Shree Hirematha – Malluru

Shree Hirematha – Malluru Claimed

ಶ್ರೀ ಹಿರೇಮಠ - ಮುಳ್ಳೂರು

Average Reviews

Description

ಶ್ರೀ ಹಿರೇಮಠ – ಮುಳ್ಳೂರು

ಕರ್ತೃ – ಶ್ರೀ ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುಳ್ಳೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಗುರು ಅನ್ನದಾನೇಶ್ವರಮಹಾಸ್ವಾಮಿಗಳಿಂದ ಸುಮಾರು 200 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನುನೆಲೆಗೊಳಿಸಿದೆ.ಕರ್ತೃಗುರುಗಳಾದ ಶ್ರೀ ಗುರು ಅನ್ನದಾನೇಶ್ವರ ಮಹಾಸ್ವಾಮಿಗಳು ಮಹಾನ್ದಾರ್ಶನಿಕರೂ, ಶಾಪಾನುಗ್ರಹಶಕ್ತರೂ, ಭಕ್ತಾಧೀನರೂ ಆಗಿದ್ದರು ಹಾಗೂ ತಮ್ಮಪವಾಡಗಳಿಂದ ಮನೆಮಾತಾಗಿದ್ದರು. ಅದಕ್ಕೆ ಒಂದು ಉದಾಹರಣೆ ಎಂದರೆ ಆಸಮಯದಲ್ಲಿ ಬರದಿಂದ ತತ್ತರಿಸಿದ್ದ ಗ್ರಾಮದ ಕುರುಬರು ಕುರಿಗಳಿಗೆ ಸರಿಯಾದ ಆಹಾರಸಿಗದೇ ಕಂಗಾಲಾಗಿ ಊರು ಬಿಡುವ ತಯಾರಿಯಲ್ಲಿದ್ದರು. ಈ ವಿಷಯ ತಿಳಿದ ಗುರುಗಳುಕಠೋರ ತಪೋನುಷ್ಠಾನ ಮಾಡಿ ಮಳೆ ಬರಿಸಿದ್ದರೆಂದು ಹೇಳಲಾಗುತ್ತದೆ.ಈ ಮೇಲೆ ತಿಳಿಸಿದ ಪವಾಡಕ್ಕೆ ಸಾಕ್ಷಿಯಾಗಿ ಈ ಗ್ರಾಮದ ಕುರುಬರು ಈ ಮಠಕ್ಕೆಭಯ-ಭಕ್ತಿಯಿಂದ ನಡೆದುಕೊಳ್ಳುತ್ತಿದ್ದು ಅಂದಿನಿಂದ ಇಂದಿನವರೆಗೂ ಒಂದು ವ್ರತವನ್ನುಪಾಲಿಸುತ್ತಿದ್ದಾರೆ. ಅಂದಿನಿಂದ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಶ್ರೀ ಅನ್ನದಾನೇಶ್ವರರಗದ್ದುಗೆಗೆ ಪೂಜೆ ಸಲ್ಲಿಸಿ ಪರಿಷೆಗೆ ಅನ್ನಪ್ರಸಾದ ಹಾಗೂ ಶ್ರೀಮಠಕ್ಕೆ ಒಂದು ಹೊಸ ಕಂಬಳಿಅರ್ಪಣೆ ಮಾಡುತ್ತಾ ಬರುತ್ತಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಕಾಣಸಿಗುವ ಪ್ರಮುಖ ಶ್ರೀಗಳು ಶ್ರೀಗುರುಪಾದ ಮಹಾಸ್ವಾಮಿಗಳು. ಶ್ರೀಗಳು ತಮ್ಮ ಧಾರ್ಮಿಕ ಉಪದೇಶಗಳ ಮೂಲಕ ಭಕ್ತರಿಗೆಸೂಕ್ತ ಮಾರ್ಗದರ್ಶನ ನೀಡಿದ್ದು ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರಶಿವಾಚಾರ್ಯ ಮಹಾಸ್ವಾಮಿಗಳು ಮುಂದುವರೆಸಿಕೊಂಡು ಬಂದಿದ್ದಾರೆ. 1995ರ ಮೇ12ರಲ್ಲಿ ಶ್ರೀಮಠದ ಪಟ್ಟಕ್ಕೇರಿದ ಶ್ರೀಗಳು ಕ್ರಿಯಾಶೀಲರಾಗಿ ಶ್ರೀಮಠದ ಸರ್ವಾಂಗೀಣಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಹಾಗೂ ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆಮಾಡಿ ಸುಮಾರು1500ಕ್ಕೂ ಅಧಿಕ ಜನರನ್ನು ಕುಡಿತದ ದಾಸತ್ವದಿಂದ ಹೊರತಂದ ಮಹತ್ಸಾಧನೆ ಶ್ರೀಗಳದ್ದು.ಹೀಗೆ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕವಾಗಿಯೂ ಕಾರ್ಯತತ್ಪರರಾಗಿರುವ ಶ್ರೀಗಳುಭಕ್ತರ ಏಳಿಗೆಗೆ ಶ್ರಮಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-06-1949
Place :
ಕಸಬಾಜಂಬಗಿ, ರಾಮದುರ್ಗ ತಾ||
Pattadikara :
12-05-1995
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ
ದೀಪಾವಳಿ ಪಾಡ್ಯಕ್ಕೆ ಶ್ರೀ ಮಠದ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಹಿರೇಮಠ
ಮುಳ್ಳೂರು - 591 126
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ

Map

Near by Places

ಹುಲಿಕಟ್ಟಿ - 12 ಕಿ.ಮೀ.
ರಾಮದುರ್ಗ - 10 ಕಿ.ಮೀ.
ಬೆಳಗಾಂ - 100 ಕಿ.ಮೀ

Statistic

3 Views
0 Rating
0 Favorite
0 Share
error: Content is protected !!