.
ಅಥಣಿ - 53 ಕಿ.ಮೀ.

Statistic

91 Views
0 Rating
0 Favorite
0 Share
error: Content is protected !!