Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ, ಇಂಗಳಗಿ

ಕರ್ತೃ – ಪೂಜ್ಯ ಶ್ರೀ ಕಾಡ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು

ಇಂಗಳಗಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಕಾಡಸಿದ್ದೇಶ್ವರ ಶಿವಾಚಾರ್ಯರಿಂದಸ್ಥಾಪಿತಗೊಂಡಿರುವ ರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀ ಹಿರೇಮಠವು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಶ್ರೀ ಹಿರೇಮಠದ ಮೂಲಮಠವು ಮೊದಲು ಮೆಟಗಲ್ಲು ಗ್ರಾಮದಲ್ಲಿಅಸ್ತಿತ್ವದಲ್ಲಿತ್ತು ಎಂದು ತಿಳಿದು ಬರುತ್ತದೆ. ಅಲ್ಲಿನ ಪರಂಪರೆಯ ಗುರುಗಳಾದ ಶ್ರೀಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಲೋಕಸಂಚಾರ ಕೈಗೊಂಡು ಇಂಗಳಗಿಗೆ ಬಂದುನೆಲೆಸಿ ಶ್ರೀ ಮಠವನ್ನು ಸ್ಥಾಪನೆ ಮಾಡಿ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಆದರೆ ಮೆಟಗಲ್ಲಿನ ಮೂಲ ಮಠದ ಪರಂಪರೆಯ ಬಗ್ಗೆ ಮಾಹಿತಿಗಳುದೊರೆಯುವುದಿಲ್ಲ.ಶ್ರೀ ಕಾಡಸಿದ್ದೇಶ್ವರರು ಸದಾ ಸಂಚಾರದಲ್ಲಿರುತ್ತಾ ಅಲ್ಲಲ್ಲೇ ಅನುಷ್ಠಾನಗೊಂಡುಭಕ್ತರಿಗೆ ವೀರಶೈವ ಧರ್ಮದ ಆಚರಣೆಗಳ ಮಹತ್ವದ ಬಗ್ಗೆ ವಿವರಿಸುತ್ತಾ ವೀರಶೈವಧರ್ಮದ ಪ್ರಸರಣ ಕಾರ್ಯವನ್ನು ಕೈಗೊಂಡಿದ್ದರು. ಶಿವಪೂಜಾನಿಷ್ಠರಾಗಿದ್ದ ಶ್ರೀಗಳುತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಇಂಗಳಗಿ ಹಾಗೂ ಸುತ್ತಮುತ್ತಲಿನಲ್ಲಿ ಧಾರ್ಮಿಕವಾತಾವರಣ ನೆಲೆಗೊಳಿಸಿ 1961ರಲ್ಲಿ ಲಿಂಗೈಕ್ಯರಾದರು.ಶ್ರೀ ಕಾಡಸಿದ್ದೇಶ್ವರರು ಲಿಂಗೈಕ್ಯರಾದ ನಂತರ ಶ್ರೀಮಠವು 28 ವರ್ಷಗಳ ಕಾಲಖಾಲಿ ಉಳಿದಿದ್ದು ಮಠದ ವಂಶಸ್ಥರೇ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊಂಡುಬರುತ್ತಿದ್ದರು. ಪ್ರಸ್ತುತ 1989ರ ಜನವರಿ 1 ರಂದು ಈಗಿನ ಶ್ರೀಗಳಾದ ಶ್ರೀ ರೇವಣಸಿದ್ದಶಿವಾಚಾರ್ಯ ಸ್ವಾಮಿಗಳು ಶ್ರೀಮಠಕ್ಕೆ ಪಟ್ಟಾಧಿಕಾರ ಹೊಂದಿ ಹೆಚ್ಚು ಕಾಲ ಖಾಲಿ ಉಳಿದಿದ್ದಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.ಶ್ರೀಗಳು ಮುರುಗೋಡದಲ್ಲಿ ಸಂಸ್ಕøತ ವಿದ್ಯಾಭ್ಯಾಸವನ್ನು ಪಡೆದವರಾಗಿದ್ದುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಗೆ ಪ್ರಮುಖವಾಗಿ ಸೀಗೆ ಹುಣ್ಣಿಮೆಯಲ್ಲಿ ಲಿಂ.ಶ್ರೀ ಷ.ಬ್ರ. ಕಾಡಸಿದ್ದೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಿವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು
Date of Birth :
1957
Place :
ಇಂಗಳಗಿ, ಮುಧೋಳ ತಾ||
Pattadikara :
1-1-1989
Photo :

Programs

ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಸೀಗೆ ಹುಣ್ಣಿಮೆಗೆ ಲಿಂ. ಶ್ರೀ ಷ.ಬ್ರ. ಕಾಡ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಕಾರ್ಯಕ್ರಮಗಳು.

Full Address Kannada

ಶ್ರೀ ಹಿರೇಮಠ ಇಂಗಳಗಿ - 587 313 ಮುಧೋಳ ತಾ||, ಬಾಗಲಕೋಟೆ ಜಿ||

Map

Near by Places

ಇಂಗಳಗಿ ಕ್ರಾಸ್ - 1 ಕಿ.ಮೀ.
ಗದ್ದನಕೇರಿ ಕ್ರಾಸ್ - 36 ಕಿ.ಮೀ.
ಮುಧೋಳ - 9 ಕಿ.ಮೀ.
ಬಾಗಲಕೋಟೆ - 43 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!