ಕರ್ತೃ – ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಕಲಕೇರಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯಸ್ವಾಮಿಗಳಿಂದ 13ನೇ ಶತಮಾನದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳˉÁಗಿರುವ ಶ್ರೀಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿಪ್ರಸಿದ್ಧಿಗೆ ಬಂದಿದೆ. ಶ್ರೀ ಹಿರೇಮಠವು ಶ್ರೀಮದ್ ಉಜ್ಜಯಿನಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳುಸಂಚಾರ ಮಾಡುತ್ತಾ ಧರ್ಮ ಪ್ರಸಾರವನ್ನು ಕೈಗೊಂಡು ಕಲಕೇರಿ ಗ್ರಾಮಕ್ಕೆ ಆಗಮಿಸಿ ಇಲ್ಲಿನೆˉÉಗೊಂಡಿದ್ದಾರೆ. ಶ್ರೀಗಳು ವೀರಶೈವ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದು ಶ್ರೀಮಠವನ್ನುಸ್ಥಾಪಿಸಿದ ನಂತರ ವೀರಶೈವ ಧರ್ಮವನ್ನು ಪ್ರಬಲವಾಗಿ ಬೆಳೆಸಿ ಮುಂಚೂಣಿಗೆ ತಂದಿದ್ದಾರೆ.ಕರ್ತೃಗುರುಗಳ ನಂತರ ಬಂದ ಎˉÁ್ಲ ಗುರುಗಳೂ ತಮ್ಮ ಪಾಂಡಿತ್ಯದಿಂದಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದು ಭಕ್ತರನ್ನುದ್ದರಿಸಿದ್ದಾರೆ. ಶ್ರೀಮಠದ ಪರಂಪರೆಯ 5ನೇಗುರುಗಳಾದ ಶ್ರೀ ಷ.ಬ್ರ. ಮರುಳಸಿದ್ದ ಶಿವಾಚಾರ್ಯರು ಮಹಾಶಿವಶರಣ ಅರಳಗುಂಡಿಗೆಶ್ರೀ ಶರಣ ಬಸವೇಶ್ವರರ ಗುರುಗಳಾಗಿ ಅವರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡಿ ನಾಡಿಗೆಕೊಡುಗೆಯಾಗಿ ನೀಡಿರುವುದು ಗಮನಾರ್ಹ ಸಂಗತಿ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳು 1926ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳೊಂದಿಗೆ ಶ್ರೀಮಠವನ್ನುಅಭಿವೃದ್ಧಿಪಡಿಸಿದ್ದಾರೆ. ಶ್ರೀಗಳು ಶಿವಪೂಜಾನಿಷ್ಠರಾಗಿ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಾ ವೀರಶೈವ ಧರ್ಮಾಚರಣೆಗಳ ಅರಿವು ಮೂಡಿಸುತ್ತಾ ಶ್ರೀಮಠವನ್ನು ಮುನ್ನಡೆಸಿಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಕಗೊಂಡು ಪರಂಪರೆಯ ಗುರುಗಳ ಹಾದಿಯಲ್ಲಿ ಶ್ರೀಮಠವನ್ನು ಮುನ್ನಡೆಸಿದ್ದು 2005 ರಲ್ಲಿ ಪಟ್ಟಾಧಿಕಾರ ಸ್ವೀಕರಿಸಿದ್ದಾರೆ. ಶ್ರೀಗಳು ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಶ್ರೀಮಠದಲ್ಲಿ ಪಾಲ್ಗುಣ ಮಾಸದ ಬಹುಳ ಷಷ್ಠಿಗೆಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆಯನ್ನು ನಡೆಸುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1980
Place :
ಕಲಕೇರಿ, ಸಿಂಧಗಿ ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಧಾರ್ಮಿಕ ಆಚರಣೆಗಳು.
ಪಾಲ್ಗುಣ ಮಾಸದ ಬಹುಳ ಷಷ್ಠಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
Photos
Full Address Kannada
ಶ್ರೀ ಹಿರೇಮಠ ಕಲಕೇರಿ - 586 118
ಸಿಂಧಗಿ ತಾ||, ವಿಜಯಪುರ ಜಿ||