ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲ್ಲೂಕಿನ ತೇರದಾಳ ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹಿರೇಮಠ ಗಲ್ಲಿಯಲ್ಲಿಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ಶ್ರೀ ರಂಭಾಪುರಿಶಾಖಾ ಮಠವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ.ಶ್ರೀ ಮಠವು ಪುರತಾನ ಕಾಲದ್ದೆಂದು ಹೇಳಲಾದರೂ ಮಠದ ಕಾಲಮಾನದಬಗ್ಗೆಯಾಗಲೀ, ಕರ್ತೃಗುರುಗಳ ಬಗ್ಗೆಯಾಗಲೀ, ನಂತರದ ಪರಂಪರೆಯ ಬಗ್ಗೆಯಾಗಲೀತಿಳಿದು ಬರುವುದಿಲ್ಲ. ಆದರೂ ಶ್ರೀ ಮಠದಲ್ಲಿ ಸಿಗುವ ಅಲ್ಪ ಮಾಹಿತಿಯ ಆಧಾರದ ಮೇಲೆಹೇಳುವುದಾದರೆ ಶ್ರೀಮಠದ ಪರಂಪರೆಯಲ್ಲಿ ಇದುವರೆಗೂ 12 ಜನ ಸ್ವಾಮಿಗಳು ಅಧಿಕಾರಕ್ಕೆಬಂದು ಶ್ರೀಮಠವನ್ನು ಮುನ್ನಡೆಸಿರಬಹುದೆಂದು ಅಂದಾಜಿಸಬಹುದು. ಆದರೆ ಅವರಗದ್ದುಗೆಗಳು ಎಲ್ಲಿ ಸ್ಥಾಪನೆಯಾಗಿವೆ ಎಂಬುದರ ಮಾಹಿತಿ ಲಭ್ಯವಿಲ್ಲ.
ಶ್ರೀಮಠದ ಪರಂಪರೆಯ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದಕ್ಕೆ ಮುಖ್ಯ ಕಾರಣಶ್ರೀಮಠವು ಬಹುಕಾಲ ಖಾಲಿ ಉಳಿದಿರುವುದು. ಪರಂಪರೆಯಲ್ಲಿ ಬರುವ ಗುರುಗಳ ಪೈಕಿ1960ರಲ್ಲಿ ಲಿಂಗೈಕ್ಯರಾದರೆಂದು ಹೇಳಲಾದ ಶ್ರೀ ಗಂಗಾಧರ ಸ್ವಾಮಿಗಳ ಬಗ್ಗೆ ತಿಳಿದುಬರುತ್ತದೆ. ಇವರು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಾ ಶ್ರೀ ಮಠವನ್ನು ಮುನ್ನಡೆಸಿದ್ದರು. ಶ್ರೀಗಳು ಶಿವಪೂಜಾನಿಷ್ಠರಾಗಿತಮ್ಮ ಉಪದೇಶಗಳಿಂದಾಗಿ ಭಕ್ತರ ಮನಗಳಲ್ಲಿ ಉಳಿದುಕೊಂಡು ಬಂದಿದ್ದಾರೆ.ಶ್ರೀ ಗಂಗಾಧರ ಶಿವಾಚಾರ್ಯರ ನಂತರ ಶ್ರೀ ಶಿವಶಂಕರಯ್ಯ ಸ್ವಾಮಿಗಳುಅಧಿಕಾರಕ್ಕೆ ಬಂದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದಾರೆ.ಆದರೆ ಇವರ ಬಗ್ಗೆ ಹೆಚ್ಚಿಗೆ ತಿಳಿಯುವುದಿಲ್ಲ. ಈಗ 2000ದ ಇಸವಿಯಲ್ಲಿ ಶ್ರೀಮಠಕ್ಕೆಉತ ್ತರಾಧಿಕಾರಿಗಳಾಗಿ ನಿಯುಕ್ತಿಗೊಂಡಿರುವ ಶ್ರೀ ಬಾಲಗಂಗಾzs Àರ ದೇವರುವಿದ್ಯಾಭ್ಯಾಸದಲ್ಲಿ ನಿರತರಾಗಿದ್ದು ತಮ್ಮ ವಿದ್ಯಾರ್ಜನೆ ಪೂರ್ಣಗೊಂಡ ನಂತರ ಶ್ರೀಮಠಕ್ಕೆಮರಳಿ ಪಟ್ಟಾಧಿಕಾರ ಸ್ವೀಕರಿಸಲಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಬಾಲಗಂಗಾಧರ ದೇವರು
Date of Birth :
30-7-1993
Place :
ಸಾವಳಗಿ, ಜಮಖಂಡಿ ತಾ||
Photo :
Programs
ಪ್ರತಿ ಅಮವಾಸ್ಯೆ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಯುಗಾದಿ ಪಾಡ್ಯ ಆದ ಮರುದಿನ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಜುಲೈ ತಿಂಗಳಲ್ಲಿ ಲಿಂ. ಪೂಜ್ಯ ಶ್ರೀ ಶಿವಶಂಕರಯ್ಯ ಸ್ವಾಮಿಗಳ ಪುಣ್ಯಾರಾಧನೆ.