ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ತೆಲಸಂಗ ಗ್ರಾಮವು ಶತಮಾನಗಳಿಂದಶರಣರ ವಾಸಸ್ಥಾನವಾಗಿತ್ತೆಂಬುದಕ್ಕೆ ಊರಲ್ಲಿ ಹಲವಾರು ಐಹಿತ್ಯಗಳು ದೊರಕುತ್ತವೆ.ಇಲ್ಲಿಯ ಕೆಲ ಶಿಲಾಶಾಸನಗಳು ಮುಂಬಯಿಯ ವಸ್ತು ಸಂಗ್ರಹಾಲಯದಲ್ಲಿರುವುದುವಿಶೇಷ. ಇಂತಹ ಐತಿಹ್ಯದ ಸ್ಥಳದಲ್ಲಿ ಅತಿ ಪ್ರಾಚೀನವಾದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದುಹಿಂದಿನ ಶ್ರೀಗಳಾದ ಶ್ರೀ. ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರಿಂದ ಪ್ರಸಿದ್ದಗೊಂಡಿದೆ.ಪ್ರಾಚೀನ ಕಾಲದ್ದೆಂದು ತಿಳಿದುಬರುವ ಶ್ರೀಮಠದ ಪೂರ್ವೇತಿಹಾಸದ ಬಗ್ಗೆತಿಳಿದು ಬರುವುದಿಲ್ಲ. ಬಹುಶಃ ಶ್ರೀಮಠವು ಶತಮಾನಗಳ ಕಾಲ ಖಾಲಿ ಉಳಿದಿದ್ದು ಊರಿನಭಕ್ತರಿಂದಲೇ ಪ್ರಚಲಿತದಲ್ಲಿದ್ದಿರಬಹುದು. 1936ರಲ್ಲಿ ಗ್ರಾಮದ ಭಕ್ತರ ಒತ್ತಾಸೆಯ ಮೇರೆಗೆಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳ ಆಶೀರ್ವಾದದಿಂದ ಶ್ರೀಮಠದ ಉದ್ದಾರಕ್ಕಾಗಿಬಂದವರೇ ಹಿಂದಿನ ಶ್ರೀಗಳಾದ ಶ್ರೀ ಬಸವಲಿಂಗ ಪಟ್ಟಾಧ್ಯಕ್ಷರು.ಪಾಳು ಬಿದ್ದಿದ್ದ ಶ್ರೀ ಹಿರೇಮಠಕ್ಕೆ ಅಧಿಕಾರ ವಹಿಸಿಕೊಂಡು ಬಂದ ಶ್ರೀಬಸವಲಿಂಗ ಪಟ್ಟಾಧ್ಯಕ್ಷರು ಸವಾಲಾಗಿ ಸ್ವೀಕರಿಸಿ ಭಕ್ತರ ಸಹಕಾರದಿಂದ ಲಕ್ಷಗಟ್ಟಲೆ ಹಣವನ್ನುಕೂಡಿಸಿ ಶ್ರೀಮಠವನ್ನು ಸುಂದರವಾಗಿ ಜೀರ್ಣೋದ್ಧಾರಗೊಳಿಸಿದರು. ತಮ್ಮ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಗಳ ಮುಖಾಂತರ ಶ್ರೀಮಠವನ್ನು ಪ್ರಚಲಿತಕ್ಕೆ ತಂದ ಶ್ರೀಗಳುಮಠದ ಸುತ್ತಲಿನ ಪಾಳುಬಿದ್ದ ನೂರಾರು ಎಕರೆ ಭೂಮಿಯನ್ನು ವ್ಯವಸಾಯಕೊಳ್ಳಪಡಿಸಿಕಾಯಕಯೋಗಿಗಳೆನಿಸಿದರು.