Shree Hirematha (Charanti Matha), Korahalli

Shree Hirematha (Charanti Matha), Korahalli Claimed

ಶ್ರೀ ಹಿರೇಮಠ (ಚರಂತಿ ಮಠ), ಕೋರಹಳ್ಳಿ

Average Reviews

Description

ಶ್ರೀ ಹಿರೇಮಠ (ಚರಂತಿ ಮಠ), ಕೋರಹಳ್ಳಿ

ಕರ್ತೃ – ಶ್ರೀ ಷ.ಬ್ರ. ಶಬ್ದಮುನಿ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿˉÉ್ಲ ಸಿಂಧಗಿ ತಾಲ್ಲೂಕಿನ ಕೋರಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದಲ್ಲಿ ಪುರಾತನ ಕಾಲದ ಮೂರುವೀರಶೈವ ಮಠಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಒಂದಾದ ಶ್ರೀ ಚರಂತಿಮಠವು ಶ್ರೀ ಷ.ಬ್ರ.ಶಬ್ದಮುನಿ ಶಿವಾಚಾರ್ಯರಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿದೆ ಎಂದುಹೇಳˉÁಗುತ್ತದೆ. ಈ ಗ್ರಾಮವು ಪುರಾತನ ವೀರಶೈವ ಧರ್ಮ ಕೇಂದ್ರಗಳಲ್ಲಿ ಒಂದಾಗಿದ್ದುವೀರಶೈವ ಧರ್ಮದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದೆ.ಶ್ರೀ ಚರಂತಿ ಮಠಕ್ಕೆ ಶ್ರೀ ಶಬ್ದಸ್ವಾಮಿ ಚರಂತಿಮಠವೆಂದು ಕೂಡ ಕರೆಯˉÁಗುತ್ತಿದ್ದು, ಶ್ರೀಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠದ ಕರ್ತೃಗುರುಗಳ ಬಗ್ಗೆಯಾಗಲೀ ಹಾಗೂಅವರ ನಂತರ ಅಧಿಕಾರ ನಡೆಸಿರುವ ಶ್ರೀಗಳ ಬಗ್ಗೆಯಾಗಲೀ ಹೆಚ್ಚಿನ ಮಾಹಿತಿದೊರೆಯುವುದಿಲ್ಲ. ಇದಕ್ಕೆ ಕಾರಣ ಬಹುಶಃ ಶ್ರೀಮಠವು ಅರ್ಧ ಶತಮಾನಕ್ಕೂ ಅಧಿಕ ಕಾಲಪೀಠಾಧಿಕಾರಿಗಳಿಲ್ಲದೇ ಖಾಲಿ ಉಳಿದಿರುವುದು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯಸ್ವಾಮಿಗಳು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಧಾರ್ಮಿಕ ಆಚರಣೆಗಳನ್ನುನಡೆಸಿಕೊಂಡು ಬಂದು ಮಠವನ್ನು ಬೆಳೆಸಿದ್ದರು. ಶ್ರೀಗಳು ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಮುನ್ನಡೆಸುತ್ತಾ 1935 ರಲ್ಲಿ ಲಿಂಗೈಕ್ಯರಾಗಿದ್ದಾರೆ. ಮುಂದೆ ಅರ್ಧ ಶತಮಾನಕ್ಕೂಅಧಿಕಕಾಲ ಶ್ರೀಮಠವು ಖಾಲಿ ಉಳಿದಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಹಿಂದಿನಶ್ರೀಗಳ ಹೆಸರನ್ನೇ ಅಭಿದಾನ ಪಡೆದು ಅಧಿಕಾರಕ್ಕೆ ಬಂದಿದ್ದು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದಾರೆ ಹಾಗೂ ಶ್ರೀಮಠದ ಅಭಿವೃದ್ಧಿಗೆ ಯೋಜನೆರೂಪಿಸಿಕೊಂಡು ಶ್ರಮಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠದ ಆವರಣದಲ್ಲಿರುವ ಗದ್ದುಗೆಗಳನ್ನು ನವೀಕರಣಗೊಳಿಸುವವ್ಯವಸ್ಥೆ ಮಾಡುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳು
Date of Birth :
16-5-1977
Place :
ಕೋರಹಳ್ಳಿ, ಸಿಂಧಗಿ ತಾ||
Pattadikara :
16-5-2002
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ.
ಛಟ್ಟಿ ಅಮವಾಸ್ಯೆ ನಂತರ 7ನೇ ದಿನಕ್ಕೆ ಶ್ರೀ ವೀರಭದ್ರೇಶ್ವರ ಜಾತ್ರೆ.
ಚೌತಿ ಅಮವಾಸ್ಯೆಗೆ ಲಿಂ. ಶ್ರೀ ಷ.ಬ್ರ. ಶಾಂತವೀರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ (ಚರಂತಿ ಮಠ)
ಕೋರಹಳ್ಳಿ - 586 202
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ಅಲಮೇಲು - 6 ಕಿ.ಮೀ.
ಸಿಂಧಗಿ - 20 ಕಿ.ಮೀ.
ವಿಜಯಪುರ - 75 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!