Shree Hirematha (Kalmatha)

Shree Hirematha (Kalmatha) Claimed

ಶ್ರೀ ಹಿರೇಮಠ (ಕಲ್ಮಠ)

Average Reviews

Description

ಶ್ರೀ ಹಿರೇಮಠ (ಕಲ್ಮಠ)

ಕರ್ತೃ ಪೂಜ್ಯ ಶ್ರೀ ಅನ್ನವೀರಯ್ಯ ಮಹಾಸ್ವಾಮಿಗಳು

ಬಾಗಲಕೋಟೆ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ಬೀಳಗಿ ಪಟ್ಟಣದಹೊರಬಾಗದಲ್ಲಿ ಪೂಜ್ಯ ಶ್ರೀ ಅನ್ನವೀರಯ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಪುರಾತನ ಪರಂಪರೆಯಿಂದ ಹಾಗೂ ಧಾರ್ಮಿಕಆಚರಣೆಗಳಿಂದ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀ ಅನ್ನವೀರಯ್ಯ ಸ್ವಾಮಿಗಳು ಸಂಚಾರದಲ್ಲಿದ್ದಾಗ ಬೀಳಗಿ ಪಟ್ಟಣಕ್ಕೆ ಬಂದುಇಲ್ಲಿನ ಭಕ್ತರ ಸಹಕಾರ ಪಡೆದು ಶ್ರೀಮಠವನ್ನು ಸ್ಥಾಪಿಸಿದರು. ಶ್ರೀಗಳು ಧರ್ಮನಿಷ್ಠರಾಗಿದ್ದುತಮ್ಮ ಆಧ್ಯಾತ್ಮಿಕ ಜೀವನದಿಂದ ಸಿದ್ಧಿಯನ್ನು ಪಡೆದು ಭಕ್ತರನ್ನು ಉದ್ಧರಿಸಿದ್ದಾರೆ. ಹಾಗೂಮಠವನ್ನು ಆರ್ಥಿಕವಾಗಿ ಸದೃಡಗೊಳಿಸಿದ್ದಾರೆಂದು ತಿಳಿದು ಬರುತ್ತದೆ.ಶ್ರೀಗಳು ಶಿವಪೂಜಾನಿಷ್ಠರಾಗಿ ಭಕ್ತರಿಗೆ ಸನ್ಮಾರ್ಗ ತೋರುತ್ತಾ ತಮ್ಮಅನುಷ್ಠಾನಬಲದಿಂದ ಶ್ರೀಮಠವನ್ನು ಮುನ್ನಡೆಸಿದ್ದು ಯೋಗಕ್ಕೂ ಪ್ರಾಮುಖ್ಯತೆ ನೀಡಿಜನರಿಗೆ ಅದರ ಉಪಯೋಗಗಳನ್ನು ಸರಳೀಕರಣಗೊಳಿಸಿದ್ದಾರೆ. ಶ್ರೀಗಳ ನಂತರ ಸುಮಾರು9 ಜನ ಗುರುಗಳು ಅಧಿಕಾರಕ್ಕೆ ಬಂದಿರಬಹುದೆಂದು ಹೇಳಲಾಗಿದ್ದು ಎಲ್ಲಾ ಗುರುಗಳುಧರ್ಮನಿಷ್ಠರಾಗಿ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.ಪರಂಪರೆಯಲ್ಲಿ ಬರುವ ಗುರುಗಳಾದ ಶ್ರೀ ಗುರುಪಾದ ಶಿವಾಚಾರ್ಯಸ್ವಾಮಿಗಳು ತಮ್ಮ ಪಾಂಡಿತ್ಯದಿಂದ ಹಾಗೂ ವಿಚಾರವಂತಿಕೆಯಿಂದ ಹೆಚ್ಚು ಪ್ರಸಿದ್ಧರಾಗಿದ್ದರುಇವರು ಕಾಶಿಯಲ್ಲಿ ಸಂಸ್ಕøತವನ್ನು ಅಭ್ಯಸಿಸಿ ಧಾರ್ಮಿಕತೆ ಹಾಗೂ ಆಧ್ಯಾತ್ಮಿಕತೆಯ ಅಪಾರಪಾಡಿತ್ಯವನ್ನು ಹೊಂದಿದ ವಿದ್ವಾಸರೆನಿಸಿದ್ದರು. ಇವರ ನಂತರ ಬಂದ ಶ್ರೀ ಶಿವಬಸವಶಿವಚಾರ್ಯ ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕಆಚರಣೆಗಳೊಂದಿಗೆ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿದ್ದರು. ಶ್ರೀಗಳು ಪ್ರಸ್ತುತಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಅಧಿಕಾರವನ್ನು ಹೊಂದಿದ್ದಾರೆ.ಪ್ರಸ್ತುತ ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿ ಶ್ರೀ ಗುರುಪಾದ ದೇವರನ್ನುನೇಮಕ ಮಾಡಲಾಗಿದ್ದು ಶ್ರೀಗಳು ಉನ್ನತ ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದು ವಿದ್ಯಾಭ್ಯಾಸಪೂರ್ಣಗೊಳಿಸಿ ಬಂದ ನಂತರ ಪಟ್ಟಾಧಿಕಾರವನ್ನು ಸ್ವೀಕರಿಸಲಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಗುರುಪಾದ ದೇವರು
Date of Birth :
15-6-1988
Place :
ಬೀಳಗಿ, ಬೀಳಗಿ ತಾ||
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಮಾರ್ಗಶಿರ ಶುದ್ಧ ಚತುರ್ದಶಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ,
ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಶ್ರೀ ಹಿರೇಮಠ (ಕಲ್ಮಠ)

Photos

Full Address Kannada

ಶ್ರೀ ಹಿರೇಮಠ (ಕಲ್ಮಠ)
ಬೀಳಗಿ - 587 116
ಬೀಳಗಿ ತಾ||, ಬಾಗಲಕೋಟೆ ಜಿ||

Map

Near by Places

ಗದ್ದನಕೇರಿ - 20 ಕಿ.ಮೀ
ಬಾಗಲಕೋಟೆ - 25 ಕಿ.ಮೀ.
ಮುಧೋಳ - 30 ಕಿ.ಮೀ.
ಜಮಖಂಡಿ - 55 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!