ಕರ್ತೃ – ಶ್ರೀ ಷ.ಬ್ರ. ದೊಡ್ಡಪ್ಪಯ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮುರುಗೋಡ ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಕಸಬಾಗಲ್ಲಿಯಲ್ಲಿ ಪುರಾತನ ಕಾಲದಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ಶ್ರೀ.ಷ.ಬ್ರ. ದೊಡ್ಡಪ್ಪಯ್ಯ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠದ ಸ್ಥಾಪಕರೆಂದು ಹೇಳಲಾಗಿದೆ. ಶ್ರೀಮಠವು ಶ್ರೀಮದ್ ಉಜ್ಜಯಿನಿ ಪೀಠದಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ದೊಡ್ಡಪ್ಪಯ್ಯ ಶಿವಾಚಾರ್ಯರು ಮಹಾತಪಸ್ವಿಗಳಾಗಿದ್ದುಲೋಕಸಂಚಾರ ಮಾಡುತ್ತಾ ಮುರುಗೋಡಿನಲ್ಲಿ ನೆಲೆಗೊಂಡು ಶ್ರೀಮಠವನ್ನು ಸ್ಥಾಪಿಸಿದ್ದಾರೆಎನ್ನಲಾಗಿದೆ. ತದನಂತರ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಮಲ್ಲೇಶ್ವರ ಶಿವಾಚಾರ್ಯಮಹಾಸ್ವಾಮಿಗಳು 19ನೇ ಶತಮಾನದಲ್ಲಿ ಜೀವಿಸಿದವರಾಗಿದ್ದು ರಾಜ್ಯದಲ್ಲಿ ಬರಗಾಲಬಂದಾಗ ತಮ್ಮ ಅನುಷ್ಠಾನದಿಂದ ಮಳೆಯನ್ನು ತರಿಸಿದರಂತೆ. ಆಗ ಸವಣೂರಿನ ನವಾಬನುಗುರುಗಳ ತಪಶ್ಶಕ್ತಿಗೆ ಬೆರಗಾಗಿ ಅವರನ್ನು ಗೌರವಿಸಿ “ಶ್ರೀ ಮಳೆಮಲ್ಲೇಶ್ವರ” ರೆಂದು ಬಿರುದುನೀಡಿ ಮಠದ ಧಾರ್ಮಿಕ ಕಾರ್ಯಗಳಿಗೆ ನೆರವಾಗಲು ಭೂಮಿಯನ್ನು ಉಂಬಳಿಯನ್ನಾಗಿನೀಡಿದನು ಎನ್ನಲಾಗಿದೆ.ಶ್ರೀ ಮಳೆ ಮಲ್ಲೇಶ್ವರರ ನಂತರ ಶ್ರೀಮಠದ ಪಟ್ಟವನ್ನು ವಹಿಸಿಕೊಂಡವರು ಶ್ರೀಷ.ಬ್ರ. ಶಿವಲಿಂಗ ಶಿವಾಚಾರ್ಯರು. ಇವರು 1922ರಲ್ಲಿ ಲಿಂಗೈಕ್ಯರಾದ ನಂತರ ಶ್ರೀಚನ್ನಬಸವ ಶಿವಾಚಾರ್ಯರು ಪೀಠಾರೋಹಣ ಮಾಡಿದರು. ಆದರೆ ನಂತರ ಪೀಠತ್ಯಾಗಮಾಡಿ ಗೃಹಸ್ಥಾಶ್ರಮ ಸ್ವೀಕರಿಸಿದ್ದರಿಂದ ಶ್ರೀಮಠವು ಬಹುಕಾಲ ಖಾಲಿ ಉಳಿಯಿತು.ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು 1945ರಲ್ಲಿಜನಿಸಿದವರಾಗಿದ್ದು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದು ತದನಂತರಶಿವಯೋಗಮಂದಿರದಲ್ಲಿ ಸಂಸ್ಕøತ, ವೇದಾಧ್ಯಯನ, ಯೋಗಾಭ್ಯಾಸ ಮಾಡಿದರು.ತರುವಾಯ ಗದಗದ ತೋಂಟದಾರ್ಯ ಮಠ, ಬೆಂಗಳೂರು ಹಾಗೂ ಕಾಶಿಯಲ್ಲಿಅಧ್ಯಯನ ಮಾಡಿ ಶ್ರೀಮಠಕ್ಕೆ ಮರಳಿದರು. ಶ್ರೀಗಳು ತಮ್ಮ ವಿದ್ವತ್ಪೂರ್ಣ ಪ್ರತಿಭೆಯಿಂದಮಠವನ್ನು ಮುನ್ನಡೆಸಿದ್ದು ಭಕ್ತರ ಸಹಕಾರದೊಂದಿಗೆ ಅಭಿವೃದ್ದಿಪಥದಲ್ಲಿ ಬೆಳೆಯುವಂತೆಮಾಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು
Date of Birth :
17-07-1945
Place :
ಮುರುಗೋಡ, ಸವದತ್ತಿ ತಾ||
Pattadikara :
1957
Photo :
Programs
ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರೀರಾಮ ನವಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Photos
Full Address Kannada
ಶ್ರೀ ಹಿರೇಮಠ ಕಸಬಾಗಲ್ಲಿ,
ಮುರುಗೋಡ - 591 119
ಸವದತ್ತಿ ತಾ||, ಬೆಳಗಾವಿ ಜಿಲ್ಲೆ