Shree Hirematha, Banahatti

Shree Hirematha, Banahatti Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ಬನಹಟ್ಟಿ

ಕರ್ತೃ : ಶ್ರೀ ಷ.ಬ್ರ. ಗಡದಪ್ಪ ಶಿವಾಚಾರ್ಯ ಸ್ವಾಮಿಗಳು

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಗ್ರಾಮದ ಮಧ್ಯಭಾಗ ದಲ್ಲಿ ಶ್ರೀ ಷ.ಬ್ರ. ಗಡದಪ್ಪ ಶಿವಾಚಾರ್ಯ ಸ್ವಾಮಿಗಳಿಂದ ಸುಮಾರು 18ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.

ಕರ್ತೃಗುರುಗಳಾದ ಶ್ರೀ ಗಡದಪ್ಪ ಸ್ವಾಮಿಗಳು ಮಹಾತಪಸ್ವಿಗಳು, ಸಿದ್ಧಿಪುರುಷರು ಆಗಿದ್ದರು. ಶ್ರೀಗಳು ತಪಸ್ಸಿಗೆ ಕುಳಿತರೆ ಅವರ ಗಡ್ಡವು ಭೂಮಿಯನ್ನು ತಾಕಿ ಉದ್ದವಾಗಿ ಬೆಳೆÀಯುತ್ತಿತ್ತೆಂದೂ ಅವರಿಗೆ ಅದಾವುದರ ಪರಿವೆ ಇರುತ್ತಿರಲಿಲ್ಲವಾದ್ದರಿಂದ ಅವರಿಗೆ ಶ್ರೀ ಗಡದಪ್ಪನವರು ಎಂಬ ಹೆಸರು ಬಂದಿದೆಯೆಂದು ಈಗಿನ ಶ್ರೀಗಳು ಅಭಿಪ್ರಾಯಿಸುತ್ತಾರೆ.

ಕರ್ತೃಗುರುಗಳ ತರುವಾಯ ಶ್ರೀ ನೀಲಕಂಠ ಶಿವಾಚಾರ್ಯರು ನಂತರ ಶ್ರೀ ಪವಾಡಯ್ಯ ಶಿವಾಚಾರ್ಯರು ಅಧಿಕಾರ ನಡೆಸಿದ್ದಾರೆ. ಆನಂತರ ಹಿಂದಿನ ಶ್ರೀಗಳಾದ ಶ್ರೀ ಶಾಂತವೀರ ಶಿವಾಚಾರ್ಯರು ತಮ್ಮ 12ನೇ ವಯಸ್ಸಿಗೆ ಶ್ರೀಮಠದ ಪಟ್ಟಕ್ಕೆ ಬಂದರು. ನಂತರದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಾಧನೆಯನ್ನು ಕೈಗೊಂಡು ಸಿದ್ಧಿಪಡೆದು ಮಠದ

ಜವಾಬ್ದಾರಿಯನ್ನು ಪೂರ್ಣವಾಗಿ ವಹಿಸಿಕೊಂಡರು. ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು, ಶ್ರೀಮಠದಲ್ಲಿ

ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಆಗಿನ ಮರಾಠಿ ಪ್ರಾಬಲ್ಯದಲ್ಲಿಯೂ ಶಿಕ್ಷಣ ಪ್ರೇಮಿಗಳ ಜೊತೆಗೂಡಿ ಅಂದಿನ ದೊರೆಗಳ ಮನವೊಲಿಸಿ, ಜಮಖಂಡಿಯಲ್ಲಿ ಕನ್ನಡ ಮಾಧ್ಯಮದ “ಜನತಾ ಶಿಕ್ಷಣ ಸಂಸ್ಥೆ”ಯ ಪ್ರಾರಂಭಕ್ಕೆ ಕಾರಣ

ರಾದರು. ಹಾಗೂ ಮುನಿಸಿಪಾಲಿಟಿಯ ಸದಸ್ಯರಾಗಿಯೂ ಸಾಮಾಜಿಕ ಸೇವೆ ಸಲ್ಲಿಸಿದರು. ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶರಣಬಸವ ಶಿವಾಚಾರ್ಯರು 1981ರ ಅಕ್ಟೋಬರ್ 20ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು, ಶ್ರೀಮಠವನ್ನು ಧಾರ್ಮಿಕ

ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅಭಿವೃದ್ಧಿಗೊಳಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಕಾರ್ತೀಕ ಮಾಸದಲ್ಲಿ ಐದು ದಿನಗಳ ಕಾಲ ಲಿಂ. ಶ್ರೀ ಶಾಂತವೀರ ಶಿವಾಚಾರ್ಯರ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಶರಣಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
10-5-1960
Place :
ಬನಹಟ್ಟಿ, ಜಮಖಂಡಿ ತಾ||
Pattadikara :
20-10-1981
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಕಾರದ ಹುಣ್ಣಿಮೆಗೆ ಶ್ರೀ ಹನುಮಾನ್ ಜಾತ್ರೆ. ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ,
ಗಣೇಶ ಪೂಜೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು.

Institutions

ಪ್ರೌಢ ಶಾಲೆ ಪದವಿ ಪೂರ್ವ ಕಾಲೇಜು
ಡಿ.ಎಡ್., ಕಾಲೇಜು ಪ್ಯಾರಾ ಮೆಡಿಕಲ್ ಕಾಲೇಜು

Photos

Full Address Kannada

ಶ್ರೀ ಹಿರೇಮಠ ಬನಹಟ್ಟಿ - 587 311 ಜಮಖಂಡಿ ತಾ||, ಬಾಗಲಕೋಟೆ ಜಿ||

Map

Near by Places

ತೇರದಾಳ - 5 ಕಿ.ಮೀ.
ರಬಕವಿ - 6 ಕಿ.ಮೀ.
ಜಮಖಂಡಿ - 25 ಕಿ.ಮೀ.
ಬಾಗಲಕೋಟ್ - 100 ಕಿ.ಮೀ.

Statistic

144 Views
0 Rating
0 Favorite
0 Share
error: Content is protected !!