Shree Hirematha, Babanagara

Shree Hirematha, Babanagara Claimed

ಶ್ರೀ ಹಿರೇಮಠ, ಬಾಬಾನಗರ

Average Reviews

Description

ಶ್ರೀ ಹಿರೇಮಠ, ಬಾಬಾನಗರ

ಶ್ರೀ ಷ.ಬ್ರ. ಷಣ್ಮುಖ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿಲ್ಲೆಯ ಬಾಬಾನಗರ ಗ್ರಾಮವು ಜಿಲ್ಲೆ ಕೇಂದ್ರದಿಂದ 27 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು ಒಂದು ಶತಮಾನದ ಹಿಂದೆ ಸ್ಥಾಪಿತಗೊಂಡಿರಬಹುದಾದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ. ಶ್ರೀ ಹಿರೇಮಠವು ಶ್ರೀಮದ್ಉಜ್ಜಯಿನಿ ಪೀಠದ ಶಾಖಾ ಮಠವಾಗಿ ಬೆಳೆದು ಬಂದಿದೆ.ಶ್ರೀ ಮಠದ ಕರ್ತೃಗುರುಗಳು ಯಾರು, ಶ್ರೀ ಮಠದ ನಿರ್ದಿಷ್ಟ ಕಾಲಮಾನಯಾವುದು, ಎಷ್ಟು ಜನ ಶ್ರೀಗಳು ಆಡಳಿತ ನಡೆಸಿದ್ದಾರೆ ಎಂಬುದರ ನಿಖರ ಮಾಹಿತಿದೊರೆಯದ ಕಾರಣ ಶ್ರೀಮಠದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ. ಶ್ರೀಮಠದಲ್ಲಿ ಎರಡುಗದ್ದುಗೆಗಳು ಸ್ಥಾಪನೆಯಾಗಿದ್ದು ಬಹುಶಃ ಈಗಿನ ಶ್ರೀಗಳು ಮೂರನೇ ಶ್ರೀಗಳಾಗಿರಬಹುದು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಷಣ್ಮುಖಯ್ಯ ಶಿವಾಚಾರ್ಯ ಸ್ವಾಮಿಗಳು ಇದೇಬಾಬಾನಗರದ ಗ್ರಾಮದವರಾಗಿದ್ದು ಶ್ರೀ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡುಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಿದ್ದು ಗ್ರಾಮದ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸˉÁಗುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಷಣ್ಮುಖ ಶಿವಾಚಾರ್ಯ ಸ್ವಾಮಿಗಳು
Date of Birth :
1942
Place :
ಬಾಬಾ ನಗರ, ಬಿಜಾಪುರ ತಾ||
Photo :

Programs

ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ
ಬಾಬಾ ನಗರ - 586 114
ವಿಜಯಪುರ ತಾ|| ಜಿ||

Map

Near by Places

ವಿಜಯಪುರ - 27 ಕಿ.ಮೀ.
ಅಥಣಿ - 55 ಕಿ.ಮೀ.
ಮಹಾರಾಷ್ಟ್ರ ಗಡಿ - 15 ಕಿ.ಮೀ.

Statistic

121 Views
0 Rating
0 Favorite
0 Share
error: Content is protected !!