ಶ್ರೀಗಳು ಅತ್ಯಂತ ವಾಗ್ಮಿಗಳು, ಚಿಂತನಕಾರರೂ ಆಗಿದ್ದರು, ನಾಡಿನುದ್ದಗಲಕ್ಕೂಸಂಚರಿಸುತ್ತಾ ತಮ್ಮ ಪುರಾಣ ಪ್ರವಚನಗಳ ಮೂಲಕ ಧರ್ಮಜಾಗೃತಿ ಕಾರ್ಯವನ್ನುನಿರ್ವಹಿಸಿದರು. ಈ ಕಾರಣದಿಂದಾಗಿ ಶ್ರೀಗಳಿಗೆ “ಪುರಾಣ ಪ್ರವಚನ ಶಿರೋಮಣಿ”,”ಅನುಭವಿ ವಿಶಾರದ” ಮುಂತಾದ ಬಿರುದಾವಳಿಗಳಿಂದ ಗೌರವಿಸಲಾಗಿದೆ. ಶ್ರೀಗಳುವಿದ್ಯೆಗೂ ಉನ್ನತ ಸ್ಥಾನ ನೀಡಿದ್ದು ಲಿಂಗಾಯತ ಧರ್ಮ ಸಂಸ್ಕøತಿಗಳ ಅಧ್ಯಯನಕ್ಕಾಗಿಒಂದು ಗ್ರಂಥಾಲಯವನ್ನೇ ನಿರ್ಮಿಸಿದರು. ಇಂತಹ ಮಹಾಮಹಿಮ ಶ್ರೀಗಳು 2005ರಡಿಸೆಂಬರ್ 05ರಲ್ಲಿ ಶಿವೈಕ್ಯರಾದರು. ಶಿರಹಟ್ಟಿ ಶ್ರೀ ಫಕೀರೇಶ್ವರ ಸ್ವಾಮಿ ಮಠದ ಈಗಿನಗುರುಗಳಾದ ಇವರ ಜನ್ಮಸ್ಥಳ ಇದೇ ಹಿರೇಮಠ. ಶ್ರೀಗಳನ್ನು ಶ್ರೀಮಠದಉತ್ತರಾಧಿಕಾರಿಗಳನ್ನಾಗಿ ಮಾಡಲಾಗಿತ್ತಾದರೂ ಶ್ರೀಗಳು ಶಿರಹಟ್ಟಿ ಮಠದ ಅಧಿಕಾರವಹಿಸಿಕೊಂಡಿದ್ದರಿಂದ ಇವರ ನಂತರ ಪ್ರಸ್ತುತ ಶ್ರೀ ವೀರೇಶ್ವರ ಸ್ವಾಮಿಗಳನ್ನು ಶ್ರೀಮಠದಉತ್ತರಾಧಿಕಾರಿಗಳನ್ನಾಗಿ ಮಾಡಲಾಗಿದ್ದು ಶ್ರೀಗಳು ಹಿರಿಯರ ಸಹಕಾರಬಲದಿಂದಕಾರ್ಯೋನ್ಮುಕರಾಗಿದ್ದಾರೆ.
Swamiji
Swamiji Name :
ಫಕೀರ ಸಿದ್ದರಾಮ ಮಹಾಸ್ವಾಮಿಗಳು
Date of Birth :
01-02-1948
Place :
ತೆಲಸಂಗ, ಅಥಣಿ ತಾ||
Pattadikara :
13-02-1961
Photo :
Swamiji Name :
ಪೂಜ್ಯ ಶ್ರೀ ವೀರೇಶ್ವರ ಸ್ವಾಮಿಗಳು
Date of Birth :
21-01-1990
Place :
ತೆಲಸಂಗ, ಅಥಣಿ ತಾ||
Pattadikara :
1999
Photo :
Programs
ಪ್ರತಿ ಅಮಾವಾಸ್ಯೆಗೆ ವಿಶೇಷ ಪೂಜೆ ದಸರಾದಲ್ಲಿ ಪುರಾಣ ಪ್ರವಚನ
ಕಾರ್ತೀಕ ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ ವರ್ಷದ ಕಾರ್ಯಕ್ರಮಗಳು
Institutions
ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘ (ರಿ)
ಪೂರ್ವ ಪ್ರಾಥಮಿಕ / ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜು, ಗ್ರಂಥಾಲಯ
Photos
Full Address Kannada
ಶ್ರೀ ಹಿರೇಮಠ ತೆಲಸಂಗ - 591 265
ಅಥಣಿ ತಾ||, ಬೆಳಗಾವಿ ಜಿಲ್ಲೆ