Shree Hirematha – Doddavada

Shree Hirematha – Doddavada Claimed

ಶ್ರೀ ಹಿರೇಮಠ - ದೊಡ್ಡವಾಡ

Average Reviews

Description

ಶ್ರೀ ಹಿರೇಮಠ – ದೊಡ್ಡವಾಡ

ಕರ್ತೃ – ಪೂಜ್ಯ ಶ್ರೀ ಜಡೆ ಸಿದ್ದೇಶ್ವರ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ದೊಡ್ಡವಾಡ ಗ್ರಾಮವು ತಾಲ್ಲೂಕುಕೇಂದ್ರದಿಂದ 21 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಶ್ರೀ ಷ.ಬ್ರ.ಜಡೆಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡ ಪುರಾತನಪರಂಪರೆಯ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಪ್ರಚಲಿತದಲ್ಲಿದೆ.ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿರುವ ಶ್ರೀ ಹಿರೇಮಠವು ಪುರಾತನ ಕಾಲದ್ದಾದರೂ ಪೂರ್ವೇತಿಹಾಸದಬಗೆಗಿನ ಆಧಾರಗಳ ಕೊರತೆಯಿಂದ ಪರಂಪರೆಯ ಬಗ್ಗೆ ನಿಖರವಾಗಿ ಹೇಳಲುಸಾಧ್ಯವಾಗುವುದಿಲ್ಲ. ಕರ್ತೃಗುರುಗಳಾದ ಶ್ರೀ ಜಡೆಸಿದ್ದೇಶ್ವರ ಶಿವಾಚಾರ್ಯರು ಕಾಶಿಯಿಂದರಾಚೋಟಿಗೆ ಬಂದು ನಂತರ ಅಲ್ಲಿಂದ ಸಂಚಾರ ಹೊರಟು ದೊಡ್ಡವಾಡ ಗ್ರಾಮಕ್ಕೆ ಆಗಮಿಸಿಶ್ರೀ ಹಿರೇಮಠವನ್ನು ಸ್ಥಾಪಿಸಿದರೆಂದು ಹೇಳಲಾಗಿದೆ. ಆದರೆ ಆನಂತರದ ಶ್ರೀಮಠದಪರಂಪರೆ ಹಾಗೂ ಇತಿಹಾಸದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀಮಠದ ಪರಂಪರೆಯಲ್ಲಿ ಕಂಡುಬರುವ ಶ್ರೀ ಗುರುಸಿದ್ದೇಶ ್ವರಮಹಾಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ. ಷ.ಬ್ರ. ಅಡವೇಶ್ವರ ಮಹಾಸ್ವಾಮಿಗಳುಹೊರತಾಗಿ ಉಳಿದ ಶ್ರೀಗಳ ಕುರಿತು ಮಾಹಿತಿಗಳು ಲಭ್ಯವಿಲ್ಲ. ಬಹುಶಃ ಶ್ರೀಮಠವು ಆಗಾಗ್ಗೆದೀರ್ಘಕಾಲ ಖಾಲಿ ಉಳಿದಂತೆ ತೋರುತ್ತದೆ. ಹಿಂದಿನ ಶ್ರೀಗಳಾದ ಶ್ರೀ ಅಡವೇಶ್ವರಮಹಾಸ್ವಾಮಿಗಳ ನಂತರವು ಶ್ರೀಮಠವು ಸುಮಾರು 40 ವರ್ಷಗಳ ಕಾಲ ಖಾಲಿಉಳಿದಿರುವುದು ಕಂಡುಬರುತ್ತದೆ.ಪ್ರಸ್ತುತ ಶ್ರೀಗಳಾದ ಶ್ರೀ. ಷ.ಬ್ರ. ಜಡೆಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು1998ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ದೀರ್ಘಕಾಲದಿಂದ ಖಾಲಿ ಉಳಿದಿದ್ದಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಾಶಿ ಹಾಗೂ ಶಿವಯೋಗಮಂದಿರಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಶ್ರೀಗಳು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ಸನ್ಮಾರ್ಗದಲ್ಲಿಕೊಂಡೊಯ್ಯುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಫೆಬ್ರವರಿ 10ರಂದು ಪ್ರಸ್ತುತ ಶ್ರೀಗಳವರ್ಧಂತಿ ಮಹೋತ್ಸವ ಹಾಗೂ ಹಿರಿಯ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಜಡೆಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-01-1966
Place :
ದೊಡ್ಡವಾಡ, ಬೈಲಹೊಂಗಲ ತಾ||
Pattadikara :
10-02-1998
Photo :

Programs

ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಕಾರ್ತಿಕ ಮಾಸದಲ್ಲಿ ಶ್ರೀ ಮಾಬಳೇಶ್ವರ ದೇವಾಲಯದಲ್ಲಿ ಶ್ರೀಗಳ ಸಮ್ಮುಖದಲ್ಲಿ ಕಾರ್ತಿಕೋತ್ಸವ ¥ತಿÀ್ರ ವರ್ಷ ಫೆಬ್ರವರಿ 10ರಂದು ಶ್ರೀಗಳ ವರ್ದಂತಿ ಮಹೋತ್ಸವ ಹಾಗೂ ಹಿರಿಯ ಗುರುಗಳ ಸ್ಮರಣೆ

Photos

Full Address Kannada

ಶ್ರೀ ಹಿರೇಮಠ
ದೊಡ್ಡವಾಡ - 591 104
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ

Map

Near by Places

ಬೈಲಹೊಂಗಲ 21 ಕಿ.ಮೀ. ಕಿತ್ತೂರು 20 ಕಿ.ಮೀ. ಧಾರವಾಡ 32 ಕಿ.ಮೀ. ಬೆಳಗಾವಿ 65 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!